ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸೆಮಣೆ ಏರುವ ಮೊದಲೇ ಜೈಲು ಸೇರಿದ ಅಬಕಾರಿ ಉಪ ನಿರೀಕ್ಷಕಿ ಪ್ರೀತಿ ರಾಥೋಡ್!

|
Google Oneindia Kannada News

ಬೆಂಗಳೂರು, ಏ. 19: ಖಾತೆ ಮಾಡಿಕೊಡಲು ಬಿಬಿಎಂಪಿ ಟ್ಯಾಕ್ಸ್ ಇನ್‌ಸ್ಪೆಕ್ಟರ್ ಸೋಗಿನಲ್ಲಿ ಲಂಚ ಸ್ವೀಕರಿಸಿ ಖಾಸಗಿ ವ್ಯಕ್ತಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಮದ್ಯ ಅಕ್ರಮ ಸಾಗಣೆ ಮಾಡುತ್ತಿದ್ದ ವಾಹನವನ್ನು ಪ್ರಕರಣದಿಂದ ಕೈ ಬಿಡಲು 50 ಸಾವಿರ ರೂ. ಲಂಚ ಸ್ವೀಕರಿಸಿ ಅಬಕಾರಿ ಉಪ ನಿರೀಕ್ಷಕಿ ಕುಮಾರಿ ಪ್ರೀತಿ ರಾಥೋಡ್ ಜೈಲು ಸೇರಿದ್ದಾರೆ.

ಎಸಿಬಿ ಬಲೆಗೆ ಬಿಬಿಎಂಪಿ ನಕಲಿ ಇನ್‌ಸ್ಪೆಕ್ಟರ್: ಬಿಬಿಎಂಪಿ ನಕಲಿ ಟ್ಯಾಕ್ಸ್ ಇನ್‌ಸ್ಪೆಕ್ಟರ್ ಲಂಚದ ಸಮೇತ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಚ್ಚರಿ ಏನೆಂದರೆ ಖಾಸಗಿ ವ್ಯಕ್ತಿಯನ್ನೇ ಬಿಬಿಎಂಪಿ ಕಚೇರಿಯಲ್ಲಿ ಕೂರಿಸಿ ಸಾರ್ವಜನಿಕರಿಂದ ಲಂಚ ವಸೂಲಿಗೆ ಸರ್ಕಾರಿ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬಿಬಿಎಂಪಿ ಟ್ಯಾಕ್ಸ್ ಇನ್‌ಸ್ಪೆಕ್ಟರ್ ಚಂದ್ರು ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಎಚ್‌ಎಎಲ್ 2ನೇ ಹಂತದಲ್ಲಿರುವ ಕಚೇರಿಯಲ್ಲಿ ಕೂತು ಚಂದ್ರು ಕಾರ್ಯ ನಿರ್ವಹಿಸುತ್ತಿದ್ದ. ಎಚ್‌ಎಎಲ್ ನಿವಾಸಿಯೊಬ್ಬರು ಹೊಸದಾಗಿ ಫ್ಲಾಟ್ ಖರೀದಿ ಮಾಡಿದ್ದರು. ತನ್ನ ಫ್ಲಾಟ್ ಖಾತೆ ಮಾಡಿಕೊಡುವಂತೆ ಆತ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದ. ತಾನೇ ಬಿಬಿಎಂಪಿ ಟ್ಯಾಕ್ಸ್ ಇನ್‌ಸ್ಪೆಕ್ಟರ್ ಎಂದು ಬಿಂಬಿಸಿಕೊಂಡಿದ್ದ ಚಂದ್ರು, 25 ಸಾವಿರ ಕೊಟ್ಟರೆ ಖಾತೆ ಮಾಡಿಕೊಡುವುದಾಗಿ ತಿಳಿಸಿದ್ದರು.

ACB Officials Arrested a Excise Sub Inspector Who Is Accused of Accepting Fifty Thousand Bribe

ಮಂಗಳವಾರ 22 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಚಂದ್ರುನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿಸಿದ ವೇಳೆ ಈತ ಬಿಬಿಎಂಪಿ ಟ್ಯಾಕ್ಸ್ ಇನ್‌ಸ್ಪೆಕ್ಟರ್ ಅಲ್ಲ. ಖಾಸಗಿ ವ್ಯಕ್ತಿ ಎಂಬುದು ಗೊತ್ತಾಗಿದೆ. ಬಿಬಿಎಂಪಿ ತೆರಿಗೆ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿ ಚಂದ್ರು ಕೂರಲು ಅವಕಾಶ ಮಾಡಿಕೊಟ್ಟ ಬಗ್ಗೆ ಎಸಿಬಿ ಅಧಿಕಾರಿಗಳೇ ತನಿಖೆ ಆರಂಭಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿದ್ದು ಈ ಕುರಿತು ಎಸಿಬಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅಬಕಾರಿ ಉಪ ನಿರೀಕ್ಷಕಿ ಜೈಲಿಗೆ: ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನವನ್ನು ಪ್ರಕರಣದಿಂದ ಕೈ ಬಿಡಲು 50 ಸಾವಿರ ರೂ. ಲಂಚ ಸ್ವೀಕರಿಸಿ ಜೈಲು ಸೇರಿದ್ದಾಳೆ.

ACB Officials Arrested a Excise Sub Inspector Who Is Accused of Accepting Fifty Thousand Bribe

ಅವಿವಾಹಿತ ಅಬಕಾರಿ ಉಪ ನಿರೀಕ್ಷಕರಿ ಕು. ಪ್ರೀತಿ ರಾಥೋಡ್ ಜೈಲು ಸೆರಿದ ಅಧಿಕಾರಿ. ಕೋಡಿಭಾಗದ ನಿವಾಸಿಯೊಬ್ಬರ ಮೇಲೆ ಅಕ್ರಮ ಮದ್ಯ ಸಾಗಣೆ ಮಾರಾಟ ಮಾಡಿದ ಪ್ರಕರಣದಲ್ಲಿ ಬೈಕ್ ಜಪ್ತಿ ಮಾಡಿದ್ದರು ಆಂಕೋಲ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಪ್ರಕರಣದಲ್ಲಿ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಪ್ತಿಯಾಗಲಿದ್ದ ಬೈಕ್ ನ್ನು ಪ್ರಕರಣದಿಂದ ಕೈ ಬಿಡಲು 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಳು ಕುಮಾರಿ ಪ್ರೀತಿ ರಾಥೋಡ್. ಅಂತಿಮವಾಗಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಉತ್ತರ ಕನ್ನಡ ಎಸಿಬಿ ಅಧಿಕಾರಿಗಳು ಬಂಧಿಸಿ ಜೈಲಿಗೆ ರವಾನಿಸಿದ್ದಾರೆ

Recommended Video

ಕ್ರಿಕೆಟ್ ಸ್ಟೇಡಿಯಂನಲ್ಲೂ KGF ಹವಾ: RCB ಗೆ ಚಿಯರ್ಸ್ ಮಾಡಿದ ಸಂಜಯ್ ದತ್ ಮತ್ತು ರವೀನಾ | Oneindia Kannada

English summary
ACB Operation against Bribe: ACB officials have arrested two govt servants in separate bribe case in Bengaluru and uttara kananda know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X