ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರದಿಂದ ಸಂಕ್ರಾಂತಿ ಉಡುಗೊರೆ

|
Google Oneindia Kannada News

ಬೆಂಗಳೂರು, ಜನವರಿ 15: ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಂಕ್ರಾಂತಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. 80 ವರ್ಷ ದಾಟಿದ ಹಿರಿಯ ಮಾಜಿ ರಾಜ್ಯ ಸರ್ಕಾರಿ ನೌಕರರಿಗೆ ಹೆಚ್ಚುವರಿ ಪಿಂಚಣಿಗೆ ಆದೇಶ ನೀಡಲಾಗಿದೆ.

ನಿವೃತ್ತಿ ವೇತನ ಪಡೆಯುವವರಿಗೆ ಸರ್ಕಾರದಿಂದ ಶುಭ ಸುದ್ದಿ! ನಿವೃತ್ತಿ ವೇತನ ಪಡೆಯುವವರಿಗೆ ಸರ್ಕಾರದಿಂದ ಶುಭ ಸುದ್ದಿ!

ರಾಜ್ಯ ಸರ್ಕಾರ ನೌಕರಿ ಮಾಡಿ ನಿವೃತ್ತಿ ಆಗಿ ಈಗ 80ಕ್ಕೂ ಹೆಚ್ಚು ವಯಸ್ಸಾಗಿರುವ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ನೀಡಲು ಆದೇಶ ನೀಡಲಾಗಿದ್ದು, ಈ ಆದೇಶವು ಜನವರಿ 1 ರಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಬಿಎಸ್ಎನ್ಎಲ್ ಸಿಬ್ಬಂದಿಗೆ ಸಿಹಿಸುದ್ದಿ ನೀಡಲಿದೆ ಮೋದಿ ಸರ್ಕಾರ್!ಬಿಎಸ್ಎನ್ಎಲ್ ಸಿಬ್ಬಂದಿಗೆ ಸಿಹಿಸುದ್ದಿ ನೀಡಲಿದೆ ಮೋದಿ ಸರ್ಕಾರ್!

80ಕ್ಕಿಂತ ಹೆಚ್ಚು85ರ ವಯಸ್ಸಿನ ಒಳಗಿರುವ ಪಿಂಚಣಿದಾರರು ಮೂಲವೇತನಕ್ಕಿಂತ 20% ಹೆಚ್ಚಿನ ಪಿಂಚಣಿಯನ್ನು ಜನವರಿ 1 ರಿಂದ ಪಡೆಯಲಿದ್ದಾರೆ. 85 ಕ್ಕಿಂತ ಮೇಲ್ಪಟ್ಟು 90 ವರ್ಷದ ಒಳಗಿನ ಪಿಂಚಣಿದಾರರು 30% ಹೆಚ್ಚಿನ ಪಿಂಚಣಿ ಪಡೆಯಲಿದ್ದಾರೆ. 90-95 ವಯಸ್ಸಿನ ಪಿಂಚಣಿದಾರರು 40% ಹೆಚ್ಚು ಪಿಂಚಣಿ ಪಡೆದರೆ, 95-100 ವಯಸ್ಸಿನ ಪಿಂಚಣಿದಾರರು 50% ಹೆಚ್ಚುವರಿ ಪಿಂಚಣಿ ಪಡೆಯಲಿದ್ದಾರೆ.

additional pension was ordered for senior state government employees over 80 years

ರಾಜ್ಯ ಸರ್ಕಾರವು ಈ ಆದೇಶ ಹೊರಡಿಸಿದ್ದು, ಪಿಂಚಣಿದಾರರಿಗೆ ಹೆಚ್ಚಿನ ಲಾಭ ಇದರಿಂದ ಆಗಲಿದೆ. ವಯಸ್ಸಾದವರ ಆರೋಗ್ಯ ಮತ್ತು ಅವರ ಸೌಕರ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ.

English summary
The retired state government provides a sweet news for the workers. An additional pension was ordered for senior state government ex employees over 80 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X