ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರಕ್ಕೆ ಧಿಕ್ಕಾರ!

By Mahesh
|
Google Oneindia Kannada News

ಬೆಂಗಳೂರು, ಜೂನ್ 09: ಒಂದೆಡೆ ದೆಹಲಿಯಲ್ಲಿ ಜನಸಾಮಾನ್ಯರ ಸರ್ಕಾರ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲು ಪಣತೊಟ್ಟಿ ನಿಂತಿದೆ, ಇನ್ನೊಂದೆಡೆ, ಶಿಕ್ಷಣ ಇಲಾಖೆಯನ್ನೇ ಹಣಕ್ಕಾಗಿ ಮಾರಿಕೊಂಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ 2958 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಮುಚ್ಚುವ ಹುನ್ನಾರ ನಡೆಸಿದೆ ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆರೋಪಿಸಿದೆ

ಸಾರ್ವಜನಿಕ ಒತ್ತಡಕ್ಕೆ ಮಣಿದು ಒಂದೇ ದಿನದಲ್ಲಿ ಈ ಶಾಲೆಗಳನ್ನು ಮುಚ್ಚಲು ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದಿದೆ. ಈ ಇಡೀ ನಾಟಕ ನಡೆದಿದ್ದು ಶಾಲೆಗಳನ್ನು ಮುಚ್ಚಿ ಅಲ್ಲಿನ ಜಾಗ ಕಬಳಿಸುವ ಹುನ್ನಾರವೇ?

ಕನ್ನಡ ಶಾಲೆಗಳನ್ನು ಮುಚ್ಚಿ ರಾಜಕಾರಣಿಗಳ ಮಾಲೀಕತ್ವದ ಖಾಸಗಿ ಶಾಲೆಗಳ ಬ್ಯುಸಿನೆಸ್ ಹೆಚ್ಚಿಸುವುದಕ್ಕಾಗಿಯೇ? ಒಂದೆಡೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸವನ್ನೂ ಮಾಡದೇ, ಇನ್ನೊಂದೆಡೆ ಖಾಸಗಿ ಶಾಲೆಗಳಿಂದ ಶಿಕ್ಷನವನ್ನು ವ್ಯಾಪಾರೀಕರಣವನ್ನೂ ತಡೆಯದಿದ್ದರೆ, ಬಡ ಮಕ್ಕಳ ಶಿಕ್ಷಣದ ಗತಿಯೇನು? ಇದಕ್ಕೆ ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರೇ ಉತ್ತರ ನೀಡಬೇಕಿದೆ!

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಶಾಲಾ ಕೊಠಡಿಗಳು, ಸ್ವಚ್ಛತೆ, ಇವೆಲ್ಲವೂ ಸರಿಯಾಗಿ ಇಲ್ಲದಿದ್ದರೂ ತಮ್ಮ ಮಕ್ಕಳು ಓದು-ಬರಹ ಕಲಿಯಲಿ ಎಂಬ ಏಕೈಕ ಆಸೆಯಿಂದ ಪೋಷಕರು ಅವರನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ.

AAP Protest against move to close down Kannada Medium Government Schools

ಮಕ್ಕಳ ಕೊರತೆ ಕಾರಣವೇ?: ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸಲಾಗದ ಶಿಕ್ಷಣ ಸಚಿವರು ಮಕ್ಕಳ ಕೊರತೆಯ ನೆಪವೊಡ್ಡಿ ಶಾಲೆಗಳನ್ನು ಮುಚ್ಚಲು ಹೊರಟಿದ್ದು ಇಡೀ ರಾಜ್ಯಕ್ಕೆ ದುರದೃಷ್ಟಕರ ಸಂಗತಿ. ಆದರೆ ಒಂದೊಮ್ಮೆ ತಮ್ಮ ಮಕ್ಕಳು ಓದುವ ಶಾಲೆ ಮುಚ್ಚಬಹುದು ಎಂಬ ಭಯ ಮೂಡಿದರೆ, ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹೆದರುತ್ತಾರೆ.

ಪೋಷಕರನ್ನು ಹೆದರಿಸಿ, ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸದಂತೆ ಮಾಡಿ ಮಕ್ಕಳ ಕೊರತೆಯನ್ನು ನೆಪವೊಡ್ಡಿ ಈ ಪ್ರಮಾಣದಲ್ಲಿ ಶಾಲೆಗಳನ್ನು ಮುಚ್ಚುವುದು ಶಿಕ್ಷಣ ಸಚಿವರ ಪಿತೂರಿಯಾಗಿದೆ. ಪೋಷಕರ ಅಸಹಾಯಕ ಸ್ಥಿತಿ ಕಿವುಡು ಹಾಗೂ ಕುರುಡು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಲೆಕ್ಕಕ್ಕೇ ಇಲ್ಲದಾಗಿದೆ.

ಖಾಸಗಿ ಶಾಲೆಗಳ ಅಕ್ರಮ ಡೊನೇಷನ್, ಆರ್ ಟಿಐ ಮೂಲಕ ಪ್ರವೇಶ ಪಡೆಯುವ ಬಡ ಮಕ್ಕಳಿಗೆ ಹೆಚ್ಚುವರಿ ಶುಲ್ಕ ಪಾವತಿಸದೇ ಸೀಟು ದೊರೆಯದ ಪರಿಸ್ಥಿತಿ, ಅನಿಯಮಿತ ಶಾಲಾ ಶುಲ್ಕ, ಇವೆಲ್ಲವನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಖಾಸಗಿ ಶಾಲೆಗಳ ಆಡಿಟ್ ನಡೆಸಿ, ಅವುಗಳ ಅಕ್ರಮ ಡೊನೇಷನ್ ಪಡೆಯುವುದಕ್ಕೆ ನಿಷೇಧ ಹೇರುವಂತೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಸತತವಾಗಿ ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೇರುತ್ತಾ ಬಂದಿದೆ.

ಆಮ್ ಆದ್ಮಿ ಪಾರ್ಟಿಯ ಪ್ರಯತ್ನದಿಂದಾಗಿ, ಆರ್ ಟಿಐ ಅಡಿಯಲ್ಲಿ ಪ್ರವೇಶ ಪಡೆಯುಲು ಅದೇ ವಾರ್ಡ್ ನ ನಿವಾಸಿಯಾಗಿರಬೇಕೆಂಬ ನಿಯಮವನ್ನು ಸರ್ಕಾರ ತೊಡೆದುಹಾಕಿ ಮಿತಿಯನ್ನು 1 ಕಿಮೀ ವ್ಯಾಪ್ತಿಗೆ ಹೆಚ್ಚಿಸಿತು.

ಈ ದೇಶದ ಪ್ರತಿಯೊಂದು ಮಗುವಿಗೂ ಅತ್ಯುನ್ನತ್ತ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ತಮ್ಮದೇ ಕ್ಷೇತ್ರದ ಕಿನ್ನಲಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಬಿಸಿಯೂಟಕ್ಕೆ ಅಕ್ಕಿಯನ್ನೂ ಒದಗಿಸಲಾಗದ ಶಿಕ್ಷಣ ಸಚಿವರು, ಇನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೇಗೆ ಒದಗಿಸಬಲ್ಲರು? ಇಂತಹ ಬೇಜವಾಬ್ದಾರಿ ಹಾಗೂ ಅಸಮರ್ಥ ಶಿಕ್ಷಣ ಮಂತ್ರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.

English summary
Congress Government in Karnataka which has sold its education department for money and is planning to close down 2,958 schools in the name of mergers. Under pressure from general public the Government has withdrawn its circular within 24 hours alleges AAP Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X