ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಂದಲ ಬೇಡ, ದರ್ಶನ್ ಗೆ ನೀಡಿದ್ದು ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21 : ನಟ ದರ್ಶನ್ ಲಂಡನ್ ಗೆ ತೆರಳಿರುವುದು ಅಲ್ಲಿನ ಕನ್ನಡಿಗರ ಆಹ್ವಾನದ ಮೇರೆಗೆ. ಇನ್ನು ಅವರಿಗೆ ನೀಡಿದ್ದು ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ. ಬ್ರಿಟನ್ ಸಂಸತ್ತು ನೀಡುವ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಗೂ ದರ್ಶನ್ ಅವರಿಗೆ ನೀಡಿದ ಪ್ರಶಸ್ತಿಗೂ ಯಾವ ಸಂಬಂಧವೂ ಇಲ್ಲ ಅನ್ನೋದನ್ನು ಮತ್ತೆ ಸುದ್ದಿ ಮಾಡಬೇಕಿದೆ.

ದರ್ಶನ್ ಮನೆ, ಎಸ್ಎಸ್ ಆಸ್ಪತ್ರೆ ನೆಲಸಮವಾಗಲಿದೆ: ಡಿಸಿ ಶಂಕರ್ದರ್ಶನ್ ಮನೆ, ಎಸ್ಎಸ್ ಆಸ್ಪತ್ರೆ ನೆಲಸಮವಾಗಲಿದೆ: ಡಿಸಿ ಶಂಕರ್

ಏಕೆಂದರೆ, ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ನಂತರ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನಮ್ಮ ಕನ್ನಡದ ನಟ ದರ್ಶನ್ ಗೆ ಬಂದಿದೆ ಎಂದು ಎಲ್ಲೆಡೆ ಗುಲ್ಲಾಗಿತ್ತು. ಆದರೆ ಈ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅವರು ಬ್ರಿಟನ್ ಕನ್ನಡಿಗರ ಪರವಾಗಿ ದರ್ಶನ್ ಗೆ ಲಂಡನ್ ಗೆ ಬರುವಂತೆ ಆಹ್ವಾನ ನೀಡಿದ್ದರು.

Darshan

ಖಾಸಗಿಯಾಗಿ ಕಾರ್ಯಕ್ರಮವೊಂದನ್ನು ಕೂಡ ಏರ್ಪಡಿಸಿ, ಅಕ್ಟೋಬರ್ ಹತ್ತೊಂಬತ್ತನೇ ತಾರೀಕು ಸನ್ಮಾನ ಕೂಡ ಮಾಡಲಾಗಿದೆ. ಆ ನಂತರ ಬ್ರಿಟನ್ ನ ಸಂಸತ್ತಿಗೆ ಆಹ್ವಾನಿಸಲಾಗಿದೆ. ಅಲ್ಲಿಗೆ ಇದೊಂದು ವೈಯಕ್ತಿಕವಾದ ಆಹ್ವಾನ ಹಾಗೂ ಭೇಟಿ ಎಂಬುದು ನಿಕ್ಕಿಯಾಯಿತು. ಆದರೆ ಬ್ರಿಟನ್ ಸಂಸತ್ತಿನ ಪ್ರಶಸ್ತಿ ದರ್ಶನ್ ಗೆ ಬಂದಿದೆ ಎಂಬ ಸುದ್ದಿಯಾಗಿದ್ದು ಹೇಗೆ ಅನ್ನೋದನ್ನು ಪತ್ತೆ ಹಚ್ಚಬೇಕಿದೆ.

Darshan

ಇನ್ನು ದರ್ಶನ್ ಅವರು ತಮ್ಮ ಮಗನ ಜತೆಗೆ ಲಂಡನ್ ಗೆ ತೆರಳಿ, ಅಪ್ಪ- ಮಗನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಇಂಡೋ ಬ್ರಿಟಿಷ್ ಆಲ್ ಪಾರ್ಲಿಮೆಂಟರಿ ಗ್ರೂಪ್ ನಿಂದ ಸಿಕ್ಕ ಆಹ್ವಾನಕ್ಕೆ ಸ್ಪಂದಿಸಿದ ದರ್ಶನ್ ಪ್ರೀತಿಯಿಂದ ಅಲ್ಲಿಗೆ ಹೋದರೆ, ಕರ್ನಾಟಕದ ಮಾಧ್ಯಮಗಳಲ್ಲಿ ಬೇರೆ ರೀತಿಯ ಸುದ್ದಿಯಾಗಿದೆ ಎಂಬುದು ಹಲವರ ಆಕ್ಷೇಪ.

ದರ್ಶನ್, ಸುದೀಪ್ ಸೆಳೆಯಲು ರಾಜಕೀಯ ಪಕ್ಷಗಳ ತಂತ್ರ!ದರ್ಶನ್, ಸುದೀಪ್ ಸೆಳೆಯಲು ರಾಜಕೀಯ ಪಕ್ಷಗಳ ತಂತ್ರ!

ಇರಲಿ ಬಿಡಿ, ದರ್ಶನ್ ಸೂಟು- ಬೂಟು ಹಾಕಿಕೊಂಡು ಸಕತ್ತಾಗಿ ಮಿಂಚುತ್ತಿದ್ದಾರಲ್ಲ, ಎಂಥ ಕಾರ್ಯಕ್ರಮದಲ್ಲೂ ಹಾಗೆ ನೋಡುವುದಕ್ಕೆ ಆಗಲ್ಲ. ಈಗ ಹಾಗೆ ನೋಡುವುದೇ ಖುಷಿ ಎನ್ನುತ್ತಿದ್ದಾರೆ ಅಭಿಮಾನಿಗಳು.

English summary
Actor Darshan received Global Integrity award. Which was given by India- British Kannadiga community. There was a confusion about Global diversity award, which is given by British parliament. But Darshan awarded by Kannadigas, not by parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X