ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದಿಂದ 6 ಸಾವಿರ ಕೋಟಿ ನಷ್ಟ, 24 ಸಾವು: ಯಡಿಯೂರಪ್ಪ

|
Google Oneindia Kannada News

Recommended Video

Karnataka Flood: ಪ್ರವಾಹದಿಂದ 6 ಸಾವಿರ ಕೋಟಿ ನಷ್ಟ: ಯಡಿಯೂರಪ್ಪ/B. S. Yeddyurappa

ಬೆಂಗಳೂರು, ಆಗಸ್ಟ್ 10: ರಾಜ್ಯದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದ್ದು, ಜನರ ರಕ್ಷಣೆಗೆ ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 80 ತಾಲ್ಲೂಕುಗಳು ಪ್ರವಾಹ ಪೀಡಿತವಾಗಿದೆ. ಒಟ್ಟು 1024 ಗ್ರಾಮಗಳು ಮಳೆಹಾನಿಯ ಭೀಕರತೆ ಎದುರಿಸುತ್ತಿವೆ. ಸುಮಾರು 6 ಸಾವಿರ ಕೋಟಿ ನಷ್ಟ ಉಂಟಾಗಿದ್ದು, 24 ಮಂದಿ ಜೀವ ಕಳೆದುಕೊಂಡಿದ್ದಾರೆ.2,35,105 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 222 ಜಾನುವಾರುಗಳು ಸಾವನ್ನಪ್ಪಿವೆ. 44,013 ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 624 ಪರಿಹಾರ ಕೇಂದ್ರಗಳನ್ನು ತೆಗೆದಿದ್ದೇವೆ. ಆಹಾರ, ಬಟ್ಟೆ, ಔಷಧ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲ ಕಡೆ ವೈದ್ಯರು ದಿನ 24 ಗಂಟೆ ಅಲ್ಲಿಯೇ ವಾಸ್ತವ್ಯ ಹೂಡಿ ಜನರ ಆರೋಗ್ಯ ಸೇವೆಗೆ ಶ್ರಮಿಸುತ್ತಿದ್ದಾರೆ ಎಂದರು.

ಉಕ್ಕಿಹರಿಯುತ್ತಿದ್ದಾಳೆ ನೇತ್ರಾವತಿ 100ಕ್ಕೂ ಹೆಚ್ಚು ಮನೆಗಳು ಜಲಾವೃತಉಕ್ಕಿಹರಿಯುತ್ತಿದ್ದಾಳೆ ನೇತ್ರಾವತಿ 100ಕ್ಕೂ ಹೆಚ್ಚು ಮನೆಗಳು ಜಲಾವೃತ

ಅಧಿಕಾರಿಗಳು ಮಹಾರಾಷ್ಟ್ರದ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗುವುದರ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ. ನದಿ ತೀರದ ಜನರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಶಾಸಕರು ಮತ್ತು ಸಂಸದರನ್ನು ಒಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

1,57,498 ಜನರು ಆಶ್ರಯ

1,57,498 ಜನರು ಆಶ್ರಯ

ಪರಿಹಾರ ಕೇಂದ್ರಗಳಲ್ಲಿ 1,57,498 ಜನರು ಆಶ್ರಯ ಪಡೆದಿದ್ದಾರೆ. 3,22,448 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಪ್ರವಾಹ ಭೂಕುಸಿತದಿಂದ ಹಾನಿ ಸಂಭವಿಸಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಾವಿರಾರು ಜನರು ಮನೆಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. 12,651 ಮನೆಗಳು ವಾಸಕ್ಕೆ ಯೋಗ್ಯವಾಗದೆ ಹಾನಿಯಾಗಿವೆ. ಕಳೆದ ವಾರದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಆ ಸಂದರ್ಭದಿಂದಲೂ ನಾನು ಮತ್ತು ಮುಖ್ಯ ಕಾರ್ಯದರ್ಶಿ ಅವರು ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದೆವು.

ಬೆಳಗಾವಿಗೆ ನಿರ್ಮಲಾ ಸೀತಾರಾಮನ್; ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಬೆಳಗಾವಿಗೆ ನಿರ್ಮಲಾ ಸೀತಾರಾಮನ್; ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಪರಿಸ್ಥಿತಿ ಗಂಭೀರವಾಗಿದೆ

ಪರಿಸ್ಥಿತಿ ಗಂಭೀರವಾಗಿದೆ

ವಿಜಯಪುರ, ರಾಯಚೂರು, ಯಾದಗಿರಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಮಾಡಲಾಗಿದೆ. ಸೋಮವಾರ ಪ್ರಧಾನಿ ಮತ್ತು ಕೇಂದ್ರದ ಹಿರಿಯ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಕುರಿತು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. 14 ದಿನಗಳಿಂದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ದಕ್ಷಿಣ ಕನ್ನಡ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಹ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಮಂಗಳೂರಿಗೆ ರೈಲು ಸಂಪರ್ಕ ಕಡಿತಗೊಂಡಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೂಕುಸಿತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದರು.

ನನ್ನ ದೆಹಲಿ ಪ್ರವಾಸ ಮೊಟಕುಗೊಳಿಸಿ ರಾಯಚೂರು, ಬೆಳಗಾವಿ ನಗರ, ಚಿಕ್ಕೋಡಿ, ಬಾಗಲಕೋಟೆ, ಸಂಕೇಶ್ವರ, ಹಿಪ್ಪರಗಿ, ಬಾದಾಮಿ, ನರಗುಂದ, ದವಳೇಶ್ವರ, ಕೂಡಲಸಂಗಮ, ಬಾದಾಮಿ, ಹುಬ್ಬಳ್ಳಿ ಧಾರವಾಡ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಮಾಡುವ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಒಳ ಮತ್ತು ಹೊರಹರಿವು ಅಧಿಕ

ಒಳ ಮತ್ತು ಹೊರಹರಿವು ಅಧಿಕ

ಮಲೆನಾಡು ಭಾಗದ ಅಣೆಕಟ್ಟುಗಳ ಒಳ ಮತ್ತು ಹೊರ ಹರಿವಿನ ನೀರಿನ ಬಗ್ಗೆ ನಿಗಾವಣೆ ಮಾಡಲಾಗುತ್ತಿದೆ. ನಾರಾಯಣಪುರ ಅಣೆಕಟ್ಟೆಯಲ್ಲಿ 5.50 ಲಕ್ಷ ಕ್ಯೂಸೆಕ್ ಒಳಹರಿವು ಇದ್ದರೆ, 5.40 ಲಕ್ಷ ಕ್ಯೂಸೆಕ್ ಹೊರ ಹರಿವು ಇದೆ. ಆಲಮಟ್ಟಿ ಜಲಾಶಯದಲ್ಲಿ ಒಳಹರಿವು 5.15 ಲಕ್ಷ ಕ್ಯೂಸೆಕ್ ಇದೆ. ಹೊರಹರಿವು 5 ಲಕ್ಷ ಕ್ಯೂಸೆಕ್ ಇದೆ. ಕೆಆರ್‌ಎಸ್‌ನಲ್ಲಿ 1.10 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 1 ಲಕ್ಷ ಕ್ಯೂಸೆಕ್ ಹೊರಹರಿವು ಇದೆ. ಕಬಿನಿಯಲ್ಲಿ 1,12.511 ಕ್ಯೂಸೆಕ್ ಒಳಹರಿವಿನ ಪ್ರಮಾಣವಿದೆ. 1,10,082 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾರಂಗಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ 18,560 ಕ್ಯೂಸೆಕ್ ಇದ್ದರೆ, ಹೊರಹರಿವು 16,041 ಕ್ಯೂಸೆಕ್ ಇದೆ. ಹೇಮಾವತಿಯಲ್ಲಿ 1,13,451 ಕ್ಯೂಸೆಕ್ ಒಳಹರಿವು ಇದೆ. 50,300 ಕ್ಯೂಸೆಕ್ ಹೊರಹರಿವು ಇದೆ.

ಕೇಂದ್ರದಿಂದ ಸೂಕ್ತ ಸ್ಪಂದನೆ

ಕೇಂದ್ರದಿಂದ ಸೂಕ್ತ ಸ್ಪಂದನೆ

ಪರಿಸ್ಥಿತಿ ನಿಭಾಯಿಸಲು ಎಲ್ಲ ರೀತಿಯ ನೆರವನ್ನು ಸರ್ಕಾರ ನೀಡಿದೆ. ಸಕಾಲದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಿದೆ. ಸೇನೆ, ನೌಕೆ ಮತ್ತು ವಾಯು ಸೇನೆಯ ನೆರವು ಸಿಕ್ಕಿದೆ. ಎನ್‌ಡಿಆರ್‌ಎಫ್‌ನ 20 ತಂಡಗಳು, ಸೇನೆಯ 11 ತಂಡಗಳು, ನೌಕಾಪಡೆಯ 5 ತಂಡಗಳು, ವಾಯುಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೊಡಗಿನಲ್ಲಿ ಮಳೆ; ಮೈಸೂರು-ಮಡಿಕೇರಿ ವಾಹನ ಸಂಚಾರವೂ ಬಂದ್ಕೊಡಗಿನಲ್ಲಿ ಮಳೆ; ಮೈಸೂರು-ಮಡಿಕೇರಿ ವಾಹನ ಸಂಚಾರವೂ ಬಂದ್

ಜನರು ಧೈರ್ಯ ಕಳೆದುಕೊಳ್ಳಬೇಡಿ

ಜನರು ಧೈರ್ಯ ಕಳೆದುಕೊಳ್ಳಬೇಡಿ

ತುರ್ತಾಗಿ ಅಗತ್ಯವಿದ್ದರೆ ಬಳಕೆಯಾಗುವಂತೆ ಜಿಲ್ಲೆಗಳಿಗೆ ಹೆಚ್ಚುವರಿ ನೆರವು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳು ಆಯಾ ಜಿಲ್ಲೆಗಳಿಂದ ಸಂಪರ್ಕದಲ್ಲಿದ್ದಾರೆ. ಅಗತ್ಯವಿದ್ದಾಗ ಹೆಚ್ಚಿನ ರಕ್ಷಣಾ ಸಿಬ್ಬಂದಿ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ಇನ್ನು ಮೂರು ನಾಲ್ಕು ದಿನಗಳಲ್ಲಿ ಮಳೆ ನಿಯಂತ್ರಣಕ್ಕೆ ಬಂದು ಎಲ್ಲವೂ ಸರಿಯಾಗಲಿ ಎಂದು ದೇವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಪರಿಸ್ಥಿತಿಯನ್ನು ಎದೆಗುಂದದೆ ಎದುರಿಸುವಂತೆ ಪ್ರವಾಹ ಪೀಡಿತರಲ್ಲಿ ಮನವಿ. ಧೈರ್ಯ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಸರ್ಕಾರ ಮತ್ತು ಇಡೀ ನಾಡಿನ ಜನತೆ ನಿಮ್ಮ ಬೆನ್ನಿಗಿದೆ. ಸುರಕ್ಷತೆ ಮತ್ತು ಪುನರ್ವಸತಿಗೆ ಎಷ್ಟೇ ಖರ್ಚಾದರೂ ಮಾಡಿಕೊಡುತ್ತೇವೆ ಎಂದರು.

English summary
Chief Minister BS Yediyurappa said that, 1,024 villages in 80 taluks were hit by flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X