ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಒಂದೇ ದಿನ 7810 ಮಂದಿಗೆ ಕೊರೊನಾವೈರಸ್ ಸೋಂಕು

|
Google Oneindia Kannada News

ಬೆಂಗಳೂರು, ಮೇ 13: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಅಂಕಿ-ಅಂಶಗಳು ತೋರಿಸುತ್ತಿವೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 7810 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ. ಒಂದು ದಿನದಲ್ಲಿ 125 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 32,913ಕ್ಕೆ ಏರಿಕೆಯಾಗಿದೆ.

ಅಪೋಲೋ ಆಸ್ಪತ್ರೆಯಲ್ಲಿ ಪಡೆಯುವ ಸ್ಪುಟ್ನಿಕ್-ವಿ ಲಸಿಕೆಗೆ ಎಷ್ಟು ಬೆಲೆ?ಅಪೋಲೋ ಆಸ್ಪತ್ರೆಯಲ್ಲಿ ಪಡೆಯುವ ಸ್ಪುಟ್ನಿಕ್-ವಿ ಲಸಿಕೆಗೆ ಎಷ್ಟು ಬೆಲೆ?

ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 27,65,134ಕ್ಕೆ ಏರಿಕೆಯಾಗಿದೆ. ಒಂದೇ ದಿನ 18,648 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 25,51,365 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ಹೊರತಾಗಿ 1,80,835 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

7810 New Coronavirus Cases Reported in Karnataka Today, State Tally Rise to 2765134

ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ:
ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ 1348 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 11,96,688ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 23 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 15,307ಕ್ಕೆ ಏರಿಕೆಯಾಗಿದೆ. 85,995 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

Recommended Video

Renukacharya ಅವರು ತಹಶೀಲ್ದಾರ್ ಅವರಿಗೆ ಉತ್ತರ ಕೊಟ್ಟಿದ್ದು ಹೀಗೆ | Oneindia Kannada

ಜಿಲ್ಲೆವಾರು ಕೊರೊನಾವೈರಸ್ ಪ್ರಕರಣ?:
ರಾಜ್ಯದಲ್ಲಿ ಒಟ್ಟು 7810 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 62, ಬಳ್ಳಾರಿ 141, ಬೆಳಗಾವಿ 266, ಬೆಂಗಳೂರು ಗ್ರಾಮಾಂತರ 154, ಬೆಂಗಳೂರು 1348, ಬೀದರ್ 7, ಚಾಮರಾಜನಗರ 129, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 223, ಚಿತ್ರದುರ್ಗ 128, ದಕ್ಷಿಣ ಕನ್ನಡ 434, ದಾವಣಗೆರೆ 391, ಧಾರವಾಡ 148, ಗದಗ 73, ಹಾಸನ 581, ಹಾವೇರಿ 64, ಕಲಬುರಗಿ 24, ಕೊಡಗು 125, ಕೋಲಾರ 164, ಕೊಪ್ಪಳ 76, ಮಂಡ್ಯ 467, ಮೈಸೂರು 1251, ರಾಯಚೂರು 30, ರಾಮನಗರ 47, ಶಿವಮೊಗ್ಗ 393, ತುಮಕೂರು 352, ಉಡುಪಿ 223, ಉತ್ತರ ಕನ್ನಡ 250, ವಿಜಯಪುರ 96, ಯಾದಗಿರಿ 22 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

English summary
7810 New Coronavirus Cases Reported in Karnataka Today, State Tally Rise to 2765134.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X