ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಳಿ ಗೂಬೆ ಸಾಕಿದ್ರೆ ನಿಮ್ಮ ಬದುಕು ಬಂಗಾರವಾಗುತ್ತಂತೆ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮಂಡ್ಯ, ಡಿಸೆಂಬರ್,28: ನಾವೆಲ್ಲರೂ ಸಾಮಾನ್ಯವಾಗಿ ಕಂದು ಬಣ್ಣದ ಗೂಬೆಯನ್ನು ಕಂಡಿದ್ದೇವೆ. ಇದನ್ನು ಅಪಶಕುನದ ಸಂಕೇತ ಎನ್ನುವ ಭಾವನೆ ನಮ್ಮೆಲ್ಲರಲ್ಲೂ ಮೈದಳೆದಿದೆ. ಆದರೆ ಈ ಎಲ್ಲಾ ಗುಣಗಳಿಂದ ವಿಭಿನ್ನವಾದ ಗೂಬೆಯೊಂದು ಮಂಡ್ಯ ಜನರ ಕಣ್ಣಿಗೆ ಬಿದ್ದಿದೆ.

ಮಂಡ್ಯದ ಆಸ್ಪತ್ರೆ ರಸ್ತೆಯಲ್ಲಿರುವ ಮಿಮ್ಸ್ ಕಾಂಪೌಂಡ್ ಮೇಲೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಬಿಳಿ ಬಣ್ಣದ ಗೂಬೆ ನೋಡುಗರ ಗಮನಸೆಳೆಯುತ್ತಿದೆ. ಇದನ್ನು 'ಬಾರನ್ ಔಲ್' ಎಂದು ಕರೆಯಲಾಗುತ್ತದೆ.[ಅಪಾಯದಲ್ಲಿದ್ದ ಉಲೂಕ ಕಾಪಾಡಿದ ಒನ್ಇಂಡಿಯಾ ಪತ್ರಕರ್ತ]

white owl

ಗೂಬೆ ಅಪಶಕುನದ ಸಂಕೇತ, ಇದನ್ನು ನೋಡಿ ಹೋದರೆ ಯಾವ ಕೆಲಸ ಕಾರ್ಯಗಳು ಸಿದ್ಧಿಸುವುದಿಲ್ಲ ಎಂಬ ಮಾತಿದೆ. ಇದರಲ್ಲಿ ಆದರೆ ಬಿಳಿ ಬಣ್ಣದ ಗೂಬೆಗಳು ಮನೆಯಲ್ಲಿದ್ದರೆ ಅದೃಷ್ಟ ಒಲಿಯುತ್ತದೆ ಎಂದು ಜನರು ಸಾಕಲು ಮುಂದಾಗುತ್ತಿದ್ದಾರೆ.

ಬಿಳಿ ಬಣ್ಣದ ಗೂಬೆ ಕಂದು ಬಣ್ಣದ ಗೂಬೆಗಿಂತ ಚಿಕ್ಕ ಗಾತ್ರದಾಗಿದ್ದು, ಇಲಿ, ಏಡಿ, ಸಣ್ಣ ಪುಟ್ಟ ಕೀಟಗಳನ್ನು ಹಿಡಿದು ತಿನ್ನುತ್ತಾ ಬದುಕುತ್ತವೆ. ಸಾಮಾನ್ಯವಾಗಿ ರೈತರು ಇವುಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕಾರಣ ಇವು ಒಂದು ರೀತಿಯಲ್ಲಿ ರೈತರಿಗೆ ಪರೋಪಕಾರಿ ಎಂದರೆ ತಪ್ಪಾಗುವುದಿಲ್ಲ.[ಚಿರತೆ ಸಂತತಿಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ]

white owl

ಅದೃಷ್ಟ ಎಂಬ ಮಾತು ಕೇಳಿದ್ದೇ ತಡ ಬಿಳಿ ಗೂಬೆಗಳನ್ನು ಹಿಡಿದು ಮಾರುವ ಜಾಲವೇ ಈ ಹಿಂದೆ ಕೊಡಗಿನಲ್ಲಿ ಕಾಣಿಸಿಕೊಂಡಿತ್ತು. ಕೇರಳದಿಂದ ಬಂದ ತಂಡವೊಂದು ಎರಡು ತಲೆ ಹಾವು ಮತ್ತು ಗೂಬೆಗೆ ಬೇಡಿಕೆಯಿಟ್ಟು ಜನರನ್ನು ಅಡ್ಡದಾರಿಗೆ ಎಳೆಯುವ ಯತ್ನವನ್ನು ಮಾಡಿದ್ದರು. ಈ ಪ್ರಕರಣದಲ್ಲಿ ಕೆಲವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.[ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]

English summary
A bird white owl Barn owl appearance in Mandya. All are believes that this white owl is a symbol of fortunate. Everyone express their aspiration to put on home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X