ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಸೇರಿ 4 ಕಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ

By Nayana
|
Google Oneindia Kannada News

ಬೆಂಗಳೂರು, ಮೇ 4: ರಾಜ್ಯಾದ್ಯಂತ 11 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ 4 ಸರ್ಕಾರಿ ನೌಕರರ ಮೇಲೆ ಕಾರ್ಯಾಚರಣೆ ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿದೆ.

ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಯದ 4ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 11ಸ್ಥಳಗಳ ಮೇಲೆ ಇಂದು ದಾಳಿ ನಡೆಸಿರುತ್ತದೆ. ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡಸಲಾದ ಜಾಗಗಳ ಮತ್ತು ಸರ್ಕಾರಿ ಅಧಿಕಾರಿಗಳ ಮಾಹಿತಿ ಈ ಕೆಳಕಂಡಂತಿರುತ್ತವೆ.

ಆದಾಯ ತೆರಿಗೆ ಅಧಿಕಾರಿಗಳ ದಾಳಿ, 4.01 ಕೋಟಿ ನಗದು ವಶ ಆದಾಯ ತೆರಿಗೆ ಅಧಿಕಾರಿಗಳ ದಾಳಿ, 4.01 ಕೋಟಿ ನಗದು ವಶ

ಎಸ್.ಅಡಪ್ಪ, ಕಾರ್ಯಪಾಲಕ ಅಭಿಯಂತರರು, ಕೆಎನ್‌ಎನ್‌ಎಲ್, ಕೆನಾಲ್ ಡಿವಿಷನ್, ಬಳ್ಳಾರಿ, ಇವರ ಗಾಂಧಿನಗರ, ಬಳ್ಳಾರಿಯಲ್ಲಿನ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ ಎರಡನೆಯದಾಗಿ ರಾಜಶೇಖರ್ ಸುರೇಶ್ ಗಜಕೋಶ್, ಡಿಪೊ ಮ್ಯಾನೇಜರ್, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಇಂಡಿ ಬಸ್ ಡಿಪೊ ವಿಜಯಪುರ ಜಿಲ್ಲೆ. ಇವರ ವಿಜಯಪುರದಲ್ಲಿನ ವಾಸದ ಮನೆ ಸೇರಿ ಎರಡು ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ.

ACB raids four corrupt officials at 11 places

ಮೂರನೆಯದಾಗಿ ಎನ್.ರವಿಕುಮಾರ್. ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಗುಂಡ್ಲುಪೇಟೆ. ಇವರ ಗುಂಡ್ಲುಪೇಟೆಯಲ್ಲಿನ ಕಛೇರಿ ಹಾಗು ನಿವಾಸ ಮತ್ತು ಮೈಸೂರು ರಾಮಕೃಷ್ಣನಗರದಲ್ಲಿನ ವಾಸದ ಮನೆ, ಮತ್ತು ಕುವೆಂಪುನಗರ ಮೈಸೂರು ನಗರದಲ್ಲಿನ ಮನೆ ಮೇಲೆ ದಾಳಿ ನಡೆಸಲಾಗಿದೆ.

ಇನ್ನು ನಾಲ್ಕನೆಯದಾಗಿ ಅಶ್ವಥಪ್ಪ ಹೆಚ್.ವೈ. ದ್ವೀತಿಯ ದರ್ಜೆ ಸಹಾಕರು, ಸಬ್ ರಿಜಿಸ್ಟರ್ ಕಛೇರಿ, ಕೋಲಾರ ತಾಲ್ಲೂಕು, ಕೋಲಾರ. ಇವರ ಕೋಲಾರದಲ್ಲಿನ ವಾಸದ ಮನೆ ಮತ್ತು ಕಛೇರಿ ಹಾಗೂ ಹಂಚನ ಗ್ರಾಮದಲ್ಲಿರುವ ಇವರ ಮತ್ತೊಂದು ನಿವಾಸದ ಮೆಲೆ ದಾಳಿ ನಡೆದಿದೆ.

ಕರ್ನಾಟಕ ರಾಜ್ಯದ ವಿವಿಧ ಎಸಿಬಿ ಪೊಲೀಸ್ ಠಾಣೆಯ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ದ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.

English summary
Anti Corruption Bureau officials have raided four corrupt officials from irrigation, RDPR and Stamps and Registration on Friday and seized some documents and belongings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X