ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡೆದಾಡುವ ದೇವರ ಸರ್ಜರಿ ಮಾಡುತ್ತಿರುವ ವೈದ್ಯಲೋಕದ ಮಹಾನ್ ಸಾಧಕ

|
Google Oneindia Kannada News

ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ಚೆನ್ನೈ ನಗರದ ರೇಲಾ ಇನ್ ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ಗೆ ಶುಕ್ರವಾರ (ಡಿ 7) ದಾಖಲಿಸಲಾಗಿದೆ.

ರೇಲಾ ಆಸ್ಪತ್ರೆ ಶುಕ್ರವಾರ ರಾತ್ರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಶ್ರೀಗಳಿಗೆ ಪಿತ್ತನಾಳದ ಸೋಂಕಿನ ಸಂಬಂಧದ ಚಿಕಿತ್ಸೆ ನೀಡಲಾಗುತ್ತಿದ್ದು, ಎಂಡೋಸ್ಕೋಪಿ ಪ್ರಕ್ರಿಯೆಗಳಿಗೆ ಶ್ರೀಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ತಿಳಿಸಿದೆ. ಶನಿವಾರ (ಡಿ 8) ಬೆಳಗ್ಗೆ ಶ್ರೀಗಳಿಗೆ ಸರ್ಜರಿ ನಡೆಯುವ ಸಾಧ್ಯತೆಯಿದೆ.

ರೇಲಾ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಮೊಹಮ್ಮದ್ ರೇಲಾ, ಸಿದ್ದಗಂಗಾ ಶ್ರೀಗಳ ಚಿಕಿತ್ಸೆಯ ಖುದ್ದು ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಯಕೃತ್ತಿನ ಕಸಿಯ ವಿಚಾರದಲ್ಲಿ, ದೇಶದ ಪ್ರಸಿದ್ದ ವೈದ್ಯರಾಗಿರುವ ಡಾ, ಪ್ರೊ. ರೇಲಾ, ತಮ್ಮ ವೃತ್ತಿ ಜೀವನದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದವರು.

ಸುಮಾರು ಒಂದು ವಾರಗಳ ಕಾಲ ಸಿದ್ದಗಂಗಾ ಶ್ರೀಗಳು ರೇಲಾ ಆಸ್ಪತ್ರೆಯಲ್ಲಿ ಇರಬೇಕಾಗಿದ್ದು, ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಚೆನ್ನೈನ ವೈದ್ಯರು, ಶ್ರೀಗಳಿಗೆ ಹೆಚ್ಚಿನ ತಪಾಸಣೆ ಅಗತ್ಯವಿದೆ ಎಂದಿದ್ದರು.

ಚೆನ್ನೈಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀ ಈಗ ಹೇಗಿದ್ದಾರೆ? ಚೆನ್ನೈಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀ ಈಗ ಹೇಗಿದ್ದಾರೆ?

ಗಮನಿಸಬೇಕಾದ ಅಂಶವೇನಂದರೆ, ರೇಲಾ ಆಸ್ಪತ್ರೆಯ ಮುಖ್ಯದ್ವಾರದಿಂದ ತಮ್ಮ ಚಿಕಿತ್ಸಾ ಕೊಠಡಿಗೆ ವ್ಹೀಲ್ ಚೇರ್ ಬೇಡ ಎಂದು ನಡೆದುಕೊಂಡೇ ಹೋಗಿದ್ದ, 'ನಡೆದಾಡುವ ದೇವರು' ಚಿಕಿತ್ಸೆಗೂ ಮುನ್ನ, ಇಷ್ಟಲಿಂಗ ಪೂಜೆ ಸಲ್ಲಿಸಿದ್ದು. ಶ್ರೀಗಳ ಈ ಜೀವನಶೈಲಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಕೈಮುಗಿದಿದ್ದಾರೆ. ಐದೇ ಐದು ದಿನದ ಹಸುಗೂಸಿಗೆ ಡಾ. ರೇಲಾ ಸರ್ಜರಿ ಮಾಡಿ ಸೈ ಎನಿಸಿಕೊಂಡಿದ್ದವರು, ಇವರ ಬಗ್ಗೆ ಕೊಂಚ ಮಾಹಿತಿ, ಮುಂದೆ ಓದಿ..

ನಾಗಪಟ್ಟಣಂ ಜಿಲ್ಲೆಯ ಮಯಿಲಾದುತುರೈ

ನಾಗಪಟ್ಟಣಂ ಜಿಲ್ಲೆಯ ಮಯಿಲಾದುತುರೈ

ತಮಿಳುನಾಡಿನ, ನಾಗಪಟ್ಟಣಂ ಜಿಲ್ಲೆಯ ಮಯಿಲಾದುತುರೈನಲ್ಲಿ ಹಾಜೀ ಶಂಸುದ್ದೀನ್, ಹಂಸಾ ಬೀವಿ ದಂಪತಿಗಳಿಗೆ ಜನಿಸಿದ ಡಾ. ರೇಲಾ, 1988ರಲ್ಲಿ ಎಂಬಿಬಿಎಸ್ ಪದವಿಯನ್ನು ಮುಗಿಸಿ, ಯುಕೆ ಎಡಿನ್ಬರ್ಗ್ ನಲ್ಲಿ ಎಂಎಸ್ ಶಿಕ್ಷಣವನ್ನು (1988) ರಲ್ಲಿ ಮುಗಿಸಿದ್ದರು. 1991ರಲ್ಲಿ ಲಂಡನ್ ನಲ್ಲಿರುವ ಕಿಂಗ್ಸ್ ಆಸ್ಪತ್ರೆಗೆ ಸೇರುವ ಮುನ್ನ, ಇತರ ಹಾಸ್ಪಿಟಲ್ ನಲ್ಲೂ ರೇಲಾ ಕೆಲಸ ನಿರ್ವಹಿಸಿದ್ದರು.

ಚೆನ್ನೈ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಬೇಡವೆಂದು ನಡೆದೇ ಸಾಗಿದ ಶ್ರೀ ಚೆನ್ನೈ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಬೇಡವೆಂದು ನಡೆದೇ ಸಾಗಿದ ಶ್ರೀ

ಐನರಕ್ಕೂ ಹೆಚ್ಚು ಪಬ್ಲಿಕೇಶನ್ ಅನ್ನು ರೇಲಾ ಹೊರತಂದಿದ್ದಾರೆ

ಐನರಕ್ಕೂ ಹೆಚ್ಚು ಪಬ್ಲಿಕೇಶನ್ ಅನ್ನು ರೇಲಾ ಹೊರತಂದಿದ್ದಾರೆ

ಈ ಅವಧಿಯಲ್ಲಿ ಯಕೃತ್ ಕಸಿಯ ಬಹುತೇಕ ಎಲ್ಲಾ ಹಂತದ ಚಿಕಿತ್ಸೆಗೆ ಸರ್ಜರಿ ಮಾಡುವಲ್ಲಿ ಸೈ ಎನಿಸಿಕೊಂಡಿರುವ ರೇಲಾ, ಚೆನ್ನೈನ ಆಸ್ಪತ್ರೆಯೊಂದರಲ್ಲೇ, ವರ್ಷಕ್ಕೆ 60 ಪಿಡಿಯಾಟ್ರಿಕ್ ಲಿವರ್ ಕಸಿ ಮತ್ತು ಇದುವರೆಗೆ 250ಕ್ಕೂ ಹೆಚ್ಚು ಲಿವರ್ ಕಸಿ ಮಾಡಿದ ದಕ್ಷಿಣ ಏಷ್ಯಾದ ಅಪರೂಪದ ವೈದ್ಯರಲ್ಲಿ ಒಬ್ಬರು. ಲಿವರ್ ಕಸಿಗೆ ಸಂಬಂಧಪಟ್ಟಂತೆ, ಇದುವರೆಗೆ ಐನರಕ್ಕೂ ಹೆಚ್ಚು ಪಬ್ಲಿಕೇಶನ್ ಅನ್ನು ರೇಲಾ ಹೊರತಂದಿದ್ದಾರೆ.

ಸಿದ್ದಗಂಗಾ ಶ್ರೀಗಳ ಭೇಟಿಗೆ ತೆರಳಿದ್ದ ಯಡಿಯೂರಪ್ಪನವರಿಗೆ ಕಾದಿತ್ತು ಅಚ್ಚರಿ! ಸಿದ್ದಗಂಗಾ ಶ್ರೀಗಳ ಭೇಟಿಗೆ ತೆರಳಿದ್ದ ಯಡಿಯೂರಪ್ಪನವರಿಗೆ ಕಾದಿತ್ತು ಅಚ್ಚರಿ!

ಪ್ರೊ. ಮೊಹಮ್ಮದ್ ರೇಲಾ

ಪ್ರೊ. ಮೊಹಮ್ಮದ್ ರೇಲಾ

ಪ್ರೊ. ಮೊಹಮ್ಮದ್ ರೇಲಾ, ಇದುವರೆಗಿನ ತಮ್ಮ ವೈದ್ಯಕೀಯ ಜೀವನದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಲಿವರ್ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಡಿಸೆಂಬರ್ 1997ರಲ್ಲಿ ಐದು ದಿನದ ಹಸುಗೂಸಿಗೆ ಲಿವರ್ ಕಸಿ ನಡೆಸಿದ ಸಾಧನೆ ಇವರದ್ದು. ಅಂದಿನ ಹಸುಗೂಸು, ಈಗ ಟ್ರಿನಿಟಿ ಕಾಲೇಜು, ಐರ್ಲ್ಯಾಂಡ್ ನಲ್ಲಿ ಕಾನೂನು ವಿದ್ಯಾರ್ಥಿನಿ. ಅಹಮದಾಬಾದ್ ನಲ್ಲಿ ನಾಲ್ಕೂವರೆ ವರ್ಷದ ಮಗುವಿಗೂ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಪಾಕಿಸ್ತಾನದ ಐದು ವರ್ಷದ ಮಗುವಿಗೆ ಯಶಸ್ವೀ ಶಸ್ರಚಿಕಿತ್ಸೆ

ಪಾಕಿಸ್ತಾನದ ಐದು ವರ್ಷದ ಮಗುವಿಗೆ ಯಶಸ್ವೀ ಶಸ್ರಚಿಕಿತ್ಸೆ

ಹೈದರಾಬಾದಿನ ಗ್ಲೋಬಲ್ ಆಸ್ಪತ್ರೆಯಲ್ಲಿ ಪಾಕಿಸ್ತಾನದ ಐದು ವರ್ಷದ ಮಗುವಿಗೆ ಯಶಸ್ವೀ ಶಸ್ರಚಿಕಿತ್ಸೆ ಮಾಡುವ ಮೂಲಕ ಡಾ.ರೇಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿದ್ದರು. ಭಾರತದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತಹ ಹಲವು ಸರ್ಜರಿಗಳನ್ನು ( split liver transplantation, Swap liver transplantation ) ರೇಲಾ ಮಾಡಿದ ಹಿರಿಮೆಯನ್ನು ಹೊಂದಿದ್ದಾರೆ. (ಮಾಹಿತಿ: ವಿಕಿಪಿಡಿಯಾ)

ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್

ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್

ಇಸವಿ 2000ರಲ್ಲಿ ಡಾ.ರೇಲಾ ಅವರ ಸಾಧನೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿದೆ. ಆಸ್ಪತ್ರೆಗೆ ದಾಖಲಾಗಿರುವ ಸಿದ್ದಗಂಗಾ ಶ್ರೀಗಳನ್ನು ಶುಕ್ರವಾರ ರಾತ್ರಿ ಭೇಟಿಯಾಗಿರುವ ಡಾ.ಪ್ರೊ. ರೇಲಾ, ಶನಿವಾರ ಸರ್ಜರಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಪಿತ್ತನಾಳದಲ್ಲಿ ಅಳವಡಿಸಿರುವ ಸ್ಟೆಂಟ್ ನಲ್ಲಿ ಸೋಂಕು ತಗಲಿರುವ ಕಾರಣ, ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಶ್ರೀಗಳನ್ನು ರೇಲಾ ಆಸ್ಪತ್ರೆಗೆ ದಾಖಲಿಸಾಗಿದೆ.

English summary
A brief details about Mohamed Rela of Rela Institute and Medical Centre Chennai,who takes care of Siddaganga Seer Surgery. Dr. Rela has vast experience in the liver transplantation field and his name is entered in Guinness Book of Records in 2000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X