ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಸರ್ಕಾರಿ ಬಸ್ ಸಂಚಾರ; ಒಂದೇ ದಿನ 81,593 ಜನರ ಪ್ರಯಾಣ

|
Google Oneindia Kannada News

ಬೆಂಗಳೂರು, ಮೇ 20 : ಕರ್ನಾಟಕದಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ. ಬುಧವಾರ 81,593 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಗುರುವಾರ 3 ಸಾವಿರ ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ 2633 ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸಿವೆ. ಬಸ್ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಕೆಎಸ್ಆರ್‌ಟಿಸಿ ತೀರ್ಮಾನಿಸಿದೆ.

ಬಸ್ ಸಂಚಾರ ಆರಂಭ; ಮೊದಲ ದಿನ ಸಂಚಾರ ನಡೆಸಿದವರೆಷ್ಟು? ಬಸ್ ಸಂಚಾರ ಆರಂಭ; ಮೊದಲ ದಿನ ಸಂಚಾರ ನಡೆಸಿದವರೆಷ್ಟು?

ಮಂಗಳವಾರ ಮತ್ತು ಬುಧವಾರ 4239 ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸಿವೆ. 1,35,099 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಗುರುವಾರ ಬೆಂಗಳೂರು ನಗರದಿಂದಲೇ 600 ಬಸ್‌ ಸಂಚಾರ ನಡೆಸಲಿದೆ ಎಂದು ತಿಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಮುಂಗಡ ಬುಕ್ಕಿಂಗ್ ಆರಂಭ; ಮಾರ್ಗದ ವಿವರಗಳು ಕೆಎಸ್‌ಆರ್‌ಟಿಸಿ ಮುಂಗಡ ಬುಕ್ಕಿಂಗ್ ಆರಂಭ; ಮಾರ್ಗದ ವಿವರಗಳು

ಬುಧವಾರ ಬೆಂಗಳೂರು ನಗರದಿಂದ 752 ಬಸ್ ಸಂಚಾರ ನಡೆಸಿವೆ. 11,349 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಎರಡು ದಿನದಲ್ಲಿ ಬೆಂಗಳೂರು ನಗರದಿಂದ 965 ಬಸ್ ಸಂಚಾರ ನಡೆಸಿವೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ಹೇಳಿದೆ.

ಮೇ 21ರಿಂದ APSRTC ಬಸ್ ಸಂಚಾರ, ಕರ್ನಾಟಕಕ್ಕೂ ಸಂಪರ್ಕ ಮೇ 21ರಿಂದ APSRTC ಬಸ್ ಸಂಚಾರ, ಕರ್ನಾಟಕಕ್ಕೂ ಸಂಪರ್ಕ

2 ದಿನದ ಬಸ್ ಸಂಚಾರದ ವಿವರ

2 ದಿನದ ಬಸ್ ಸಂಚಾರದ ವಿವರ

* ಮೇ 19ರಂದು 1500 ಬಸ್ ಓಡಿಸಲು ತೀರ್ಮಾನಿಸಲಾಗಿತ್ತು. ಆದರೆ, 1606 ಬಸ್ ಸಂಚರಿಸಿದ್ದು 53,506 ಪ್ರಯಾಣಿಕರು ಸಂಚಾರ ನಡೆಸಿದ್ದರು.

* ಮೇ 20ರ ಬುಧವಾರ 2000 ಬಸ್ ಓಡಿಸಲು ತೀರ್ಮಾನಿಸಲಾಗಿತ್ತು. 2633 ಬಸ್ ಓಡಿಸಲಾಯಿತು. 81,593 ಪ್ರಯಾಣಿಕರು ಸಂಚಾರ ನಡೆಸಿದರು.

ಬೆಂಗಳೂರಿನಿಂದ ಹೊರಟ ಬಸ್ ವಿವರ

ಬೆಂಗಳೂರಿನಿಂದ ಹೊರಟ ಬಸ್ ವಿವರ

* ಮೇ 19ರಂದು ಬೆಂಗಳೂರಿನಿಂದ 200 ಬಸ್ ಓಡಿಸಲು ತೀರ್ಮಾನಿಸಲಾಗಿತ್ತು. 213 ಬಸ್ ಓಡಿಸಲಾಯಿತು. 6000 ಜನರು ಪ್ರಯಾಣ ನಡೆಸಿದರು.

* ಮೇ 20ರಂದು 400 ಬಸ್ ಓಡಿಸಲು ಯೋಜನೆ ರೂಪಿಸಲಾಗಿತ್ತು. 752 ಬಸ್ ಓಡಿಸಲಾಯಿತು. 11,349 ಜನರು ಪ್ರಯಾಣ ಬೆಳೆಸಿದರು.

ಬೆಂಗಳೂರಿನಿಂದ ಬಸ್

ಬೆಂಗಳೂರಿನಿಂದ ಬಸ್

ಬುಧವಾರ ಬೆಂಗಳೂರು ನಗರದಿಂದ ಅರಸೀಕೆರೆ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚನ್ನರಾಯಪಟ್ಟಣ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹೊಸಪೇಟೆ, ಕಲಬುರಗಿ, ಕೊಪ್ಪಳ, ಹಾಸನ, ಹುಬ್ಬಳ್ಳಿ,ಕೆಜಿಎಫ್, ಕೋಲಾರ, ಮಂಗಳೂರು, ಪಾವಗಢ, ರಾಯಚೂರು, ಶಿವಮೊಗ್ಗ, ಶಿರಸಿ, ಯಾದಗಿರಿಗೆ ಬಸ್ ಸಂಚಾರ ನಡೆಸಿವೆ.

ಮುಂಗಡ ಟಿಕೆಟ್ ಬುಕ್ಕಿಂಗ್ ವಿವರ

ಮುಂಗಡ ಟಿಕೆಟ್ ಬುಕ್ಕಿಂಗ್ ವಿವರ

ಮೇ 19ರಂದು 1992 ಜನರು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಪ್ರಯಾಣ ಮಾಡಿದ್ದಾರೆ. ಮೇ 20ರಂದು 6719 ಜನರು ಪ್ರಯಾಣ ನಡೆಸಿದ್ದಾರೆ. ಮೇ 21ರಂದು ಪ್ರಯಾಣಿಸಲು 5626 ಜನರು ಟಿಕೆಟ್ ಬುಕ್ ಮಾಡಿದ್ದಾರೆ.

English summary
KSRTC said that 81,593 passengers transported on May 20, 2020 after bus operations commenced second day. 5626 ticket booked for May 21st journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X