ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ‌ ಪಂಚಾಯಿತಿ ಚುನಾವಣೆ: 80 ಸಾವಿರ ಪೊಲೀಸರ ನಿಯೋಜನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆ ಬಂದೋಬಸ್ತ್ ಗೆ 80 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.‌ ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 22 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ 10, 969 ಸಾವಿರ ಗೃಹ ರಕ್ಷಕ ದಳ ಹಾಗೂ 5369 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಎರಡನೇ ಹಂತದ ಚುನಾವಣೆಗೆ 9083 ಗೃಹ ರಕ್ಷಕ ದಳ, 5246 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.‌

ಗ್ರಾಮ ಪಂಚಾಯಿತಿ ಚುನಾವಣೆ; ಕೋವಿಡ್ ಮಾರ್ಗಸೂಚಿಗಳುಗ್ರಾಮ ಪಂಚಾಯಿತಿ ಚುನಾವಣೆ; ಕೋವಿಡ್ ಮಾರ್ಗಸೂಚಿಗಳು

ಮೊದಲ ಹಂತದ ಚುನಾಚಣೆಯಲ್ಲಿ 2390 ಪಂಚಾಯಿತಿಗಳ 23, 485 ಬೂತ್ ಗಳಗೆ ಭದ್ರತೆ ಒದಗಿಸಲಾಗಿದೆ. ಎರಡನೇ ಹಂತದಲ್ಲಿ 2832 ಪಂಚಾಯಿತಿಗಳ 21299 ಬೂತ್ ಗಳಲ್ಲಿ ಚುನಾವಣೆ ನಡೆಯಲಿದೆ. ಎರಡು ಹಂತದ ಚುನಾವಣೆಗೆ ಪಿಎಸ್ ಐ ಹಾಗೂ ಎಎಸ್ ಐ ಒಳಗೊಂಡ 3286 ಮೊಬೈಲ್ ಪಾಟ್ರೋಲ್ ತಂಡ ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ.

 80 thousand police personal deployed for two phase election

1940 ಕ್ಕೂ ಹೆಚ್ಚು ವಾಹನ ಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ‌‌.‌ ಮೊದಲನೇ ಹಂತಕ್ಕೆ 111 ಕೆಎಸ್ ಆರ್ ಪಿ ತುಕಡಿ ಎರಡನೇ ಹಂತಕ್ಕೆ 97 ಕೆಎಸ್ ಅರ್ ಪಿ ತುಕಡಿ ಗಳನ್ನು ಭದ್ರತೆಗಾಗಿ ಒದಗಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ‌.

ಶಾಂತಿಯುತ ಚುನಾವಣೆ ನಡೆಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನಂತೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸೂಕ್ತ ಬಂದೋ ಬಸ್ತ್ ಏರ್ಪಡಿಸಲಾಗಿದೆ.

English summary
80,000 police personal are deployed for Gram panchayat election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X