ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಡಿತರ ಪಡೆಯಲು ಆಧಾರ್ ಕಡ್ಡಾಯವಲ್ಲ : ಯು.ಟಿ.ಖಾದರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30 : 'ಪಡಿತರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಹೊಸ ರೇಷನ್ ಕಾರ್ಡ್ ಮಾಡಿಸಲು ಮಾತ್ರ ಆಧಾರ್ ಕಡ್ಡಾಯ' ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.

ವಿಕಾಸಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, 'ಪಡಿತರ ವಿತರಣೆಗೆ ಆಧಾರ್ ಲಿಂಕ್ ಬೇಕಾಗಿಲ್ಲ. ಆಧಾರ್ ಕಾರ್ಡ್‌ ಇಲ್ಲವೆಂದ ಕಾರಣಕ್ಕೆ ಪಡಿತರ ನೀಡಬಾರದು ಎಂಬ ನಿಯಮವಿಲ್ಲ. ಡೇಟಾ ಪ್ರಕಾರ ಎಲ್ಲರಿಗೂ ಪಡಿತರ ನೀಡಬೇಕು' ಎಂದರು.

ವಿಮಾನ ಪ್ರಯಾಣಿಕರಿಗೆ ಈ ಹತ್ತರಲ್ಲಿ ಒಂದು ಐಡಿ ಪ್ರೂಫ್ ಸಾಕುವಿಮಾನ ಪ್ರಯಾಣಿಕರಿಗೆ ಈ ಹತ್ತರಲ್ಲಿ ಒಂದು ಐಡಿ ಪ್ರೂಫ್ ಸಾಕು

Aadhar card not mandatory to get ration in Karnataka

'ರಾಜ್ಯದಲ್ಲಿ 20,342 ರೇಷನ್ ಅಂಗಡಿಗಳಿವೆ. 1 ಕೋಟಿ 8 ಲಕ್ಷ ಕಾರ್ಡ್ ದಾರರಿಗೆ ಬಾರ್ ಕೋಡ್ ವಿತರಣೆಯಾಗಿದೆ. ಮುಂದಿನ 2-3 ತಿಂಗಳಿನಲ್ಲಿ ಎಲ್ಲರಿಗೂ ಬಾರ್ ಕೋಡ್ ವಿತರಿಸುತ್ತೇವೆ. ಬಾರ್ ಕೋಡ್ ಬೇಕಾದರೆ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ಇರಬೇಕು' ಎಂದು ತಿಳಿಸಿದರು.

ನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದುನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದು

ಸಾಂವಿಧಾನಿಕ ಪೀಠ ರಚನೆ : ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸಾಂವಿಧಾನಿಕ ಪೀಠ ರಚನೆಗೆ ಸುಪ್ರೀಂಕೋರ್ಟ್‌ ಮುಂದಾಗಿದೆ. ಆಧಾರ್‌ ವಿರೋಧಿಸಿರುವ ಅರ್ಜಿಗಳ ವಿಚಾರಣೆಯು ನವೆಂಬರ್‌ ಕೊನೆಯ ವಾರದಲ್ಲಿ ಸಾಂವಿಧಾನಿಕ ಪೀಠದಲ್ಲಿ ಆರಂಭವಾಗಲಿದೆ.

English summary
Minister for Food and Public Distribution U.T.Khader said Aadhaar card was not mandatory to collect food from the public distribution system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X