• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐತಿಹಾಸಿಕ 'ಮಹಾನವಮಿ ದಿಬ್ಬ'ದ ಕುರಿತು ಒಂದಷ್ಟು ಮಾಹಿತಿ

By ಶಿಶಿರ್ ಹೆಗಡೆ
|

ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀಕೃಷ್ಣದೇವರಾಯ, ಒರಿಸ್ಸಾದ ಮೇಲೆ ಸಾಧಿಸಿದ ವಿಜಯದ ಸ್ಮಾರಕವಾಗಿ ಈ ಮಹಾನವಮಿ ದಿಬ್ಬವನ್ನು ನಿರ್ಮಿಸಲಾಗಿದೆ.

ದಸರಾ ಸಂದರ್ಭದಲ್ಲಿ ಸೈನಿಕರ ಶೌರ್ಯ, ಕುಸ್ತಿ, ಮಲ್ಲಕಂಬ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನವರಾತ್ರಿಗೆ ವಿಶೇಷ ಕಳೆ ತರುತ್ತಿದ್ದವು.

ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ

ಈ ಕಾರ್ಯಕ್ರಮಗಳನ್ನು ಮಹಾರಾಜ ತನ್ನ ಪಟ್ಟದ ಅರಸಿಯರೊಂದಿಗೆ ವೀಕ್ಷಿಸುತ್ತಿದ್ದರು. ಬೇರೆ ರಾಜರು, ರಾಜತಾಂತ್ರಿಕರು, ಹೊರದೇಶದ ರಾಯಭಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು.

ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆಗೆ ವಿಶೇಷ ಮಹತ್ವವಿತ್ತು. ದಿಬ್ಬದ ಮೇಲೆ ಅರಸರು, ಗಣ್ಯರು ಕುಳಿತುಕೊಂಡರೆ, ಅದರ ಸುತ್ತಲೂ ಜನಸಾಮಾನ್ಯರು ಸೇರುತ್ತಿದ್ದರು. ದಿಬ್ಬದ ಮುಂಭಾಗದಿಂದ ಅಂಬಾರಿ ಮೆರವಣಿಗೆ ಹಾದು ಹೋಗುತ್ತಿತ್ತು.

ಕೋಲಾಟ, ಸಮಾಳ, ನಂದಿಧ್ವಜ ಮೆರವಣಿಗೆ ನಡೆಯುತ್ತಿತ್ತು. ಅದರ ಜತೆಗೆ ಕವಾಯತು, ಬೆಂಕಿ ಉಗುಳುವುದು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಅವರ ವಾರಸುದಾರರಾಗಿದ್ದ ಕೆಳದಿಯವರು ಆ ಪರಂಪರೆಯನ್ನು ಕೆಲಕಾಲ ಮುಂದುವರಿಸಿಕೊಂಡು ಹೋಗಿದ್ದರು.

ನಂತರ ಈ ಉತ್ಸವವನ್ನು ಮೈಸೂರಿನ ಅರಸರು ಮುಂದುವರಿಸಿದರು‌. ಅದುವೇ ಇಂದಿಗೂ ಮಹಾವೈಭವದಿಂದ ನಡೆಯುತ್ತಿರುವ ಮೈಸೂರು ದಸರಾ ಮಹೋತ್ಸವ.

English summary
A Brief Details About Mahanavami Dibba. This Festival Was Started By Vijayanagara Emperor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X