ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟ್ ಪ್ಯಾಕ್‌ 2 ಕಡೆ ಎಚ್ಚರಿಕೆ ಸಂದೇಶ ಮುದ್ರಿಸುವ ಅಗತ್ಯವಿಲ್ಲ

|
Google Oneindia Kannada News

Recommended Video

ಸಿಗರೇಟ್ ಪ್ಯಾಕ್‌ನ ಮೇಲೆ 85%ರಷ್ಟು ಎಚ್ಚರಿಕೆ ಸಂದೇಶ ಮುದ್ರಿಸುವ ಅಗತ್ಯವಿಲ್ಲ - ಹೈ ಕೋರ್ಟ್

ಬೆಂಗಳೂರು, ಡಿಸೆಂಬರ್ 15 : ಸಿಗರೇಟ್ ಪ್ಯಾಕ್‌ಗಳ ಎರಡೂ ಕಡೆ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

 ಸಿಗರೇಟಿನ ಮೇಲೆ ಶೇ. 5ರಷ್ಟು ಹೆಚ್ಚುವರಿ ಸೆಸ್ ಹೇರಿದ ಸರ್ಕಾರ ಸಿಗರೇಟಿನ ಮೇಲೆ ಶೇ. 5ರಷ್ಟು ಹೆಚ್ಚುವರಿ ಸೆಸ್ ಹೇರಿದ ಸರ್ಕಾರ

2014ರಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ಕರ್ನಾಟಕ ಸರ್ಕಾರ ಸಿಗರೇಟ್ ಪ್ಯಾಕ್‌ಗಳ ಎರಡೂ ಕಡೆ ಶೇ 85 ಎಷ್ಟು ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸಬೇಕು ಎಂಬ ನಿಯಮ ಜಾರಿಗೆ ತಂದಿತ್ತು.

85% statutory warning on cigarette pack, HC scrapes rull

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಮಯದಲ್ಲಿ ಗುರುವಾರ ಹೈಕೋರ್ಟ್ ಈ ನಿಯಮವನ್ನು ರದ್ದುಗೊಳಿಸಿದೆ. ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸುವ ಬಗ್ಗೆ ಪರ-ವಿರೋಧ ಚರ್ಚೆಗಳು ದೇಶದಲ್ಲಿ ನಡೆಯುತ್ತಿವೆ.

 ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ... ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...

ಸಿಗರೇಟ್ ಪ್ಯಾಕ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆ ಶೇ 85ರಷ್ಟು ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆ ಸಂದೇಶ ಮುದ್ರಿಸುವಂತೆ 2014ರ ಅಕ್ಟೋಬರ್ 15ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

 ಮನುಕುಲಕ್ಕೆ ಮಾರಕವಾದ ತಂಬಾಕು ತ್ಯಜಿಸಲು ಈ ದಿನ ಸಕಾಲ ಮನುಕುಲಕ್ಕೆ ಮಾರಕವಾದ ತಂಬಾಕು ತ್ಯಜಿಸಲು ಈ ದಿನ ಸಕಾಲ

ಕೇಂದ್ರದ ಸಂಸದೀಯ ಸಮಿತಿ ಸಿಗರೇಟ್ ಪ್ಯಾಕ್‌ ಎರಡೂ ಬದಿಯಲ್ಲಿ ಶೇ 50ರಷ್ಟು ಎಚ್ಚರಿಕೆ ಸಂದೇಶ, ಬೀಡಿ ಮತ್ತು ಇತರ ವಸ್ತುಗಳ ಮೇಲೇ ಒಂದು ಕಡೆ ಎಚ್ಚರಿಕೆ ಸಂದೇಶ ಮುದ್ರಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರೋಗ್ಯ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.

English summary
Karnataka High Court on December 15, 2017 scraped 2014 amendment which stated that both sides of a cigarette packet should have 85% statutory warning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X