ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಲಾ' ವಿವಾದ: ರಾಜಕೀಯಕ್ಕೆ ಸಿನಿಮಾ ಬಲಿಯಾಗಬಾರದು ಎಂದ ರಮೇಶ್!

By Yashaswini
|
Google Oneindia Kannada News

ಮೈಸೂರು, ಜೂನ್ 1 : ''ರಾಜಕೀಯಕ್ಕಾಗಿ ಸಿನಿಮಾ ಬಲಿಯಾಗಬಾರದು ಹಾಗೆಂದ ಮಾತ್ರಕ್ಕೆ ನಾನು ಪ್ರಕಾಶ್ ರೈ ಹೇಳಿಕೆ ಸಮರ್ಥಿಸಿಕೊಳ್ಳುತ್ತಿಲ್ಲ'' ಎಂದಿದ್ದಾರೆ ನಟ ರಮೇಶ್ ಅರವಿಂದ್.

ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ರಸ್ತೆಯಲ್ಲಿರುವ ಕೃಷ್ಣ ಪ್ರಸಾದ್ ರೆಸಿಡೆನ್ಸ್ ನಲ್ಲಿ ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಈ ವೇಳೆ ಪತ್ರಕರ್ತರ ಜೊತೆ 'ಕಾಲಾ' ಚಿತ್ರದ ವಿವಾದದ ಕುರಿತು ಮಾತನಾಡಿದ ನಟ, ನಿರ್ದೇಶಕ ರಮೇಶ್ ಅರವಿಂದ್, ''ರಾಜಕೀಯಕ್ಕಾಗಿ ಸಿನಿಮಾ ಬಲಿಯಾಗಬಾರದು. ಸಿನಿಮಾಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ನಾನು ಪ್ರಕಾಶ್ ರೈ ರವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅದು ಸಮಂಜಸವಲ್ಲವಾದದ್ದು ಅಂತಲೂ ಹೇಳುತ್ತಿಲ್ಲ'' ಎಂದರು.

Actor, Director Ramesh Aravind reacts about Kaala release controversy in Karnataka

ರಜನಿ-ಪ್ರಕಾಶ್ ರೈಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಚಂದ್ರು

''ಇದೊಂದು ಭಾವನಾತ್ಮಕ ವಿಷಯ. ನಾನು ಇದನ್ನು ಮಾತನಾಡುವಷ್ಟು ದೊಡ್ಡವನಲ್ಲ. 'ಕಾಲಾ' ಚಿತ್ರದ ಹಿಂದೆ ಕಾವೇರಿ ವಿಷಯ ಕೂಡ ಅಡಗಿದೆ. ನಾನು ನೀಡುವ ಉತ್ತರವೇ ಸರಿ ಎಂದು ಹೇಳಲು ಸಾಧ್ಯವಿಲ್ಲ''

'ಕಾಲಾ' ನಿಷೇಧಿಸಲು ದೇವೇಗೌಡರು ಬಿಡುವುದಿಲ್ಲ ಎಂದ ರಜನಿಕಾಂತ್

''ನನಗೆ ಕೇವಲ ಒಂದು ಆಂಗಲ್ ಮಾತ್ರ ಗೊತ್ತು. ಆದರೆ ಮತ್ತೊಂದು ಆಂಗಲ್ ಗೊತ್ತಿಲ್ಲ. ಇದು ನೂರಾರು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷ. ಈ ಕುರಿತು ಈ ಸಂದರ್ಭದಲ್ಲಿ ನಾನು ಮಾತನಾಡುವುದು ಸಮಂಜಸವಲ್ಲ''

'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್

''ಈ ತರಹದ ವಿಷಯಗಳನ್ನು ಭಾವನಾತ್ಮಕವಾಗಿ ಮಾತನಾಡಲು ಸಾಧ್ಯವಿಲ್ಲ. ಕಾನೂನು ಮೂಲಕವೂ ಸಾಧ್ಯವಿಲ್ಲ. ಇದು ಇಂಡಿಯಾ - ಪಾಕಿಸ್ತಾನದ ವಿಷಯವಲ್ಲ. ಕರ್ನಾಟಕ - ತಮಿಳುನಾಡಿನ ವಿಷಯವೂ ಅಲ್ಲ. ತಮಿಳುನಾಡಿನ ಒಳಗೆ ಕರ್ನಾಟಕ, ಕರ್ನಾಟಕದ ಒಳಗೆ ತಮಿಳುನಾಡಿನ ಬಾಂಧವ್ಯದ ವಿಷಯ ಇದಾಗಿದೆ. ನೂರು ವರ್ಷ ಬಗೆ ಹರಿಯದ ಸಮಸ್ಯೆಯನ್ನು, ಮತ್ತೆ ನೂರು ವರ್ಷ ಬಗೆ ಹರಿಯದ ಸಮಸ್ಯೆಯನ್ನಾಗಿ ಎಳೆಯಬಾರದು. ಹೇಗಾದರೂ ಸರಿಯೇ ಅದಕ್ಕೆ ಪರಿಹಾರಕ್ಕೆ ಮುಂದಾಗಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ಕ್ರಮಕ್ಕೂ ನಾವು ಸಿದ್ಧರಿರಬೇಕು. ಅದು ಎರಡೂ ಕಡೆಯವರಿಗೂ ಕೂಡ ಹೇಳುವ ವಿಷಯ ಎಂದು ತಮ್ಮ ಅಭಿಪ್ರಾಯವನ್ನ ರಮೇಶ್ ಅರವಿಂದ್ ವ್ಯಕ್ತಪಡಿಸಿದರು.

English summary
Kannada Actor, Director Ramesh Aravind reacts about Kaala release controversy in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X