• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹದಾಯಿ ಕಳಸಾಬಂಡೂರಿ ಶೀಘ್ರವೇ ಅಧಿಸೂಚನೆ ಹೊರಡಿಸಿ: ಎಎಪಿ

|

ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ, ಗದಗ್, ಬೆಳಗಾವಿ ಭಾಗದ ರೈತರುಗಳ ಸತತ 4 ವರ್ಷಗಳ ನಿರಂತರ ಧರಣಿ - ಸತ್ಯಾಗ್ರಹಗಳು ಹಾಗೂ ಅನೇಕಾನೇಕ ಹೋರಾಟಗಳ ಫಲಶ್ರುತಿಯೆಂಬಂತೆ ಕಳೆದ ವರ್ಷದ 2018ರ ಆಗಸ್ಟ್ 14ರಂದು ಮಹದಾಯಿ ಕಳಸಾ ಬಂಡೂರಿ ನ್ಯಾಯಾಧೀಕರಣದ ಮಹತ್ವದ ತೀರ್ಪು ಬಂದು ಕರ್ನಾಟಕ ರಾಜ್ಯದ ಈ ಎಲ್ಲಾ ಜಿಲ್ಲೆಗಳು 13.5 ಟಿ.ಎಂ.ಸಿ. ಯಷ್ಟು ನೀರನ್ನು ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದೆಂದು ಮಹತ್ವದ ತೀರ್ಪನ್ನು ನೀಡಿತು.

ಈ ಮಹತ್ವದ ತೀರ್ಪು ಬಂದು 14 ತಿಂಗಳುಗಳು ಕಳೆದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನೀರನ್ನು ಬಳಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸದಿರುವುದು ತೀರಾ ದುರದೃಷ್ಟಕರ ಹಾಗೂ ದುರ್ದೈವದ ಸಂಗತಿಯೆಂದೇ ಹೇಳಬಹುದು. ಈ ಹಿಂದೆ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ಈ ಭಾಗದ ರೈತರಿಗೆ ಕೂಡಲೇ ನೀರನ್ನು ಪೂರೈಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆಂದು ಭರವಸೆಯನ್ನು ನೀಡಿ ಮತಯಾಚಿಸಿದ್ದರು.

ಪ್ರಸ್ತಾವ ತಿರಸ್ಕರಿಸಿದ ಗೋವಾ ಸಿಎಂ; ಮತ್ತೆ ಮುನ್ನೆಲೆಗೆ ಬಂದ ಮಹದಾಯಿ ವಿವಾದ

ಆದರೂ ಸಹ ಕೇಂದ್ರವು ಈ ಬಗ್ಗೆ ಇನ್ನೂ ಸಹ ಅಧಿಸೂಚನೆಯನ್ನೇ ಹೊರಡಿಸದ ರೈತರುಗಳನ್ನು ಅನೇಕ ವರ್ಷಗಳ ಸಂಕಷ್ಟಗಳಿಂದ ಪಾರುಮಾಡದೆ ಮತ ನೀಡಿದ ಜನತೆಗೆ ಮೋಸವನ್ನು ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರಸ್ತುತ ಈ ವಿಚಾರದಲ್ಲಿ ಸದಾ ಖ್ಯಾತೆ ತೆಗೆಯುತ್ತಿದ್ದ ಗೋವಾ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ರಾಜದಲ್ಲಿಯೂ ಸಹ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಸಹ ಕೇಂದ್ರವು ಈ ಬಗ್ಗೆ ಅಧಿಸೂಚನೆಯನ್ನೇ ಹೊರಡಿಸದಿರುವುದು ಅತ್ಯಂತ ಬೇಸರ ಹಾಗೂ ದುಃಖದಾಯಕ ಸಂಗತಿಯಾಗಿದೆ. ಈ ನಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿ ಇದುವರೆವಿಗೂ ಯಾವ ರಾಜ್ಯದವರೂ ಸಹ ಮೇಲ್ಮನವಿಯನ್ನು ಸಲ್ಲಿಸದಿದ್ದರೂ ಸಹ ಇದೇ ಸುಳ್ಳು ನೆಪವನ್ನು ಹೇಳಿಕೊಂಡು ರಾಜ್ಯದ ಈ ಹಿಂದಿನ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಮತ್ತು ಈಗಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಗಳು ರೈತರ ಹಾದಿ ತಪ್ಪಿಸುತ್ತಿರುವುದು ಕಳವಳಕಾರಿಯಾಗಿದೆ.

ಈ ನೀರಿನ ವ್ಯಾಜ್ಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿ ಇರಾದೆ ಈ ಮೂರು ಪಕ್ಷಗಳಿಗೆ ಇದ್ದಂತಿದೆ. ನಿನ್ನೆಯಿಂದ ರೈತರು ಧರಣಿ ನಡೆಸುತ್ತಿದ್ದರೂ ಸಹ ಸ್ಥಳಕ್ಕೆ ಸರ್ಕಾರದ ಯಾವುದೇ ಮಂ ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದಾ ಜೀವಂತವಾಗಿಟ್ಟುಕೊಳ್ಳಬೇಕೆಂಬ ಗಳಿಗೆ ಇದ್ದಂತಿದೆ. ನಿನ್ನೆಯಿಂದ ರೈತರುಗಳು ನಗರದ ರೈಲು ನಿಲ್ದಾಣದಲ್ಲಿ ಆಹೋರಾತ್ರಿ ಸಹ ಸಳಕ್ಕೆ ಸರ್ಕಾರದ ಯಾವುದೇ ಮಂತ್ರಿ ಮಹೋದಯರುಗಳು ಭೇಟಿ ನೀಡಿಲ್ಲ.

ಯಡಿಯೂರಪ್ಪನವರು ಒಂದು ಹೆಜ್ಜೆ ಮುಂದೆ ಹೋಗಿ ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ನೀರು ಹರಿಸುತೇನೆಂಬ ರಾಜಕೀಯ ಕುಚೋದ್ಯದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ರಾಜ್ಯದ 28 ಸಂಸದರು ಅದರಲೂ 25 ಬಿಜೆಪಿ ಸಂಸದರು ಹಾಗೂ ಮುಖ್ಯ ಮಂತ್ರಿ ಯಡಿಯೂರಪ್ಪನವರು ಕೇಂದ್ರದ ಮುಂದೆ ಇನ್ನೂ ಒತ್ತಾಯಪಡಿಸದೇ ತಮ್ಮರಾಜಕೀಯ ಹೊಣೆಗೇಡಿತನ ಹಾಗೂ ಸೋಮಾರಿತನವನ್ನು ಮೆರೆಯುತ್ತಿದ್ದಾರೆ. ಈಗಲಾದರೂ ಕೇಂದ್ರ ಸರ್ಕಾರವು ಈ ಬಗ್ಗೆ ಕೂಡಲೇ ಅಧಿಸೂಚನೆಯನ್ನು ಹೊರಡಿಸುವುದರ ಮೂಲಕ ಉತ್ತರ ಕರ್ನಾಟಕದ ಈ ಭಾಗದ ರೈತರುಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಮ್ ಆದ್ಮ ಪಕ್ಷವು ಒತ್ತಾಯಿಸುತ್ತದೆ.

ಪತ್ರಿಕಾ ಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ವಿ.ಸದಂ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಮುಖಂಡರಾದ ಬಸವರಾಜ್ ಮುದಿಗೌಡರ್‍, ಜ್ಯೋತಿ ಕುಮಾರ್‍ ಭಾಗವಹಿಸಿದ್ದರು.

English summary
AAP Karnataka demands Notification by BS Yediyurappa government on Mahadayi Kalasa Banduri work progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more