ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಒಂದೇ ದಿನ ಕೋವಿಡ್ ಗೆದ್ದ 8387 ಜನರು

|
Google Oneindia Kannada News

ಬೆಂಗಳೂರು, ಆಗಸ್ಟ್ 19 : ಕರ್ನಾಟಕದಲ್ಲಿ ಮಂಗಳವಾರ 7665 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಆದರೆ, ಒಂದೇ ದಿನ ರಾಜ್ಯದಲ್ಲಿ 8387 ಜನರು ಗುಣಮುಖರಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.

Recommended Video

ಹೇಳಿದ ಕೆಲಸವನ್ನು ಮೊದಲು ಮಾಡಿ ಎಂದ್ರು ಸುಧಾಕರ್ | Oneindia Kannada

ಕರ್ನಾಟಕದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ ಮಂಗಳವಾರ 2,40,948ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 79,782. ಇದುವರೆಗೂ ಒಟ್ಟು ಗುಣಮುಖರಾದವರ ಸಂಖ್ಯೆ 1,56,949.

ಕೋವಿಡ್ 19: ಭಾರತದಲ್ಲಿ ಸುಮಾರು 20 ಲಕ್ಷ ಮಂದಿ ಚೇತರಿಕೆ ಕೋವಿಡ್ 19: ಭಾರತದಲ್ಲಿ ಸುಮಾರು 20 ಲಕ್ಷ ಮಂದಿ ಚೇತರಿಕೆ

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 8,387 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದ ಅವಧಿಯಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿದವರ ಸಂಖ್ಯೆ ಇದೇ ಅಧಿಕವಾಗಿದೆ.

ಕೊರೊನಾ ವೈರಸ್ ಪರಿಣಾಮ ಇಷ್ಟೇ ಅಲ್ಲ, ಮುಂದಿದೆ ಹೊಸ ವರಸೆ: ನೀತಿ ಆಯೋಗಕೊರೊನಾ ವೈರಸ್ ಪರಿಣಾಮ ಇಷ್ಟೇ ಅಲ್ಲ, ಮುಂದಿದೆ ಹೊಸ ವರಸೆ: ನೀತಿ ಆಯೋಗ

ಕರ್ನಾಟಕದಲ್ಲಿ 18 ದಿನಗಳಲ್ಲಿ 1.16 ಲಕ್ಷ ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಳ ಮಾಡಲಾಗಿದ್ದು, ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ.

ಉತ್ತರ ಮತ್ತು ಪೂರ್ವದ 6 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ!ಉತ್ತರ ಮತ್ತು ಪೂರ್ವದ 6 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ!

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು

ಕರ್ನಾಟಕದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಂಗಳವಾರ 7665 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. 8387 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 79,782. ಗುಣಮುಖ ಹೊಂದಿವರ ಸಂಖ್ಯೆ 1,56,949. ಒಟ್ಟು ಮೃತಪಟ್ಟವರ ಸಂಖ್ಯೆ 4,201.

ಒಂದೇ ದಿನ ದಾಖಲೆಯ ಪರೀಕ್ಷೆ

ಒಂದೇ ದಿನ ದಾಖಲೆಯ ಪರೀಕ್ಷೆ

ಕರ್ನಾಟಕದಲ್ಲಿ ಒಂದೇ ದಿನ ದಾಖಲೆಯ 59,088 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ 28,867 antigen ಪರೀಕ್ಷೆ ಮಾಡಲಾಗಿದೆ. ಕರ್ನಾಟಕದಲ್ಲಿ ಒಟ್ಟು ಕೋವಿಡ್‌ ಸೋಂಕಿತರ ಸಂಖ್ಯೆ 2,40,948ಕ್ಕೆ ಏರಿಕೆಯಾಗಿದೆ.

ಒಟ್ಟು ಮೃತಪಟ್ಟವರು 4,201 ಜನ

ಒಟ್ಟು ಮೃತಪಟ್ಟವರು 4,201 ಜನ

ಕರ್ನಾಟಕದಲ್ಲಿ ಇದುರೆಗೂ ಮೃತಪಟ್ಟ ಕೋವಿಡ್ ಸೋಂಕಿತರ ಸಂಖ್ಯೆ 4,201. ಮಂಗಳವಾರ ಒಂದೇ ದಿನ 139 ಜನರು ಮೃತಪಟ್ಟಿದ್ದಾರೆ. ಕಳೆದ 48 ಗಂಟೆಯಲ್ಲಿ 254 ಜನರು ಮೃತಪಟ್ಟಿದ್ದಾರೆ. ಹೊಸದಾಗಿ ಪ್ರಕರಣದಲ್ಲಿ ಮೃತಪಟ್ಟವರ ವಯೋಮಿತಿ 25 ರಿಂದ 50 ವರ್ಷ.

ಬೆಂಗಳೂರಲ್ಲಿ ಹೆಚ್ಚು ಸೋಂಕಿತರು

ಬೆಂಗಳೂರಲ್ಲಿ ಹೆಚ್ಚು ಸೋಂಕಿತರು

ಕೊರೊನಾ ಸೋಂಕಿತರು ಹೆಚ್ಚು ಇರುವ ಜಿಲ್ಲೆಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮಂಗಳವಾರ ನಗರದಲ್ಲಿ 2,242 ಹೊಸ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 94,106ಕ್ಕೆ ಏರಿಕೆಯಾಗಿದೆ. ಮಂಗಳವಾರ ಬಳ್ಳಾರಿ (673), ಉಡುಪಿ (421), ಬೆಳಗಾವಿ (395), ಮೈಸೂರು (357) ಹೊಸ ಪ್ರಕರಣ ವರದಿಯಾಗಿದೆ.

English summary
In Karnataka on August 18 new 7665 COVID 19 cased reported and 8387 people recovered. Total number of active cases in state 79,782.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X