ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

68 ಸ್ಥಳಗಳಲ್ಲಿ ಎಸಿಬಿ ದಾಳಿ; ಸಿಕ್ಕಿದ ಹಣ, ಆಸ್ತಿಯ ಮಾಹಿತಿ

|
Google Oneindia Kannada News

ಬೆಂಗಳೂರು, ನವೆಂಬರ್ 24; ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಬುಧವಾರ ಕರ್ನಾಟಕದಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದಾರೆ. 503 ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ 68 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ.

Recommended Video

ಕರ್ನಾಟಕದ ಮೇಲೆ ಎಸಿಬಿ ಬಿಗಿ ಕಾರ್ಯಾಚರಣೆ : 60 ಸ್ಥಳಗಳಲ್ಲಿ 400ಕ್ಕೂ ಹೆಚ್ಚು ಸರಗಳ್ಳರಿಂದ ಶೋಧ | Oneindia Kannada

ಎಸಿಬಿ ಅಧಿಕಾರಿಗಳು ಬುಧವಾರ ಮುಂಜಾನೆ ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 15 ಸರ್ಕಾರಿ ನೌಕರರಿಗೆ ಸೇರಿದ 68 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು, ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ವಿಡಿಯೋ; ಕಲಬುರಗಿಯಲ್ಲಿ ಎಸಿಬಿ ದಾಳಿ, ನೀರಿನ ಪೈಪ್‌ನಲ್ಲಿ ಹಣ! ವಿಡಿಯೋ; ಕಲಬುರಗಿಯಲ್ಲಿ ಎಸಿಬಿ ದಾಳಿ, ನೀರಿನ ಪೈಪ್‌ನಲ್ಲಿ ಹಣ!

ಕಲಬುರಗಿಯಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಾಂತಗೌಡರ ಗುಬ್ಬಿ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿಲಾಗಿತ್ತು. ಈ ವೇಳೆ ನೀರಿನ ಪೈಪ್‌ಗೆ ಹಣವನ್ನು ಹಾಕಲಾಗಿತ್ತು. ಪೈಪ್‌ನಿಂದ 13 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ರಾಜ್ಯದಲ್ಲಿ ಎಸಿಬಿ ದಾಳಿ; ಗದಗ ಕೃಷಿ ಅಧಿಕಾರಿ ಮನೆಯಲ್ಲಿ 7 ಕೆಜಿ ಚಿನ್ನ ಪತ್ತೆ ರಾಜ್ಯದಲ್ಲಿ ಎಸಿಬಿ ದಾಳಿ; ಗದಗ ಕೃಷಿ ಅಧಿಕಾರಿ ಮನೆಯಲ್ಲಿ 7 ಕೆಜಿ ಚಿನ್ನ ಪತ್ತೆ

ACB Raid In 68 Place Of Karnataka Details

ಬುಧವಾರ ಸಂಜೆ ಎಸಿಬಿ ದಾಳಿಯಲ್ಲಿ ಪತ್ತೆಯಾದ ಹಣ, ಆಸ್ತಿಗಳ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಅದರ ವಿವರ ಹೀಗಿದೆ.

* ಎಸ್. ಎಂ. ಬಿರಾದರ್. ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜೇವರ್ಗಿ ಕಲಬುರಗಿ ಜಿಲ್ಲೆ. ಕಲಬುರಗಿ 2 ವಾಸದ ಮನೆಗಳು, ಬೆಂಗಳೂರು ನಗರದಲ್ಲಿ 1 ನಿವೇಶನ, 3 ವಿವಿಧ ಕಂಪನಿಯ ಕಾರುಗಳು, 1 ದ್ವಿಚಕ್ರ ವಾಹನ, 1 ಸ್ಕೂಲ್ ಬಸ್, 2 ಟ್ರಾಕ್ಟರ್‌ಗಳು. 54,50,000 ರೂ. ನಗದು ಹಣ, ಸುಮಾರು 100 ಗ್ರಾಂ ಚಿನ್ನಾಭರಣಗಳು, 36 ಎಕರೆ ಕೃಷಿ ಜಮೀನು, 15 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತದೆ. ತನಿಖೆ ಮುಂದುವರೆದಿದೆ.

* ಟಿ. ಎಸ್. ರುದ್ರೇಶಪ್ಪ (ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ, ಗದಗ). ಶಿವಮೊಗ್ಗ ನಗರದಲ್ಲಿ 2 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 4 ನಿವೇಶನಗಳು, 9 ಕೆಜಿ 400 ಗ್ರಾಂ ಚಿನ್ನದ ಬಿಸ್ಕೇಟ್ ಹಾಗೂ ಆಭರಣಗಳು. 3 ಕೆಜಿ ಬೆಳ್ಳಿ ಸಾಮಾನುಗಳು, 2 ವಿವಿಧ ಕಂಪನಿಯ ಕಾರುಗಳು, 3 ದ್ವಿ ಚಕ್ರ ವಾಹನಗಳು, 8 ಎಕರೆ ಕೃಷಿ ಜಮೀನು. ನಗದು ಹಣ 15,94,000 ರೂ. ಗಳು ಹಾಗೂ 20 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

* ಶ್ರೀನಿವಾಸ್ .ಕೆ (ಕಾರ್ಯಪಾಲಕ ಅಭಿಯಂತರರು, ಹೆಚ್‍ಎಲ್‍ಬಿಸಿ-3, ಕೆ. ಆರ್. ಪೇಟೆ ಸಬ್ ಡಿವಿಜನ್, ಮಂಡ್ಯ ಜಿಲ್ಲೆ). ಮೈಸೂರು ನಗರದಲ್ಲಿ 1 ವಾಸದ ಮನೆ, ಮೈಸೂರು ನಗರದಲ್ಲಿ 1 ಫ್ಲಾಟ್, ಮೈಸೂರು ನಗರದಲ್ಲಿ 2 ನಿವೇಶನಗಳು, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ 4 ಎಕರೆ 34 ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ 1 ಫಾರ್ಮ್ ಹೌಸ್, 2 ವಿವಿಧ ಕಂಪನಿಯ ಕಾರುಗಳು, 2 ದ್ವಿಚಕ್ರ ವಾಹನಗಳು, 1 ಕೆಜಿ ಚಿನ್ನಾಭರಣಗಳು, 8 ಕೆಜಿ 840 ಗ್ರಾಂ ಬೆಳ್ಳಿ ಸಾಮಾನುಗಳು. ನಗದು ಹಣ 9,85,000 ರೂ.ಗಳು. ವಿವಿಧ ಬ್ಯಾಂಕ್‍ಗಳಲ್ಲಿ 22 ಲಕ್ಷ ರೂಗಳ ಠೇವಣಿ ಹಾಗೂ 8 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

* ಕೆ. ಎಸ್. ಲಿಂಗೇಗೌಡ. (ಕಾರ್ಯಪಾಲಕ ಅಭಿಯಂತರರು, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು). ಮಂಗಳೂರು ನಗರದಲ್ಲಿ 1 ವಾಸದ ಮನೆ, ಚಾಮರಾಜನಗರ ಮತ್ತು ಮಂಗಳೂರಿನಲ್ಲಿ 3 ನಿವೇಶನಗಳು, 2 ವಿವಿಧ ಕಂಪನಿಯ ಕಾರುಗಳು, 1 ದ್ವಿಚಕ್ರವಾಹನ, 1 ಕೆಜಿ ಬೆಳ್ಳಿ ಆಭರಣಗಳು ಹಾಗೂ 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.

* ಎಲ್. ಸಿ. ನಾಗರಾಜ್. (ಆಡಳಿತಾಧಿಕಾರಿ, ಸಕಾಲ ಮಷೀನ್, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ನಗರ). ಬೆಂಗಳೂರು ನಗರದಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದಲ್ಲಿ 1 ವಾಸದ ಮನೆ, ನೆಲಮಂಗಲ ತಾಲ್ಲೂಕಿನಲ್ಲಿ ಸುಮಾರು 11 ಎಕರೆ 26 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿಯ ಕಾರುಗಳು, 1.76 ಗ್ರಾಂ ಚಿನ್ನಾಭರಣಗಳು, 7 ಕೆಜಿ 284 ಗ್ರಾಂ ಬೆಳ್ಳಿ ಸಾಮಾನುಗಳು. ನಗದು ಹಣ 43,00,000 ರೂ. ಗಳು ಹಾಗೂ ಸುಮಾರು 14 ಲಕ್ಷರೂಗಳ ಗೃಹೋಪಯೋಗಿ ವಸ್ತುಗಳು ಪತ್ತೆ.

* ಜಿ. ವಿ. ಗಿರಿ. (ಗ್ರೂಪ್-ಡಿ ನೌಕರ, ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಮಾರಪ್ಪನಪಾಳ್ಯ, ಯಶವಂತಪುರ, ಬೆಂಗಳೂರು ನಗರ). ಬೆಂಗಳೂರು ನಗರದಲ್ಲಿ 6 ವಾಸದ ಮನೆಗಳು, 4 ವಿವಿಧ ಕಂಪನಿಯ ಕಾರುಗಳು, 4 ದ್ವಿಚಕ್ರ ವಾಹನಗಳು, 8 ಕೆಜಿ ಬೆಳ್ಳಿ ಸಾಮಾನುಗಳು, 1 ಲಕ್ಷ 18 ಸಾವಿರ ನಗದು ಹಣ ಹಾಗೂ ಸುಮಾರು 15 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.

* ಎಸ್. ಎಸ್. ರಾಜಶೇಖರ್. (ಪಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ, ಬೆಂಗಳೂರು ನಗರ). ಬೆಂಗಳೂರಿನ ಯಲಹಂಕದ ಮಾರಸಂದ್ರದಲ್ಲಿ 1 ಫ್ಲಾಟ್, ಯಲಹಂಕದಲ್ಲಿನ ಶಿವನಹಳ್ಳಿಯಲ್ಲಿ 2 ಅಂತಸ್ತಿನ ಒಂದು ಫ್ಲಾಟ್ ಮತ್ತು ತಳ ಮಹಡಿಯಲ್ಲಿ ಖಾಸಗಿ ಆಸ್ಪತ್ರೆ, ಯಲಹಂಕದ ಮೈಲನಹಳ್ಳಿಯಲ್ಲಿ ಒಂದು ನಿವೇಶನ, 1 ಕಾರು, 1 ದ್ವಿಚಕ್ರ ವಾಹನ ಹಾಗೂ ಸುಮಾರು 4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

* ಮಾಯಣ್ಣ. (ಪ್ರಥಮ ದರ್ಜೆ ಸಹಾಯಕರು, ಬಿಬಿಎಂಪಿ ಕೇಂದ್ರ ಕಛೇರಿ, ಎನ್. ಆರ್. ವೃತ್ತ, ಬೆಂಗಳೂರು ನಗರ). ಬೆಂಗಳೂರು ನಗರದಲ್ಲಿ 4 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 6 ನಿವೇಶನಗಳು, 2 ಎಕರೆ ಕೃಷಿ ಜಮೀನು, 2 ದ್ವಿಚಕ್ರ ವಾಹನಗಳು, 1 ಕಾರು. ನಗದು ಹಣ 59,000 ರೂ. ಗಳು, 10 ಲಕ್ಷ ರೂ. ನಿಶ್ಚಿತ ಠೇವಣಿ (ಎಫ್.ಡಿ), ಉಳಿತಾಯ ಖಾತೆಯಲ್ಲಿ 1,50,000/- ರೂ. ಗಳು. ಸುಮಾರು 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ ಹಾಗೂ ಸುಮಾರು 12 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

* ಕೆ. ಎಸ್. ಶಿವಾನಂದ್. (ಸಬ್-ರಿಜಿಸ್ಟ್ರಾರ್ (ನಿವೃತ್ತ), ಬಳ್ಳಾರಿ ಜಿಲ್ಲೆ). ಮಂಡ್ಯ ನಗರದಲ್ಲಿ 1 ವಾಸದ ಮನೆ, ಬೆಂಗಳೂರು ನಗರದಲ್ಲಿ 1 ಖಾಲಿ ನಿವೇಶನ, 1 ಕಾರು, 2 ದ್ವಿಚಕ್ರ ವಾಹನ, ಶಕ್ರಪುರ ಗ್ರಾಮದಲ್ಲಿ 1 ಸಂಕೀರ್ಣ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಸುಮಾರು 7 ಎಕರೆ ಕೃಷಿ ಜಮೀನು ಹಾಗೂ ಸುಮಾರು 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.

* ಸದಾಶಿವ ರಾಯಪ್ಪ ಮರಲಿಂಗಣ್ಣನವರ್. (ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ್, ಬೆಳಗಾವಿ ಜಿಲ್ಲೆ). ಬೆಳಗಾವಿ ನಗರದಲ್ಲಿ 1 ವಾಸದ ಮನೆ, 22 ಎಕರೆ ಕೃಷಿ ಜಮೀನು, 1 ಕೆಜಿ 135 ಗ್ರಾಂ ಚಿನ್ನಾಭರಣಗಳು, ನಗದು ಹಣ 8,22,000 ರೂ. ಗಳು ಹಾಗೂ ಸುಮಾರು 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.

* ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ. (ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ). ಬೈಲಹೊಂಗಲ ನಗರದಲ್ಲಿ 2 ವಾಸದ ಮನೆ, 4 ನಿವೇಶನಗಳು, 4 ವಿವಿಧ ಕಂಪನಿಯ ಕಾರುಗಳು, 6 ದ್ವಿ ಚಕ್ರ ವಾಹನಗಳು, 263 ಗ್ರಾಂ ಚಿನ್ನಾಭರಣಗಳು, 945 ಗ್ರಾಂ ಬೆಳ್ಳಿ ಸಾಮಾನುಗಳು, 1,50,000 ರೂ. ಮೌಲ್ಯದ ಬ್ಯಾಂಕ್ ಡೆಪಾಸಿಟ್ ಮತ್ತು ಷೇರುಗಳು. ನಗದು ಹಣ 1,10,000 ರೂ. ಗಳು ಹಾಗೂ ಸುಮಾರು 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

* ನಾಥಾಜಿ ಪೀರಾಜಿ ಪಾಟೀಲ. (ಲೈನ್ ಮೆಕಾನಿಕ್ ಗ್ರೇಡ್-2, ಹೆಸ್ಕಾಂ, ಬೆಳಗಾವಿ ಜಿಲ್ಲೆ). ಬೆಳಗಾವಿ ನಗರದಲ್ಲಿ 1 ವಾಸದ ಮನೆ, ಬೆಳಗಾವಿ ನಗರದಲ್ಲಿ 2 ನಿವೇಶನ, 1 ಕಾರು, 1 ದ್ವಿಚಕ್ರ ವಾಹನ, 239 ಗ್ರಾಂ ಚಿನ್ನಾಭರಣಗಳು, 1 ಕೆಜಿ 803 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 38,000 ರೂ. ಗಳು ಹಾಗೂ ಸುಮಾರು 20 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

* ಲಕ್ಷ್ಮೀ ನರಸಿಂಹಯ್ಯ. (ರಾಜಸ್ವ ನಿರೀಕ್ಷಕರು, ಕಸಬಾ-2 ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು
ಗ್ರಾಮಾಂತರ ಜಿಲ್ಲೆ). ವಿವಿಧ ಕಡೆಗಳಲ್ಲಿ 5 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 6 ನಿವೇಶನಗಳು, ದೊಡ್ಡಬಳ್ಳಾಪುರ
ತಾಲ್ಲೂಕಿನಲ್ಲಿ 25 ಗುಂಟೆ ಜಮೀನು, 765 ಗ್ರಾಂ ಚಿನ್ನಾಭರಣಗಳು, 15 ಕೆಜಿ ಬೆಳ್ಳಿ ಸಾಮಾನುಗಳು, 1 ಕಾರು, 2 ದ್ವಿಚಕ್ರ ವಾಹನಗಳು, ನಗದು ಹಣ 1,13,000 ರೂ. ಗಳು ಪತ್ತೆ.

* ವಾಸುದೇವ್. ಆರ್. ಎನ್. (ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು), ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ). ಬೆಂಗಳೂರು ನಗರದಲ್ಲಿ 5 ವಾಸದ ಮನೆಗಳು, ನೆಲಮಂಗಲ ತಾಲೂಕಿನ ಸೋಂಪುರ ಗ್ರಾಮದಲ್ಲಿ 4 ಮನೆಗಳು, ಬೆಂಗಳೂರು ನಗರದಲ್ಲಿ 8 ನಿವೇಶನಗಳು, ನೆಲಮಂಗಲ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ಒಟ್ಟು 10 ಎಕರೆ 20 ಗುಂಟೆ ಕೃಷಿ ಜಮೀನು, 850 ಗ್ರಾಂ ಚಿನ್ನಾಭರಣಗಳು, 9 ಕೆಜಿ 500 ಗ್ರಾಂ ಬೆಳ್ಳಿ ಸಾಮಾನುಗಳು. ನಗದು ಹಣ 15,00,000 ರೂ. ಗಳು ಹಾಗೂ ಸುಮಾರು 98 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

* ಬಿ. ಕೃಷ್ಣಾರೆಡ್ಡಿ. (ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನಗಳು, ಬೆಂಗಳೂರು). ವಿವಿಧ ನಗರದಲ್ಲಿ 3 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 9 ನಿವೇಶನಗಳು, ಚಿಂತಾಮಣಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 5 ಎಕರೆ 30 ಗುಂಟೆ ಕೃಷಿ ಜಮೀನು, ಹೊಸಕೋಟೆ ತಾಲ್ಲೂಕಿನಲ್ಲಿ 1 ಪೆಟ್ರೋಲ್ ಬಂಕ್, 383 ಗ್ರಾಂ ಚಿನ್ನದ ಆಭವರಣಗಳು. 3395 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 3,00,000 ರೂ. ಗಳು ಪತ್ತೆಯಾಗಿರುತ್ತದೆ.

English summary
The Anti Corruption Bureau (ACB) conducted raid in Karnataka 68 place belongs to 15 government officials searched. Here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X