ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಬಂದ ಜಗ್ಗೇಶ್‌, ಕಾರಣ ಏನು?

|
Google Oneindia Kannada News

Recommended Video

ನಟ ಜಗ್ಗೇಶ್ ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಕ್ಕೆ | FILMIBEAT KANNADA

ಬೆಂಗಳೂರು, ನವೆಂಬರ್ 30: ಡಬ್ಬಿಂಗ್ ಸಿನಿಮಾ ಬಿಡುಗಡೆ ವಿರೋಧಿ ಹೋರಾಟದಿಂದ ನಟ ಜಗ್ಗೇಶ್‌ ಅವರು ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪತ್ರ ಬರೆದಿರುವ ಅವರು, 'ಡಬ್ಬಿಂಗ್ ಹೋರಾಟಕ್ಕೂ ನನಗೂ ಇನ್ನು ಮುಂದೆ ಸಂಭಂದವಿಲ್ಲ' ಎಂದು ಬರೆದುಕೊಂಡಿದ್ದಾರೆ. ಕನ್ನಡಿಗರು ಅವರಿಗೆ ಇಷ್ಟವಾದುದನ್ನು ಪಡೆಯಬಹುದು ಎಂದು ಸಹ ಅವರು ಹೇಳಿದ್ದಾರೆ.

'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ

ಜಗ್ಗೇಶ್‌ ಅವರು ಡಬ್ಬಿಂಗ್ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದ ಬಳಿಕ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಡಬ್ಬಿಂಗ್ ಪರ ನೆಟ್ಟಿಗರು ಪ್ರಶ್ನೆ ಮಾಡಿದ್ದರು, ಹಾಗಾಗಿ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Actor Jaggesh out from anti dubbing movement

ಈ ಹಿಂದೆ ಡಬ್ಬಿಂಗ್ ವಿರೋಧಿ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಕ್ಷಮೆಯನ್ನೂ ಜಗ್ಗೇಶ್‌ ಕೇಳಿದ್ದಾರೆ. 'ಸಂವಿಧಾನವೇ ಡಬ್ಬಿಂಗ್‌ಗೆ ಒಪ್ಪಿಗೆ ನೀಡಿದ ಮೇಲೆ ನನ್ನದೇನೂ ಇಲ್ಲ' ಎಂದು ಅವರು ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್‌ ಅವರು ಡಬ್ಬಿಂಗ್‌ ಹೋರಾಟದಿಂದ ಹಿಂದೆ ಉಳಿಯುವ ಮೂಲಕ ಡಬ್ಬಿಂಗ್‌ ವಿರೋಧಿ ಧ್ವನಿಯಗಳಿಗೆ ಅಲ್ಪ ಹಿನ್ನಡೆ ಆಗಲಿದೆ. ಚಿತ್ರರಂಗದ ಹಲವು ಗಣ್ಯರು ಡಬ್ಬಿಂಗ್‌ಗೆ ವಿರೋಧವಾಗಿದ್ದಾರೆ. ಆದರೂ ಆಗೊಮ್ಮೆ-ಈಗೊಮ್ಮೆ ಡಬ್ಬಿಂಗ್‌ ಸಿನಿಮಾಗಳು ಬಿಡುಗಡೆ ಆಗುತ್ತಲೇ ಇವೆ.

English summary
Actor and politician is out from anti dubbing movement. He wrote letter in twitter and said he keeping distance from dubbing protest. He said 'constitution allows dubbing then what should we do'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X