ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 24 ಗಂಟೆಗಳಲ್ಲೇ 9543 ಮಂದಿಗೆ ಕೊವಿಡ್-19 ಸೋಂಕು

|
Google Oneindia Kannada News

ಬೆಂಗಳೂರು, ಸಪ್ಟೆಂಬರ್.27: ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 575566ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 9543 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 79 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 8582ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಕೊವಿಡ್ 19 ಅಂಕಿ ಅಂಶ: ಚೇತರಿಕೆ ಪ್ರಮಾಣ ಭಾರತದಲ್ಲೇ ಅಧಿಕಕೊವಿಡ್ 19 ಅಂಕಿ ಅಂಶ: ಚೇತರಿಕೆ ಪ್ರಮಾಣ ಭಾರತದಲ್ಲೇ ಅಧಿಕ

ಕೊರೊನಾವೈರಸ್ ಒಟ್ಟು 575566 ಸೋಂಕಿತ ಪ್ರಕರಣಗಳ ಪೈಕಿ 462241 ಸೋಂಕಿತರು ಗುಣಮುಖರಾಗಿದ್ದಾರೆ. 104724 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 6522 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

9543 New Coronavirus Cases Reported in Karnataka Today, State Tally Rise to 575566

ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕೊವಿಡ್ ಟೆಸ್ಟ್?:

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 26049 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 41808 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 67857 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 45,86,780 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?:

Recommended Video

ರೈತರ ಪ್ರತಿಭಟನೆ ಕುರಿತು C.M BSY ಹೇಳಿದ್ದೇನು | Oneindia Kannada

ರಾಜ್ಯದಲ್ಲಿ ಒಟ್ಟು 9543 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 46, ಬಳ್ಳಾರಿ 310, ಬೆಳಗಾವಿ 184, ಬೆಂಗಳೂರು ಗ್ರಾಮಾಂತರ 213, ಬೆಂಗಳೂರು 4217, ಬೀದರ್ 50, ಚಾಮರಾಜನಗರ 38, ಚಿಕ್ಕಬಳ್ಳಾಪುರ 195, ಚಿಕ್ಕಮಗಳೂರು 206, ಚಿತ್ರದುರ್ಗ 198, ದಕ್ಷಿಣ ಕನ್ನಡ 460, ದಾವಣಗೆರೆ 74, ಧಾರವಾಡ 139, ಗದಗ 61, ಹಾಸನ 408, ಹಾವೇರಿ 115, ಕಲಬುರಗಿ 10, ಕೊಡಗು 53, ಕೋಲಾರ 125, ಕೊಪ್ಪಳ 87, ಮಂಡ್ಯ 276, ಮೈಸೂರು 952, ರಾಯಚೂರು 102, ರಾಮನಗರ 79, ಶಿವಮೊಗ್ಗ 164, ತುಮಕೂರು 282, ಉಡುಪಿ 320, ಉತ್ತರ ಕನ್ನಡ 100, ವಿಜಯಪುರ 35, ಯಾದಗಿರಿ 44 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

English summary
9543 New Coronavirus Cases Reported in Karnataka Today, State Tally Rise to 575566.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X