ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; 9 ಜಿಲ್ಲೆಗೆ ಬೇಕು ಆಕ್ಸಿಜನ್ ಮರುಪೂರಣ ಘಟಕ

|
Google Oneindia Kannada News

ಬೆಂಗಳೂರು, ಆಗಸ್ಟ್ 19; ಕೋವಿಡ್ 2ನೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಕ್ಸಿಜನ್ಗೆ ಭಾರೀ ಬೇಡಿಕೆ ಉಂಟಾಗಿತ್ತು. ಆಕ್ಸಿಜನ್ ಕೊರತೆಯ ಕಾರಣ ಚಾಮರಾಜನಗರದಲ್ಲಿ 20ಕ್ಕೂ ಅಧಿಕ ರೋಗಿಗಳು ಪ್ರಾಣ ಕಳೆದುಕೊಂಡಿದ್ದರು.

ಈ ಘಟನೆ ಬಳಿಕ ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಮರುಪೂರಣ ಘಟಕ ನಿರ್ಮಾಣದತ್ತ ಗಮನಹರಿಸಲಾಗಿತ್ತು. ಆದರೆ ರಾಜ್ಯದ 9 ಜಿಲ್ಲೆಗಳಲ್ಲಿ ಇನ್ನೂ ಮರುಪೂರಣ ಘಟಕ ನಿರ್ಮಾಣವಾಗಬೇಕಿದೆ.

 ರಾಮನಗರ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಶೀಘ್ರ ಪ್ರಾರಂಭ ರಾಮನಗರ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಶೀಘ್ರ ಪ್ರಾರಂಭ

ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್, ಯಾದಗಿರಿ, ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಕ್ಸಿಜನ್ ಮರುಪೂರಣ ಘಟಕಗಳು ಇನ್ನೂ ನಿರ್ಮಾಣಗೊಂಡಿಲ್ಲ.

ಆಕ್ಸಿಜನ್ ದುರಂತ; ನ್ಯಾಯಾಂಗ ಆಯೋಗದ ವಿಚಾರಣೆ ಮೈಸೂರಲ್ಲಿ! ಆಕ್ಸಿಜನ್ ದುರಂತ; ನ್ಯಾಯಾಂಗ ಆಯೋಗದ ವಿಚಾರಣೆ ಮೈಸೂರಲ್ಲಿ!

 9 Districts Of Karnataka Yet To Get Oxygen Refilling Plants

ಕೆಲವು ಖಾಸಗಿ ಸಂಸ್ಥೆಗಳು ಜಿಲ್ಲೆಗಳಲ್ಲಿ ಮರುಪೂರಣ ಘಟಕ ನಿರ್ಮಾಣ ಮಾಡಲು ಆಸಕ್ತಿ ತೋರಿಸಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ ಅಕ್ಕಪಕ್ಕದ ಜಿಲ್ಲೆಗಳ ಮೇಲೆ ಅವಲಂಬಿತರಾಗುವುದು ಅನಿವಾರ್ಯವಾಗಿದೆ.

ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಕೊಡುಗೆ ನೀಡಿದ ಮಲ್ಟಿಪ್ಲೆಕ್ಸ್ ಸಮೂಹ ಸಂಸ್ಥೆಆಕ್ಸಿಜನ್ ಕಾನ್ಸಂಟ್ರೇಟರ್ಸ್ ಕೊಡುಗೆ ನೀಡಿದ ಮಲ್ಟಿಪ್ಲೆಕ್ಸ್ ಸಮೂಹ ಸಂಸ್ಥೆ

ಚಾಮರಾಜನಗರದಲ್ಲಿ 350 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಇದೆ. ಇವುಗಳಲ್ಲಿ ಪ್ರಸ್ತುತ 30 ಭರ್ತಿಯಾಗಿವೆ. ಆಗಸ್ಟ್ 16ರಂದು ಜಿಲ್ಲೆಯಲ್ಲಿ 1.43 ಮೆಟ್ರಿಕ್ ಟನ್ ಆಕ್ಸಿಜನ್ 5 ಸರ್ಕಾರಿ ಮತ್ತು 2 ಖಾಸಗಿ ಆಸ್ಪತ್ರೆಗಳಿಂದ ಒಟ್ಟು ಬಳಕೆಯಾಗಿದೆ. ಆದರೆ ಜಿಲ್ಲೆಗೆ ಇನ್ನೂ ಆಕ್ಸಿಜನ್ ಮೈಸೂರಿಂದ ಬರಬೇಕಿದೆ.

ಉದ್ಯಮಿಗಳು ಮರುಪೂರಣ ಘಟಕ ನಿರ್ಮಾಣ ಮಾಡಲು ಮುಂದೆ ಬಂದರೆ ಒಳ್ಳೆಯದು. ಆದರೆ ಜಿಲ್ಲೆಯಲ್ಲಿ ಅಂತಹ ಯಾವುದೇ ಉದ್ಯಮಗಳಿಲ್ಲ. ಘಟಕ ನಿರ್ಮಾಣ ಮಾಡಲು ಮುಂದೆ ಬಂದರೆ ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಈಗ ಯಾವುದೇ ಮರುಪೂರಣ ಘಟಕಗಳು ಇಲ್ಲ. ಆದರೆ ಮೂರು ಘಟಕ ನಿರ್ಮಾಣವಾಗುತ್ತಿದ್ದು, ಅವುಗಳು ಇನ್ನಷ್ಟೇ ಕಾರ್ಯವನ್ನು ಆರಂಭಿಸಬೇಕಿದೆ.

ಯಾದಗಿರಿ ಜಿಲ್ಲೆಯಲ್ಲಿಯೂ ಈಗ ಯಾವುದೇ ಮರುಪೂರಣ ಘಟಕಗಳಿಲ್ಲ. ಆದರೆ 500 ಎಲ್‌ಪಿಎಂ ಸಾಮರ್ಥ್ಯದ ಒಂದು ಮತ್ತು 1000 ಎಲ್‌ಪಿಎಂ ಸಾಮರ್ಥ್ಯದ ಮತ್ತೊಂದು ಘಟಕ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಂತಹ ದುರಂತಗಳು ಮತ್ತೆ ನಡೆಯಬಾರದು ಎಂದರೆ ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಮರುಪೂರಣ ಘಟಕಗಳ ಅಗತ್ಯವಿದೆ. ರಾಜ್ಯದಲ್ಲಿ ಇಂತಹ 64 ಘಟಕಗಳಿವೆ. ಆದರೆ ಎಲ್ಲಾ ಜಿಲ್ಲೆಗಳಲ್ಲೂ ಲಭ್ಯವಿಲ್ಲ.

Recommended Video

Joe Root ಪ್ರಕಾರ ಮುಂದಿನ 3 ಪಂದ್ಯಗಳು ಹೀಗೆಯೇ ಇರಲಿದೆ | Oneindia Kannada

ಮರುಪೂರಣ ಘಟಕಗಳು ಇಲ್ಲದ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾದಾಗ ಬೇರೆ ಜಿಲ್ಲೆಗಳಿಂದ ಆಕ್ಸಿಜನ್ ಬರುವ ತನಕ ಕಾಯಬೇಕು. ತುರ್ತು ಸಮಯದಲ್ಲಿ ಆಕ್ಸಿಜನ್ ಬರುವುವುದು ತಡವಾದರೆ ರೋಗಿಗಳಿಗೆ ಸಂಕಷ್ಟ ಎದುರಾಗಲಿದೆ.

English summary
As many as 9 districts in the Karnataka yet to have oxygen refilling plants. Private players can set up refilling plants. But they not showing interest to it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X