ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮ್ಯಾ ವಿರುದ್ಧ ಬಿಜೆಪಿಯಿಂದ ಸೈಬರ್ ಕ್ರೈಂ ಪೊಲೀಸರಿಗೆ ದೂರು

|
Google Oneindia Kannada News

ಮಂಡ್ಯ, ಫೆಬ್ರವರಿ 7 : ಮಾಜಿ ಸಂಸದೆ ಹಾಗೂ ನಟಿ, ಕಾಂಗ್ರೆಸ್ ನ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆ ರಮ್ಯಾ ವಿರುದ್ಧ ಬೆಂಗಳೂರಿನಲ್ಲಿರುವ ಸೈಬರ್ ಕ್ರೈಂ ವಿಭಾಗಕ್ಕೆ ಬಿಜೆಪಿಯಿಂದ ದೂರು ಸಲ್ಲಿಸಲಾಗಿದೆ. ದೂರಿನಲ್ಲಿರುವ ಅಂಶಗಳು ಈ ರೀತಿ ಇವೆ.

ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಕುಮಾರಿ ರಮ್ಯಾ ಅವರು ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಾಗಾರದಲ್ಲಿ ತಮ್ಮ ಐಟಿ ಸೆಲ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಾ, ಫೇಸ್ ಬುಕ್ ನಲ್ಲಿ ವಿರೋಧ ಪಕ್ಷಗಳನ್ನು ಹಣಿಯಲು ಏನೇನು ಮಾಡಬೇಕು ಅನ್ನೋ ಬಗ್ಗೆ ಮಾತನಾಡಿದ್ದಾರೆ.

ರಮ್ಯಾ ಫೇಕ್ ಅಕೌಂಟ್ ಪಾಠಕ್ಕೆ ಸಾಮಾಜಿಕ ಮಾಧ್ಯಮ ಏನನ್ನುತ್ತೆ?ರಮ್ಯಾ ಫೇಕ್ ಅಕೌಂಟ್ ಪಾಠಕ್ಕೆ ಸಾಮಾಜಿಕ ಮಾಧ್ಯಮ ಏನನ್ನುತ್ತೆ?

ಫೇಸ್ ಬುಕ್ ನಲ್ಲಿ ಫೇಕ್ ಖಾತೆ ಗಳನ್ನು ತೆರೆಯಬೇಕು ಅನ್ನೋ ರಮ್ಯಾ ಅವರು, ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರಿಗೆ ಎಲ್ಲರೂ 3 ನಕಲಿ ಫೇಸ್ ಬುಕ್ ಖಾತೆಗಳನ್ನು ಈ ಕೂಡಲೇ ತೆರೆಯುವಂತೆ ಆದೇಶ ನೀಡಿದ್ದಾರೆ. ಹೀಗೆ ನಕಲಿ ಖಾತೆ ತೆರೆಯೋದು ತಪ್ಪಲ್ಲವೇ ಎಂದ ಪ್ರಾಮಾಣಿಕ ಕಾರ್ಯಕರ್ತನೊಬ್ಬನಿಗೆ ಫೇಸ್ ಬುಕ್ ನ ಫೇಕ್ ಅಕೌಂಟ್ ಪಾಠ ಮಾಡಿದ್ದು ಮಾಧ್ಯಮಗಳಲ್ಲಿ ಬಿತ್ತರವಾಗಿವೆ.

ಕಳ್ಳ ಬುದ್ಧಿ ಹೇಳಿಕೊಡೋದು ಎಷ್ಟು ಸರಿ?

ಕಳ್ಳ ಬುದ್ಧಿ ಹೇಳಿಕೊಡೋದು ಎಷ್ಟು ಸರಿ?

ದೇಶದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಂದ ಇಂದು ಸಾಕಷ್ಟು ಎಡವಟ್ಟುಗಳಾಗುತ್ತಿವೆ. ಇಂತಹ ಸಂದರ್ಭದಲ್ಲೇ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಈ ರೀತಿಯಾಗಿ ಟ್ರೈನಿಂಗ್ ಕೊಟ್ಟಿರೋದು ಎಷ್ಟು ಸರಿ? ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಒಬ್ಬ ಮಾಜಿ ಸಂಸದೆ, ಚಿತ್ರನಟಿ ತಮ್ಮ ಟ್ವೀಟ್ ಗನ್ ನಿಂದ ಮಾತುಗಳ ಗುಂಡು ಹಾರಿಸುತ್ತಾ, ನವ ತರುಣರಿಗೆ ಈ ರೀತಿ ಕಳ್ಳ ಬುದ್ಧಿ ಹೇಳಿಕೊಡೋದು ಎಷ್ಟು ಸರಿ?

ನಕಲಿ ಖಾತೆದಾರರು

ನಕಲಿ ಖಾತೆದಾರರು

ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸನ್ಮಾನ್ಯ ರಾಹುಲ್ ಗಾಂಧಿಯ ಟ್ವೀಟ್ ಅನ್ನು ಕೂಲಂಕಷವಾಗಿ ವಿಶ್ಲೇಷಣೆಗೆ ಒಳಪಡಿಸಿದಾಗ ನಕಲಿ ಖಾತೆಗಳಿಂದ ರಾಹುಲ್ ಅವರ ಟ್ವೀಟ್, ರೀಟ್ವೀಟ್ ಆಗಿರುವ ಅಂಶ ಬೆಳಕಿಗೆ ಬಂದಿತ್ತು. ರಷ್ಯಾ, ಕಜಕಿಸ್ತಾನ. ಅಫ್ಘಾನಿಸ್ಥಾನ, ಇಂಡೋನೇಷಿಯಾ ಟ್ವೀಟ್ ಗಳ ಗುಣಲಕ್ಷಣಗಳನ್ನು ಹೊಂದಿರುವ ಹೆಸರಿನ ನಕಲಿ ಖಾತೆದಾರರು ರಾಹುಲ್ ಅವರ ಟ್ವೀಟ್ ಗಳನ್ನು ಮರುಟ್ವೀಟ್ ಮಾಡುತ್ತಿದ್ದರು.

ಟ್ವಿಟ್ಟರ್ ಕಂಪನಿಯಿಂದ ಅಡಿಟ್ ಮಾಡಿಸಿ

ಟ್ವಿಟ್ಟರ್ ಕಂಪನಿಯಿಂದ ಅಡಿಟ್ ಮಾಡಿಸಿ

ಬಹುಶಃ ಅದೇ ನಕಲಿ ತಂತ್ರವನ್ನು ತಮ್ಮ ಕಾರ್ಯಕರ್ತರಿಗೆ ರಮ್ಯಾ ಈಗ ಹೇಳಿಕೊಡುತ್ತಿದ್ದಾರೆ. ಹಾಗಾಗಿ ಕಳ್ಳ ಮಾರ್ಗದಲ್ಲಿ ತಮ್ಮ ಫಾಲೋವರ್ ಗಳನ್ನೂ ಹೆಚ್ಚಿಸಿಕೊಂಡು ಬೀಗುತ್ತಿರುವ ಅನುಮಾನ ಕಾಡುತ್ತಿದೆ. ಹಾಗಾಗಿ ಅವರ ಟ್ವಿಟ್ಟರ್ ಅಕೌಂಟ್ ಅನ್ನು ಟ್ವಿಟ್ಟರ್ ಕಂಪನಿ ವತಿಯಿಂದ ಅಡಿಟ್ ಮಾಡಿಸಿ ಸತ್ಯವನ್ನು ಬಹಿರಂಗ ಪಡಿಸಬೇಕು.

50ಕ್ಕೂ ಹೆಚ್ಚು ಫೇಸ್ ಬುಕ್ ಅಕೌಂಟ್ ಗಳು

50ಕ್ಕೂ ಹೆಚ್ಚು ಫೇಸ್ ಬುಕ್ ಅಕೌಂಟ್ ಗಳು

ಜಗತ್ತಿನಾದ್ಯಂತ ಹತ್ತು ಹಲವಾರು ನಕಲಿ ಲೈಕ್ ಹಾಗೂ ನಕಲಿ ಫಾಲೋವರ್ ಗಳನ್ನು ಕ್ಷಣ ಮಾತ್ರದಲ್ಲಿ ಸೃಷ್ಟಿಸಿಕೊಡಬಲ್ಲ ಕಂಪನಿಗಳು ಕಾರ್ಯ ನಿರ್ವಹಿಸುತ್ತಿರುವುದು ಜಗಜ್ಜಾಹೀರ. ಕುಮಾರಿ ರಮ್ಯಾ ಅವರ ಹೆಸರಿನಲ್ಲಿ ಮತ್ತು ಅವರ ಭಾವಚಿತ್ರಗಳು ಮತ್ತು ಅವರ ವೈಯಕ್ತಿಕ ಫೋಟೋಗಳು ಇರುವ 50ಕ್ಕೂ ಹೆಚ್ಚು ಫೇಸ್ ಬುಕ್ ಅಕೌಂಟ್ ಗಳು ಕಾರ್ಯನಿರ್ವಹಿಸುತ್ತಿವೆ.

ಆಧಾರ್ ಲಿಂಕ್ ಮಾಡಿಸಿ

ಆಧಾರ್ ಲಿಂಕ್ ಮಾಡಿಸಿ

ಈ ಖಾತೆಗಳನ್ನು ಪರಿಶೀಲಿಸಿ ಅವು ನಕಲಿ ಖಾತೆಗಳಾಗಿದ್ದರೆ ಇನ್ ಫರ್ಮೇಷನ್ ಟೆಕ್ನಾಲಜಿ ಕಾಯ್ದೆ 2000, ಸೆಕ್ಷನ್ 66 ಡಿ ಅನ್ವಯ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಮ್ಯಾ ಅವರ ಫೇಸ್ ಬುಕ್ ಮತ್ತು ಟ್ವಿಟ್ಟರ್, ಇನ್ ಸ್ಟಾಗ್ರಾಮ್ , ಗೂಗಲ್ ಪ್ಲಸ್ ಅಕೌಂಟ್ ಗಳಿಗೆ ಈ ಕೂಡಲೇ ಆಧಾರ್ ಲಿಂಕ್ ಮಾಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರುದಾರರು ಹೇಳಿದ್ದಾರೆ.

English summary
Mandya BJP leader filed complaint against former MP and actress Ramya with cyber crime police, Bengaluru, alleging fake face book account creation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X