ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ ಎಸಿಬಿ ಅಧಿಕಾರಿಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಅಕ್ರಮ ಆಸ್ತಿ ಗಳಿಸಿ ಮರೆಯುತ್ತಿದ್ದ ಏಳು ಭ್ರಷ್ಟ ಅಧಿಕಾರಿಗಳ ಕೋಟ್ಯಂತರ ರೂಪಾಯಿ ಅಕ್ರಮ ಸಂಪತ್ತನ್ನು ಎಸಿಬಿ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ. ರಾಜ್ಯದಲ್ಲಿ ಏಕ ಕಾಲಕ್ಕೆ ಮೂವತ್ತೈದು ಕಡೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭ್ರಷ್ಟರ ಚಿನ್ನ, ಆಸ್ತಿ, ನಗದು ಸಂಪತ್ತನ್ನು ಬಯಲಿಗೆ ಎಳೆದಿದ್ದಾರೆ. ಇದು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಮಂಗಳವಾರ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ಅಕ್ರಮ ಸಂಪತ್ತಿನ ಪೂರ್ಣ ವಿವರ ಇಲ್ಲಿದೆ ನೋಡಿ.

ಸತತ ಹನ್ನೆರಡು ತಾಸು ಕಾರ್ಯಾಚರಣೆ ನಡೆಸಿರುವ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಅಧಿಕಾರಿಗಳ ಲಾಕರ್, ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡುವ ಕಾರ್ಯ ಮುಂದುವರೆದಿದೆ. ಪ್ರಸಕ್ತ ವರ್ಷದಲ್ಲಿ ಈ ಪರಿಯ ದಾಳಿ ಇದೇ ಮೊದಲು. ಕೋಟಿ ಕೋಟಿ ಅಕ್ರಮ ಸಂಪತ್ತು ಬಯಲಿಗೆ ಎಳೆದಿದ್ದು, ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಮಂಗಳೂರು ಪಾಲಿಕೆಯ ಭ್ರಷ್ಟ ಬಲೆಗೆ

ಮಂಗಳೂರು ಪಾಲಿಕೆಯ ಭ್ರಷ್ಟ ಬಲೆಗೆ

ಮಂಗಳೂರು ಮಹಾನಗರ ಪಾಲಿಕೆ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಜಯರಾಜ್ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಎರಡು ವಾಸದ ಮನೆ, ಮೂರು ನಿವೇಶನ, 11 ಲಕ್ಷ ರೂಪಾಯಿ ನಗದು, ಹತ್ತು ಲಕ್ಷ ವಿಮಾ ಬಾಂಡ್, ಬ್ಯಾಂಕ್ ಖಾತೆಯಲ್ಲಿ ಇಪ್ಪತ್ತು ಲಕ್ಷ ರೂಪಾಯಿ ನಗದು, ಪತ್ನಿ ಹೆಸರಿನಲ್ಲಿ 20 ಲಕ್ಷ ರೂ. ಡೆಪಾಸಿಟ್, 200 ಗ್ರಾಂ ಚಿನ್ನ ಹಾಗೂ ಒಂದು ಕೆ.ಜಿ. ಬೆಳ್ಳಿ ಪತ್ತೆಯಾಗಿದೆ. ಈತನ ವಿರುದ್ಧ ಮಂಗಳೂರು ಘಟಕದ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈತನ ಬಳಿ ಮತ್ತಷ್ಟು ದಾಖಲೆಗಳು ಸಿಕ್ಕಿದ್ದು, ಅವುಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.

ಸಪ್ತ ಭ್ರಷ್ಟರ ಬೇಟೆಯಾಡಿದ ಎಸಿಬಿ ಅಧಿಕಾರಿಗಳುಸಪ್ತ ಭ್ರಷ್ಟರ ಬೇಟೆಯಾಡಿದ ಎಸಿಬಿ ಅಧಿಕಾರಿಗಳು

ಲಕ್ಷ ಲಕ್ಷ ನೋಟಿನ ಕಂತುಗಳು

ಲಕ್ಷ ಲಕ್ಷ ನೋಟಿನ ಕಂತುಗಳು

ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ದೇವರಾಜ್ ಅಕ್ರಮವಾಗಿ ಕೂಡಿಟ್ಟಿದ್ದ 59 ಲಕ್ಷ ರೂಪಾಯಿ ನಗದು ಎಸಿಬಿ ದಾಳಿ ವೇಳೆ ಪತ್ತೆಯಾಗಿದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿ ಬಡವರ ಸೇವೆ ಮಾಡುವ ಸೋಗಿನಲ್ಲಿಯೇ ಕೋಟ್ಯಂತರ ಅಕ್ರಮ ಸಂಪತ್ತು ಗಳಿಸಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಈತನ ಬ್ಯಾಂಕ್ ಖಾತೆಯಲ್ಲಿ 30 ಲಕ್ಷ ರೂಪಾಯಿ ಠೇವಣಿ, ಅರ್ಧ ಕೆ.ಜಿ. ಚಿನ್ನ, ನಾಲ್ಕು ಕೆ.ಜಿ. ಬೆಳ್ಳಿ, ಎರಡು ವಾಸದ ಮನೆ, ಎರಡು ನಿವೇಶನ ಹಾಗೂ 26 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಧಾರವಾಡ ಎಸಿಬಿ ಪೊಲೀಸರು ಈತನಿಗೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ದು ಪರಿಶೀಲನಾ ಕಾರ್ಯ ಮುಂದುವರೆದಿದೆ.

ಕೋಲಾರಿನ ಡಿಎಚ್ಓ ಅಕ್ರಮ ಸಂಪತ್ತು

ಕೋಲಾರಿನ ಡಿಎಚ್ಓ ಅಕ್ರಮ ಸಂಪತ್ತು

ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್. ಎನ್. ವಿಜಯ್ ಕುಮಾರ್ ಎಸಿಬಿ ದಾಳಿಗೆ ಒಳಗಾಗಿದ್ದಾನೆ. ದಾಳಿ ವೇಳೆ ಮೂರು ವಾಸದ ಮನೆ, ಮೂರು ಪ್ಲಾಟ್, ಮೂರು ನಿವೇಶನ, ಒಂದು ಖಾಸಗಿ ಆಸ್ಪತ್ರೆ, ಎರಡು ಆರು, ಒಂದು ದ್ವಿಚಕ್ರ ವಾಹನ, ಬ್ಯಾಂಕ್ ಖಾತೆಯಲ್ಲಿ 61 ಲಕ್ಷ ರೂಪಾಯಿ ನಗದು, ಒಂದೂವರೆ ಕೆರೆ ಕೃಷಿ ಜಮೀನನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಎಲ್ಲಾದಕ್ಕೂ ಮಾಮೂಲಿ ಫಿಕ್ಸ್ ಮಾಡಿದ್ದ ವಿಜಯ್ ಕುಮಾರ್ ಮೇಲೆ ಅನೇಕ ಆರೋಪಗಳು ಕೇಳಿ ಬಂದಿದ್ದವು. ಅಂತೂ ಎಸಿಬಿ ಬಲೆಗೆ ಬಿದ್ದಿದ್ದು, ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿಯನ್ನು ಮೂಟೆ ಕಟ್ಟಿ ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಎಸಿಬಿ ದಾಳಿ ನಡೆಯುತ್ತಿದ್ದಂತೆ ವೈದ್ಯ ಕುಟುಂಬ ಮೂರ್ಛೆ ಹೋಗಿದೆ.

ಎಸಿಬಿ ದಾಳಿ; ಕೋಲಾರ ಡಿಹೆಚ್‌ಓ ಮನೆಯಲ್ಲಿ ಸಿಕ್ಕಿದ್ದೇನು?ಎಸಿಬಿ ದಾಳಿ; ಕೋಲಾರ ಡಿಹೆಚ್‌ಓ ಮನೆಯಲ್ಲಿ ಸಿಕ್ಕಿದ್ದೇನು?

ಕೆ.ಜಿ. ಗಟ್ಟಲೇ ಚಿನ್ನ ಪತ್ತೆ

ಕೆ.ಜಿ. ಗಟ್ಟಲೇ ಚಿನ್ನ ಪತ್ತೆ

ಧಾರವಾಡ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರ ಮೇಲೆ ಧಾರವಾಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಅಕ್ರಮ ಸಂಪತ್ತನ್ನು ಹೊರಗೆಡವಿದ್ದಾರೆ. ಶ್ರೀನಿವಾಸ್ ಅವರಿಗೆ ಸೇರಿದ ಎರಡು ವಾಸದ ಮನೆ, ಒಂದು ಫಾರ್ಮ್ ಹೌಸ್, ಎರಡು ನಿವೇಶನ, ಎರಡು ಕಾರು ಒಂದು ಟ್ರ್ಯಾಕ್ಟರ್, ಒಂದು ಕೆ.ಜಿ. ಚಿನ್ನ, ಮೂರು ಕೆ.ಜಿ ಬೆಳ್ಳಿ, 4.87 ಲಕ್ಷ ರಪಾಯಿ ನಗದು. ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷ ರೂ. ನಗದು. 63 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಪಾಂಡುರಂಗಪ್ಪನ ಚಿನ್ನದ ಸಂಪತ್ತು

ಪಾಂಡುರಂಗಪ್ಪನ ಚಿನ್ನದ ಸಂಪತ್ತು

ಸಹಕಾರ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಪಾಂಡುರಂಗ ಗರ್ಗ್ ಅವರ ಮಲ್ಲೇಶ್ವರ ನಿವಾಸ ಸೇರಿದಂತೆ ಹಲವಡೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಡಿವೈಏಸ್ಪಿ ಸುಬ್ರಮಣಿ ನೇತೃತ್ವದ ತಂಡ ಬೆಳಗ್ಗೆ ಗರ್ಗ್ ಅವರ ವಿಜಯನಗರ ನಿವಾಸದ ಮೇಲೆ ದಾಳಿ ನಡೆಸಿದೆ. ಆಗಸ್ಟೇ ವಾಕಿಂಗ್ ಮುಗಿಸಿ ಬಂದಿದ್ದ ಗರ್ಗ್, ಅತಿಥಿಗಳು ಎಂದು ಭಾವಿಸಿದ್ದಾರ. ಆದರೆ ಎಸಿಬಿ ಅಧಿಕಾರಿಗಳು ಎಂದ ಕೂಡಲೇ ಬೆಚ್ಚಿ ಬಿದ್ದಿದ್ದಾರೆ. ಪಾಂಡುರಂಗ ಗರ್ಗ್ ಅವರಿಗೆ ಸಂಬಂಧಿಸಿದಂತೆ ಎರಡು ವಾಸದ ಮನೆ, ಒಂದು ಫ್ಲಾಟ್, ಮೂರು ಕಾರು, ಒಂದು ಟ್ರ್ಯಾಕ್ಟರ್, ಮೂರು ದ್ವಿಚಕ್ರ ವಾಹನ, 1.166 ಗ್ರಾಂ ತೂಕದ ಚಿನ್ನಾಭರಣ, ಇಪ್ಪತ್ತು ಲಕ್ಷ ರೂ. ಮೌಲ್ಯದ ವಿಮಾ ಬಾಂಡ್, ಆಜುಬಾಜು ಅರ್ಧ ಕ್ವಿಂಟಾಲ್ ( 31 ಕೆ.ಜಿ ) ಬೆಳ್ಳಿ ಸಾಮಾನು, ಹತ್ತು ಎಕರೆ ಕೃಷಿ ಜಮೀನು, ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಇಪತ್ತು ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿವೆ. ಬೆಂಗಳೂರು ನಗರ ಘಟಕದ ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಶಾಕ್: ಚಿತ್ರದುರ್ಗ, ಕೋಲಾರದಲ್ಲಿ ಎಸಿಬಿ ದಾಳಿಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಶಾಕ್: ಚಿತ್ರದುರ್ಗ, ಕೋಲಾರದಲ್ಲಿ ಎಸಿಬಿ ದಾಳಿ

ಚನ್ನಬಸಪ್ಪ ಎಸಿಬಿ ಬಲೆಗೆ

ಚನ್ನಬಸಪ್ಪ ಎಸಿಬಿ ಬಲೆಗೆ

ರಾಮನಗರ ಜಿಲ್ಲೆ ಮಾಗಡಿ ವಿಭಾಗದ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಚನ್ನಬಸಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಿ 8 ಫ್ಲಾಟ್ ಗಳು, ಒಂದು ಸೂಪರ್ ಮಾರ್ಟ್, ಫಾರ್ಮ್ ಹೌಸ್, ಎರಡು ಕಾರು, ಎರಡು ದ್ವಿಚಕ್ರ ವಾಹನ ಹಾಗೂ 1. 02 ಲಕ್ಷ ರೂ. ನಗದು ಹಣ, 125 ಗ್ರಾಂ ಚಿನ್ನದ ಒಡವೆ, 650 ಗ್ರಾಂ ಬೆಳ್ಳಿ ಸಾಮಾನು ಪತ್ತೆಯಾಗಿದೆ. ಈತ ಬಿಲ್ಡರ್ ಕಂಪನಿ ಜತೆ ಪಾಲುದಾರಿಕೆ ಹೊಂದಿದ್ದು, ಕೋಟ್ಯಂತರ ರೂಪಾಯಿ ಅಕ್ರಮ ಸಂಪತ್ತು ಗಳಿಸಿದ್ದಾರೆ ಎನ್ನಲಾಗಿದೆ. ಈತ ನೆರೆಯ ಆಂಧ್ರ ಪ್ರದೇಶದಲ್ಲೂ ಆಸ್ತಿ ಹೊಂದಿರುವ ಬಗ್ಗೆ ಎಸಿಬಿ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದು, ಅವುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈಶಾನ್ಯ ವಲಯದ ಪೊಲೀಸ್ ಅಧೀಕ್ಷಕ ಮಹೇಶ್ ಮೇಗಣ್ಣವರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.

Recommended Video

ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್‌ವೈ ಭೋಜನಕೂಟ, ಹಲವರು ಶಾಸಕರು ಗೈರು | Oneindia Kannada
ಚಿನ್ನ ಪ್ರಿಯ ವೈದ್ಯ ಅಕ್ರಮ ಸಂಪತ್ತು ಬಯಲಿಗೆ

ಚಿನ್ನ ಪ್ರಿಯ ವೈದ್ಯ ಅಕ್ರಮ ಸಂಪತ್ತು ಬಯಲಿಗೆ

ಕೊಪ್ಪಳದ ಕಿಮ್ಸ್ ನ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಒಂದು ವಾಸದ ಮನೆ, ನಾಲ್ಕು ನಿವೇಶನ, 2 ಕಾರು, ಎರಡು ದ್ವಿಚಕ್ರ ವಾಹನ, 800 ಗ್ರಾಂ, ಚಿನ್ನ, 9 ಕೆ.ಜಿ. ಬೆಳ್ಳಿ ಸಾಮಾನು, 1.94 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ. ಬಳ್ಳಾರಿ ಎಸಿಬಿ ಘಟಕದ ಎಸ್ಪಿ ಗುರುನಾಥ್ ಮತ್ತೂರು ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

English summary
In an early morning operation, sleuths from ACB on Tuesday raided the houses of 7 govt officials in different parts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X