ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳು 'ಮಣಿ' ಕನ್ನಡಿಗರ ಕಣ್ಮಣಿಯಾದ ಕಥೆ

By ರಾಘವೇಂದ್ರ ಅಡಿಗ
|
Google Oneindia Kannada News

ಸುಮಾರು ಮೂವತ್ತೆರಡು ವರ್ಷಗಳ ಹಿಂದೆ ಕನ್ನಡದಲ್ಲಿ "ಸಂಜೆವಾಣಿ" ಎಂಬ ನಾಮಾಂಕಿತದಲ್ಲಿ ಸಂಜೆ ದೈನಿಕವನ್ನು ಶುರು ಮಾಡಿ, ಕನ್ನಡ ಮಾಧ್ಯಮ ಕ್ಷೇತ್ರಕ್ಕಿಳಿದು ಹೊಸ ಆಯಾಮ ನೀಡಿದವರು.

ಮಣಿ ಅವರ ಭಾಷೆ ತಮಿಳು. ತಮಿಳು ಭಾಷೆ ಬರಹಗಾರ ಪತ್ರಕರ್ತರಾಗಿದ್ದರೂ ಕನ್ನಡ ಮಾಧ್ಯಮದಲ್ಲಿ ಅವರು ಮನೆಮಾತು, ಪ್ರಗತಿಪರ ಚಿಂತಕ ಹಾಗೂ ತಲೆಮಾರಿಗೆ ಹೊಸ ದೃಷ್ಟಿ ಒದಗಿಸಿದ ಪಿ.ಲಂಕೇಶ್ ಸಾಂಗತ್ಯದ ಮೂಲಕ ಕನ್ನಡ ಭಾಷಾ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು-ದೆಸೆ ಒದಗಿಸಿದ್ದು ಮಣಿಯವರ ಹೆಗ್ಗಳಿಕೆ. ಬಿ.ಎಸ್ ಮಣಿ ಅವರ ಸ್ಮರಣಾರ್ಥ ಒಂದು ಪರಿಚಯಾತ್ಮಕ ಲೇಖನ ಇಲ್ಲಿದೆ.

ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ನಾಗಲಾಪುರಂ ಗ್ರಾಮದಲ್ಲಿ 1936ರಲ್ಲಿ ಜನಿಸಿದ ಬಿ.ಎಸ್.ಮಣಿ ಇವರ ತಂದೆ ತಂಗವೇಲು ನಾಡಾರ್ ಹಾಗೂ ತಾಯಿ ಶೇಷಮ್ಮಳ್ ಕಿರಿಯ ವಯಸ್ಸಿನಲ್ಲೇ ಮಾತೃವಿಯೋಗವ ಅನುಭವಿಸಿದ್ದ ಮಣಿಯವರಿಗೆ ಓದಿನಲ್ಲಿ ಅಪಾರ ಆಸಕ್ತಿ ಇತ್ತು.

8ನೇ ತರಗತಿಯವರೆಗೆ ಅಲ್ಫೋನ್ಸ್ ಶಾಲೆಯಲ್ಲಿ ಕಲಿತ ಮಣಿಯವರು 10ನೇ ತರಗತಿಯನ್ನು ಚೆನ್ನೈನಲ್ಲಿ ಮುಗಿಸಿದ್ದರು.ಮುಂದೆ ಚೆನ್ನೈನ ಸರಕಾರಿ ಕಾಲೇಜಿನಲ್ಲಿ ಸಾಹಿತ್ಯ ವಿಷಯದಲ್ಲಿ ಎಂ.ಎ. ಮಾಡಿದ್ದಲ್ಲದೆ ರಾಜ್ಯಕ್ಕೇ ಪ್ರಥಮ ಸ್ಥಾನ ಬಂದು ಚಿನ್ನದ ಪದಕ ವಿಜೇತರಾದರು.

B S Mani

ಕನ್ನಡ ಪತ್ರಿಕೆ ಆರಂಭಿಸುವಂತೆ ಕಾಮರಾಜ್ ಸಲಹೆ: 'ದಿನತಂತಿ', 'ಮಾಲೈ ಮುನಸು'ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ ಮಣಿ 1964ರಲ್ಲಿ 'ದಿನಸುಡರ್'ಎನ್ನುವ ಪತ್ರಿಕೆ ಪ್ರಾರಂಭಿಸಿದರು.

ಬೆಂಗಳೂರಿನ ವಿಕ್ಟೋರಿಯಾ ಬಡಾವಣೆಯಲ್ಲಿ ಆ ನೂತನ ತಮಿಳು ಪತ್ರಿಕೆ ಕಛೇರಿ ಉದ್ಘಾಟನೆಗಾಗಿ ಬಂದ ಕಾಮರಾಜ್ ನಾದಾರ್ ಕನ್ನಡದಲ್ಲಿ ಪತ್ರಿಕೆ ಪ್ರಾರಂಭಿಸಲು ಸೂಚಿಸಿದ್ದರು. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮಣಿಯವರು 1982ರ ಡಿಸೆಂಬರ್ 10ರಂದು 'ಸಂಜೆವಾಣಿ' ಕನ್ನಡ ಸಂಜೆ ಪತ್ರಿಕೆಯನ್ನು ಪ್ರಾರಂಭಿಸಿದರು.

ಕನ್ನಡ ಪತ್ರಿಕೋದ್ಯಮದಲ್ಲಿ ಯಶಸ್ಸು ಕಂಡ ಸಂಜೆ ದಿನಪತ್ರಿಕೆಗಳು ಕೇವಲ ಬೆರಳೆಕೆಯಷ್ಟು ಮಾತ್ರ ಸಂಜೆವಾಣಿಗಿಂತಲೂ ಮುನ್ನ ಮತ್ತು ನಂತರದಲ್ಲಿ ಜನ್ಮತಾಳಿದ್ದ ಹಲವು ಸಂಜೆ ದೈನಿಕಗಳು ಮಾರುಕಟ್ಟೆಯಲ್ಲಿ ಗೆಲುವು ಸಾಧಿಸಲಾಗಲಿಲ್ಲ ಎಂಬುದು ಕಟು ಸತ್ಯ.

ಅಂತಹದರಲ್ಲಿಯೂ 33 ವರ್ಷಗಳ ಹಿಂದೆಯೇ, ಓದುಗರಿಗೆ ಅಂದಿನ ಸುದ್ದಿಯನ್ನು ಅಂದೇ ತಲುಪಿಸುವ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದದ್ದು ಸಂಜೆವಾಣಿಯ ಸಾಹಸಕ್ಕೊಂದು ನಿದರ್ಶನ. ಇದಕ್ಕೆ ಪ್ರಮುಖ ಹಾಗೂ ಮೂಲ ಕಾರಣ ಸಂಜೆವಾಣಿಯ ಸಂಸ್ಥಾಪಕ ಬಿ. ಎಸ್. ಮಣಿ ಅವರ ದೂರದೃಷ್ಠಿ ಮತ್ತು ಶ್ರಮ ಎಂದರೆ ಅತಿಶಯೋಕ್ತಿಯಲ್ಲ.

B S Mani

ತಮಿಳು ಸಾಹಿತಿಯೂ ಆಗಿದ್ದ ಮಣಿ ಅವರು ಕಥೆ, ಕಾದಂಬರಿ, ಸಂಶೋಧನೆಗಳೂ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಹೀಗೆ ಮಣಿ ಅವರು ಸಾಹಿತಿಯಾಗಿ, ಪತ್ರಕರ್ತರಾಗಿ ಜನಮನ್ನಣೆ ಗಳಿಸಿದ್ದರುತಮ್ಮ ತೀಕ್ಷ್ಣ ಚಿಂತನೆಗಳು, ಸುದ್ದಿ ಯನ್ನು ಗುರುತಿಸುವ ರೀತಿಯಿಂದಲೂ ಎಲ್ಲರನ್ನೂ ಬೆರಗುಗೊಳಿಸಿದ್ದರು.

ಕನ್ನಡ ಹಾಗೂ ತಮಿಳು ಭಾಷಾ ಬಾಂಧವ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಮಣಿ ತಮ್ಮ ಸಂಸ್ಥೆಯಿಂದ ಹೊರತರುತ್ತಿದ್ದ 'ಚೇತನ'ಎನ್ನುವ ಹೆಸರಿನ ಮಾಸಿಕದಲ್ಲಿ ಕನ್ನದದ ಖ್ಯಾತನಾಮರ ಕಾದಂಬೈಸಿ ರಿ, ಕಥೆಗಳನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಜನರಲ್ಲಿ ಸಾಹಿತ್ಯಾಭಿರುಚಿ ಹುಟ್ತಲು ಕಾರಣರಾಗಿದ್ದರು. ಮಣಿಯವರು ತಮ್ಮ ಸರಳ, ಸಜ್ಜನಿಕೆ ಸ್ವಭಾವದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಹೀಗೆ ಸಾಹಿತಿಯಾಗಿ, ಪತ್ರಕರ್ತರಾಗಿ ಜನಮನ್ನಣೆ ಗಳಿಸಿದ್ದ ಮಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾನಾ ಪುರಸ್ಕಾರಗಳು ಸಂದಿವೆ. ಮಣಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮಾಧ್ಯಮ ಲೋಕ ಹಾಗೂ ಸಂಜೆ ವಾಣಿ ಬಳಗ ಸಂತಾಪ ವ್ಯಕ್ತಪಡಿಸಿದೆ.

English summary
A Tribute to Senior media personality Sanjevani founder B.S. Mani. Balasubramani(B.S Mani) hailed from Thoothukudi district of Tamil Nadu. He became a prominent personality in the Kannada media space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X