ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ಸಂಜನಾ ಮನವಿಗೆ ಸ್ಪಂದಿಸುವರೇ ಮೋದಿ?

|
Google Oneindia Kannada News

ಬೆಂಗಳೂರು, ಜು 26: ದೇಶಾದ್ಯಂತ ಅವ್ಯಾಹತವಾಗಿ ಮುಂದುವರಿಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ಲೇಟಾದರೂ ಲೇಟೆಸ್ಟಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಗೂ ಮನವಿ ಮಾಡಿದ್ದಾರೆ.

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತಹ ಕಾನೂನು ನಮ್ಮ ದೇಶದಲ್ಲಿ ಯಾಕೆ ಜಾರಿಗೆ ತರಲು ಸಾಧ್ಯವಿಲ್ಲ? ಈ ರೀತಿಯ ಕಾನೂನು ಜಾರಿಗೆ ಬಂದರೆ ಮಾತ್ರ ಕಾಮುಕರು ಪಾಠ ಕಲಿಯುವುದು ಎಂದು ಸಂಜನಾ ಟ್ವೀಟ್ ಮಾಡಿದ್ದಾರೆ.

ನನ್ನ ದೇಶದ ಬಗ್ಗೆ ನನಗೆ ಹೆಮ್ಮೆಯಿದೆ. ಕಾಮುಕರು ಬುದ್ದಿ ಕಲಿಯುವಂತಹ ಕಾನೂನು ನಮ್ಮಲ್ಲಿ ಇಲ್ಲದಿದ್ದರೆ ಹೊರ ದೇಶದಲ್ಲಿ ನಮ್ಮ ದೇಶವನ್ನು ಹೇಗೆ ಸಮರ್ಥಿಸಿಕೊಳ್ಳುವುದು ಎಂದು ಸಂಜನಾ ಬೇಸರ ವ್ಯಕ್ತ ಪಡಿಸಿದ್ದಾರೆ.

ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ವಿಚಾರದಲ್ಲಿ ಆರೋಪ, ಪ್ರತ್ಯಾರೋಪ ಮಾಡುತ್ತಿರುವುದು ಮನಸ್ಸಿಗೆ ಬೇಸರ ತರುವ ಸಂಗತಿ ಎಂದು ಸಂಜನಾ ಟ್ವೀಟ್ ಮೂಲಕ ನೋವು ವ್ಯಕ್ತ ಪಡಿಸಿದ್ದಾರೆ.

ನರೇಂದ್ರ ಮೋದಿಗೆ ಟ್ವೀಟ್ ಸಂದೇಶ ಕಳುಹಿಸಿದ ಸಂಜನಾ. ಮುಂದೆ ಓದಿ..

ದೆಹಲಿಯ ನಿರ್ಭಯ ಪ್ರಕರಣ

ದೆಹಲಿಯ ನಿರ್ಭಯ ಪ್ರಕರಣ

ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ನಮ್ಮ ಕಾನೂನು ಗಟ್ಟಿಯಾಗ ಬೇಕಿತ್ತು. ಪ್ರತೀ ದಿನ ಅತ್ಯಾಚಾರ ನಡೆಯುತ್ತಿರ ಬೇಕಾದರೆ ಜನತೆ ರಸ್ತೆಗಿಳಿದಿರುವುದಲ್ಲಿ ಯಾವ ತಪ್ಪಿದೆ ಎಂದು ಸಂಜನಾ ಪ್ರಶ್ನಿಸಿದ್ದಾರೆ.

ಬಾಲ ಕಾರ್ಮಿಕರು

ಬಾಲ ಕಾರ್ಮಿಕರು

ಬ್ರಿಗೇಡ್ ರಸ್ತೆ ಮುಂತಾದೆಡೆ ಮಕ್ಕಳು, ಮಕ್ಕಳನ್ನು ಬಳಸಿಕೊಂಡು ತಾಯಂದಿರು ಭಿಕ್ಷೆ ಬೇಡುವುದನ್ನು ನೋಡಿದರೆ ನೋವಾಗುತ್ತದೆ. ಬಾಲ ಕಾರ್ಮಿಕರಿಗೆ ಮತ್ತು ಮಕ್ಕಳು ಭಿಕ್ಷೆ ಬೇಡುವುದನ್ನು ನಿಷೇಧಿಸಬೇಕು ಎಂದು ಸಂಜನಾ ಟ್ವೀಟ್ ಮಾಡಿದ್ದಾರೆ.

ಮೋದಿಗೆ ಟ್ವೀಟ್ ಮಾಡಿದ ಸಂಜನಾ

ನರೇಂದ್ರ ಮೋದಿ ಸರ್ ಟ್ವಿಟರ್ ಮೂಲಕ ಮಾತ್ರ ನಾನು ನಿಮ್ಮನ್ನು ಸಂಪರ್ಕಿಸ ಬಹುದು ಮತ್ತು ನನ್ನ ನೋವನ್ನು ನಿಮಗೆ ತಿಳಿಸಬಹುದು ಎಂದು ಸಂಜನಾ ಪ್ರಧಾನಿ ಮೋದಿಗೆ ಸಂಜನಾ ಟ್ವೀಟ್ ಮಾಡಿದ್ದಾರೆ.

ನನ್ನ ಟ್ವೀಟಿಗೆ ಉತ್ತರಿಸಿ

ನಾನೊಬ್ಬ ಸಾಮಾನ್ಯ ಪ್ರಜೆ ಎನ್ನುವುದು ನನಗೆ ಅರಿತಿದೆ. ಆದರೂ, ನನ್ನ ಟ್ವೀಟಿಗೆ ನೀವು ಉತ್ತರಿಸಬಹುದೆಂದು ಕಾಯುತ್ತಿದ್ದೇನೆ. ಅತ್ಯಾಚಾರ ಎನ್ನುವ ಪಿಡುಗು ಶಮನಕ್ಕೆ ನೀವು ದಿಟ್ಟ ಹೆಜ್ಜೆ ಇಡಿ ಎನ್ನುವುದು ನನ್ನ ಕೋರಿಕೆ ಎಂದು ಸಂಜನಾ ಟ್ವೀಟ್ ಮಾಡಿದ್ದಾರೆ.

ಮೋದಿ ಉತ್ತರಿಸುವರೇ?

ಮೋದಿ ಉತ್ತರಿಸುವರೇ?

ಪ್ರಧಾನಿ ಮೋದಿ ಸಂಜನಾ ಪ್ರಶ್ನೆಗೆ ಉತ್ತರಿಸುವರೇ? ಕಾಮುಕರನ್ನು ಮಟ್ಟ ಹಾಕಲು ಮೋದಿ ಸೂಕ್ತ ಹೆಜ್ಜೆ ಇಡಲಿದ್ದಾರೆಯೇ ಎನ್ನುವುದನ್ನು ಕಾಲವೇ ನಿರ್ಣಯಿಸಬೇಕು.

English summary
Kannada actress Sanjjanaa tweet request to Prime Minister Narendra Modi on rape and child labor issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X