ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ನೇಮಕಾತಿ; ಅಮೃತ್ ಪೌಲ್ ಬಂಧನ, ಎಡಿಜಿಪಿ ಕಚೇರಿ ಅಲ್ಮೇರ ರಹಸ್ಯ!

|
Google Oneindia Kannada News

ಬೆಂಗಳೂರು, ಜುಲೈ05: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್‌ರನ್ನು ನಿಜಕ್ಕೂ ಬಂಧಿಸಲಾಗುತ್ತದೆಯೇ? ಎಂಬ ಅನುಮಾನಗಳು ತನಿಖೆ ವೇಳೆಯಲ್ಲಿ ಮೂಡಿತ್ತು. ಆದರೆ ಸಿಐಡಿ ತನಿಖೆಯಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗಿತ್ತು. ಇದರ ಆಧಾರದ ಮೇಲೆಯೇ ಐಪಿಎಸ್ ಅಧಿಕಾರಿ ಬಂಧನವಾಗಿದೆ.

ಅಮೃತ್ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ತಮ್ಮ ಕಚೇರಿ ಕೆಲವು ಸೀಕ್ರೆಟ್‌ಗಳು ಅಮೃತ್ ಪೌಲ್‌ರವರಿಗೆ ಬಿಟ್ಟರೇ ಬೇರೆಯವರಿಗೆ ತಿಳಿಯಬಾರದಿತ್ತು. ಆದರೆ ಅಕ್ರಮವನ್ನು ಮಾಡುವ ಉದ್ದೇಶದಿಂದಲೇ ಕೆಲವು ರಹಸ್ಯದ ವಿಚಾರ, ಕೀಗಳನ್ನು ಆಪ್ತರಾಗಿದ್ದ ಡಿವೈಎಸ್ಪಿ, ಕಚೇರಿಯ ಕರ್ತವ್ಯ ನಿರ್ವಹಿಸುತ್ತಿದ್ದ ಹರ್ಷ ನಡುವೆ ಹಂಚಿಕೊಳ್ಳಲಾಗಿತ್ತು. ಈ ಮಾಹಿತಿಯ ಆಧಾರದ ಮೇಲೆಯೇ ಎಡಿಜಿಪಿ ಅಮೃತ್ ಪೌಲ್‌ರನ್ನು ಬಂಧಿಸಲಾಗಿದೆ.

ಪಿಎಸ್ಐ ನೇಮಕಾತಿ ಹಗರಣ: ADGP ಬಂಧಿಸಿದ ಸಿಐಡಿ ತನಿಖೆಯ ಇನ್‌ಸೈಡ್ ರಿಪೋರ್ಟ್ ಪಿಎಸ್ಐ ನೇಮಕಾತಿ ಹಗರಣ: ADGP ಬಂಧಿಸಿದ ಸಿಐಡಿ ತನಿಖೆಯ ಇನ್‌ಸೈಡ್ ರಿಪೋರ್ಟ್

ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು. ಸಿಐಡಿ ಡಿಜಿ ಸಂಧುರಿಂದ ನಡೆದ ವಿಚಾರಣೆ ವೇಳೆ ರಹಸ್ಯ ಬಯಲಾಗಿತ್ತು. ಕೇವಲ ಸಿಸಿಟಿವಿ ಮತ್ತು ಸಂಪರ್ಕ ಹಾಗೂ ಹಣ ವರ್ಗಾವಣೆಯಿಂದ ಅಧಿಕಾರಿ ಸಿಕ್ಕಿಹಾಕಿಕೊಂಡಿಲ್ಲ. ಬದಲಿಗೆ ಪಕ್ಕಾ ತಾಂತ್ರಿಕ ಸಾಕ್ಷ್ಯಗಳ ಸಮೇತ ಲಾಕ್ ಮಾಡಲಾಗಿದೆ.

ಕೀಯನ್ನು ಬಳಸುತ್ತಿದ್ದ ಕಚೇರಿ ಅಧಿಕಾರಿಗಳು

ಕೀಯನ್ನು ಬಳಸುತ್ತಿದ್ದ ಕಚೇರಿ ಅಧಿಕಾರಿಗಳು

ಎಡಿಜಿಪಿ ಅಮೃತ್ ಪೌಲ್ ಬಂಧನದ ಹಿಂದೆ ಅಲ್ನೇರಾ ರಹಸ್ಯವಿದೆ. ಅಲ್ಮೇರಾದೊಳಗಿದ್ದ ಕೀ ಜಾಲದಿಂದಲೇ ಹಿರಿಯ ಅಧಿಕಾರಿ ಬಂಧನವಾಗಿದೆ. ಸರ್ವೆ ಸಾಮಾನ್ಯವಾಗಿ ಅಮೃತ್ ಪಾಲ್ ಛೇಂಬರ್‌ನಲ್ಲಿ ಯಾರಿಗೂ ಪ್ರವೇಶವಿಲ್ಲ. ಅನುಮತಿ ಪಡೆದೇ ಒಳಗೆ ಹೋಗಬೇಕಿತ್ತು. ಸ್ಟ್ರಾಂಗ್ ರೂಂನಲ್ಲಿದ್ದ ಎಲ್ಲಾ ಟ್ರಂಕ್‌ಗಳಿಗೆ ಸ್ವತ: ಬೀಗ ಹಾಕಿ ಅದನ್ನ ತನ್ನ ಛೇಂಬರ್‌ನ ಅಲ್ಮೇರಾದಲ್ಲಿಡಬೇಕಿತ್ತು. ಆದರೆ ತನ್ನ ಛೇಂಬರ್‌ನಲ್ಲಿ ಎಲ್ಲರಿಗೂ ಅವಕಾಶ ನೀಡಿದ್ದ ಅಮೃತ್ ಪೌಲ್. ಅಲ್ಮೇರಾವನ್ನು ತನ್ನ ಡಿವೈಎಸ್‌ಪಿ ಮತ್ತು ಎಫ್‌ಡಿಎ ಹರ್ಷನಿಗೆ ವಹಿಸಿದ್ದರು. ಇದು ಅಕ್ರಮವನ್ನು ಎಸಗಲು ಕಾರಣವಾಗಿತ್ತು.

ಥಮ್ ಇಂಪ್ರೇಷನ್ ರಹಸ್ಯವೂ ಬಯಲು

ಥಮ್ ಇಂಪ್ರೇಷನ್ ರಹಸ್ಯವೂ ಬಯಲು

ಸ್ಟ್ರಾಂಗ್ ರೂಮ್ ಓಪನ್ ಮಾಡಬೇಕಾದರೆ ಖುದ್ದು ನೇಮಕಾತಿ ವಿಭಾಗದ ಮುಖ್ಯಸ್ಥರೇ ಹೋಗಬೇಕಿತ್ತು. ಆದರೆ ಕಚೇರಿಗೆ ಅಮೃತ್ ಪೌಲ್ ಆಗಮಿಸುತ್ತಿದ್ದದ್ದು ತೀರಾ ಕಡಿಮೆ. ಇದೇ ಸಮಯದಲ್ಲಿ ಛೇಂಬರ್ ಮತ್ತು ಸ್ಟ್ರಾಂಗ್ ರೂಮ್ ನಲ್ಲಿ ಡಿವೈಎಸ್‌ಪಿ ಶಾಂತ್ ಕುಮಾರ್, ಹರ್ಷ ದರ್ಬಾರ್ ನಡೆಸುತ್ತಿದ್ದರು. ಕೇವಲ ಅಲ್ಮೇರಾ ರಹಸ್ಯ ಒಂದೇ ಅಲ್ಲಾ ಥಮ್ ರಹಸ್ಯವೂ ಬಯಲಾಗಿದೆ. ಸ್ಟ್ರಾಂಗ್ ರೂಮ್‌ಗೆ ಅಮೃತ್ ಪೌಲ್ ಗೆ ಮಾತ್ರ ಥಮ್ ಇಂಪ್ರೆಷನ್ ಇರಬೇಕಿತ್ತು. ಅಮೃತ್ ಪೌಲ್ ಥಮ್ ಮಾಡಿದರೇ ಮಾತ್ರ ಸ್ಟ್ರಾಂಗ್ ರೂಮ್ ಓಪನ್ ಆಗುವುದು ಸಾಧ್ಯವಾಗುತ್ತಿತ್ತು. ಆದರೆ ಅಕ್ರಮ ನಡೆಸಲು ಅನುಕೂಲವಾಗುವ ದೃಷ್ಟಿಯಿಂದಲೇ ನಾಲ್ವರಿಗೆ ಥಮ್ ಇಂಪ್ರೆಷನ್ ಮಾಡಿಸಲಾಗಿತ್ತು.

ಸ್ಟ್ರಾಂಗ್ ರೂಮ್‌ನಲ್ಲಿ ನಡೆದಿದ್ದೇನು?

ಸ್ಟ್ರಾಂಗ್ ರೂಮ್‌ನಲ್ಲಿ ನಡೆದಿದ್ದೇನು?

ಅಮೃತ್ ಪೌಲ್ ಡಿವೈಎಸ್ ಪಿ ಶಾಂತ್ ಕುಮಾರ್, ಹರ್ಷ, ಆರ್‌ಎಸ್ಐ ಮತ್ತು ಓರ್ವ ಸಿಬ್ಬಂದಿಗೆ ಥಮ್ ಇಂಪ್ರೆಷನ್ ಅನುಮತಿಯನ್ನು ನೀಡಿದ್ದರು. ಸ್ಟ್ರಾಂಗ್‌ರೂಮ್‌ನಲ್ಲಿ ಬಂಧಿತರು ಓಎಮ್‌ಆರ್ ಶೀಟ್ ತಿದ್ದುಪಡಿಗೆ ಮುಂಜಾನೆ ಮತ್ತು ರಾತ್ರಿ ವೇಳೆ ಸಮಯಯವೇ ನಿಗದಿ ಮಾಡುತ್ತಿದ್ದರು. ಈ ವೇಳೆಯಲ್ಲಿ ಸಿಸಿಟಿಯನ್ನು ಆಫ್ ಮಾಡಿ ಕಾರ್ಯಚರಣೆಯನ್ನು ಮಾಡಿ ಉತ್ತರ ಪತ್ರಿಯನ್ನು ತಿದ್ದುಪಡಿ ಮಾಡು ಕಾರ್ಯವನ್ನು ಆರೋಪಿಗಳು ಮಾಡಿಸುತ್ತಿದ್ದರು.

ಡಿಜಿಪಿ ಸಂಧು ನಿರ್ದೇಶನದ ಮೇಲೆ ಅರೆಸ್ಟ್

ಡಿಜಿಪಿ ಸಂಧು ನಿರ್ದೇಶನದ ಮೇಲೆ ಅರೆಸ್ಟ್

ಸ್ಟ್ರಾಂಗ್ ರೂಮ್ ತೆರೆದಿದ್ದ ವೇಳೆಯಲ್ಲಿನ ಫೋನ್ ಸಂಪರ್ಕದ ಕಾಲ್ ಡೀಟೆಲ್ಸ್ ಮತ್ತು ವಾಟ್ಸ್ ಅಪ್ ಕಾಲ್ ಮತ್ತು ಸಂದೇಶಗಳನ್ನ ಪತ್ತೆ ಮಾಡಿದ್ದ ಸಿಐಡಿ ಅಧಿಕಾರಿಗಳು. ಈ ಟೆಕ್ನಿಕಲ್ ಎವಿಡೆನ್ಸ್ ಜೊತೆ ಬಂಧಿತ ಆರೋಪಿಗಳೂ ಸಹ ಅಮೃತ್ ಪೌಲ್ ಬಗ್ಗೆ ಹೇಳಿಕೆನ್ನು ನೀಡಿದ್ದರು. ಈ ಎಲ್ಲಾ ಟೆಕ್ನಿಕಲ್ ಮತ್ತು ಆರೋಪಿಗಳ ಸಾಕ್ಷ್ಯಾಧಾರಗಳನ್ನ ಪರಿಗಣಿಸಿ ಅಮೃತ್ ಪಾಲ್ ಬಂಧನ ಮಾಡಲಾಗಿದೆ. ಖುದ್ದು ಡಿಜಿ ಸಂಧು ಅರೆಸ್ಟ್ ಮಾಡಿ ಎಂದು ಸಿಐಡಿ ಟೀಂಗೆ ಸೂಚಿಸಿದ್ದರಿಂದಲೇ ಅಮೃತ್ ಪೌಲ್ ಬಂಧನವಾಗಿದೆ.

English summary
CID police which probing PSI recruitment scam arrested ADGP Amrit Paul. CID arrested with appropriate evidence. On what basis IPS officer arrested. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X