ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಕ್ಷಯರೋಗಿಗಳಲ್ಲಿ ಶೇ.8ರಷ್ಟು ಮಂದಿ ಎಚ್‌ಐವಿ ಪೀಡಿತರು

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ಕ್ಷಯ ರೋಗ(ಟಿಬಿ) ಹಾಗೂ ಎಚ್‌ಐವಿ ಎರಡೂ ಇರುವ ರೋಗಿಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ.

ಇಂಡಿಯಾ ಟ್ಯೂಬರ್ ಕಿಲಾಸಿಸ್ 2018 ಸಮೀಕ್ಷೆ ಪ್ರಕಾರ ಶೇ.8ರಷ್ಟು ಮಂದಿ ಕ್ಷಯರೋಗಿಗಳು ಎಚ್‌ಐವಿ ರೋಗದಿಂದ ಬಳಲುತ್ತಿದ್ದಾರೆ. ಕ್ಷಯ ರೋಗವನ್ನು ಪ್ರಾರಂಭದಲ್ಲಿಯೇ ತಿಳಿದುಬಂದರೆ ತಡೆಗಟ್ಟಬಹುದಾಗಿದೆ. ಆದರೆ ಅಂತಿಮ ಹಂತದಲ್ಲಿ ತಿಳಿದುಬರುತ್ತಿರುವ ಕಾರಣ ರೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

 2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ 2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ

ಕ್ಷಯ ಹಾಗೂ ಎಚ್‌ಐವಿ ಎರಡೂ ಇರುವ ವ್ಯಕ್ತಿಗಳು: ನಾಗಾಲ್ಯಾಂಡ್‌ ನಲ್ಲಿ ಶೇ. 14, ಆಂಧ್ರಪ್ರದೇಶದಲ್ಲಿ ಶೇ.10, ಒಟ್ಟಾರೆ ಕ್ಷಯ ರೋಗಿಗಳನ್ನು ಗಮನಿಸುವುದಾದರೆ ಕರ್ನಾಟಕವು 10ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 81,187 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 3,11,041 ರೋಗಿಗಳು ಇದ್ದಾರೆ.

8 percent TB patients in Karnataka are HIV possitive

ಕರ್ನಾಟಕದಲ್ಲಿ ಬಾಗಲಕೋಟೆಗೆ ಮೊದಲ ಸ್ಥಾನ: ಕರ್ನಾಟಕದಲ್ಲಿರುವ ಒಟ್ಟು ಕ್ಷಯ ರೋಗಿಗಳ ಪೈಕಿ ಶೇ.30ರಷ್ಟು ಮಂದಿ ಬಾಗಲಕೋಟೆಯಲ್ಲಿದ್ದಾರೆ. ಬೆಳಗಾವಿಯಲ್ಲಿ ಶೇ.15, ಧಾರವಾಡ, ರಾಯಚೂರು, ಉಡುಪಿಯಲ್ಲಿ ಶೇ. 11ರಷ್ಟು ಕ್ಷಯರೋಗಿಗಳು ಎಚ್‌ಐವಿಯಿಂದ ಬಳಲುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟ್ಯುಬರ್ ಕಿಲಾಸಿಸ್ ಪ್ರೋಗ್ರಾಮ್‌ನ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಅವರು ಹೇಳುವ ಪ್ರಕಾರ, ರೋಗದ ಗುಣಲಕ್ಷಗಳು ಕಂಡು ಬಂದ ತಕ್ಷಣವೇ ಸರಿಯಾದ ಚಿಕಿತ್ಸೆ ದೊರೆತರೆ ರೋಗವನ್ನು ಕಡಿಮೆ ಮಾಡಬಹುದು ಹಾಗೂ ಇನ್‌ಫೆಕ್ಷನ್ ತಡೆಗಟ್ಟಬಹುದು.

ಆದರೆ ಎಚ್ಐವಿ ಪೀಡಿತರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಲು ಆಸ್ಪತ್ರೆಗೆ ತೆರಳಿದಾಗ ಕ್ಷಯ ರೋಗವಿರುವ ಕುರಿತು ಮಾಹಿತಿ ತಿಳಿಯುತ್ತಿದೆ ಹಾಗಾಗಿ ಸಮರ್ಪಕ ಚಿಕಿತ್ಸೆ ನೀಡಲು ಸಾದ್ಯವಾಗುತ್ತಿಲ್ಲ ಎಂದಿದ್ದಾರೆ.

ರಾಜ್ಯಗಳು ಟಿಬಿ ರೋಗಿಗಳು ಎಚ್‌ಐವಿ ಪೀಡಿತ ಪ್ರಕರಣಗಳು
ಉತ್ತರ ಪ್ರದೇಶ 3,11,041 ಶೇ.1
ಮಹಾರಾಷ್ಟ್ರ 1,92,458 ಶೇ.5
ಗುಜರಾತ್ 1,49,061 ಶೇ.3
ಮಧ್ಯಪ್ರದೇಶ 1,34,333 ಶೇ.1
ರಾಜಸ್ತಾನ 1,05,953 ಶೇ.೦
ಪಶ್ಚಿಮ ಬಂಗಾಳ 97,297 ಶೇ.1
ಬಿಹಾರ 96,489 ಶೇ.1
ತಮಿಳುನಾಡು 93,327 ಶೇ.5
ಆಂಧ್ರಪ್ರದೇಶ 81,118 ಶೇ.10
ಕರ್ನಾಟಕ 81,187 ಶೇ.8

English summary
The prevalance of HIV among TB patients in Karnataka is the third highest in the country. According to the India Tuberculosis 2018 report released recently, 8percent of TB patients suffer from HIV infection and are aware of the condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X