ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರ ವಿರುದ್ದ ಕಾಂಗ್ರೆಸ್ ಹೋರಾಡಿತು, ಸಂಘ ಪರಿವಾರ ಕೈಜೋಡಿಸಿತು

|
Google Oneindia Kannada News

Recommended Video

ಬ್ರಿಟಿಷರ ವಿರುದ್ದ ಕಾಂಗ್ರೆಸ್ ಹೋರಾಡಿತು, ಸಂಘ ಪರಿವಾರ ಕೈಜೋಡಿಸಿತು/ Dinesh Gundu Rao

ಬೆಂಗಳೂರು, ಆ 9: 'ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ದ ಹೋರಾಡಿತು, ಸಂಘ ಪರಿವಾರ ಬ್ರಿಟಿಷರ ಜೊತೆ ನಿಂತುಕೊಂಡಿತು' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕ್ವಿಟ್ ಇಂಡಿಯಾ ಚಳುವಳಿಯ 77ನೇ ವರ್ಷದ ಸ್ಮರಣಾರ್ಥ ಕೆಪಿಸಿಸಿ ಕಚೇರಿಯಲ್ಲಿನ ಕಾರ್ಯಕ್ರಮದ ನಂತರ ಟ್ವೀಟ್ ಮಾಡಿರುವ ದಿನೇಶ್, ' ಮೂರು ರಾಜ್ಯಗಳಲ್ಲಿ ಅಂದು ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಸಂಘಟನೆಗಳು ಮೈತ್ರಿಯಾಗಿ, ಬ್ರಿಟಿಷ್ ಸರ್ಕಾರದ ಪರವಾಗಿ, ಸರ್ಕಾರ ರಚಿಸಿದವು'.

ಏಕಚಕ್ರಾಧಿಪತಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಪ್ರಶ್ನೆ!ಏಕಚಕ್ರಾಧಿಪತಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಪ್ರಶ್ನೆ!

'ಭಾರತ, ಪಾಕಿಸ್ತಾನ ವಿಭಜನೆ ಆಗಬೇಕು ಎಂದು ಇವರಿಬ್ಬರು ಬಯಸಿದ್ದರು. ಆದರೆ, ಈ ಎರಡೂ ಸಿದ್ಧಾಂತಗಳಿಗೆ ವಿರುದ್ಧವಾಗಿ ಭಾರತ 'ಜಾತ್ಯಾತೀತ ರಾಷ್ಟ್ರ'ವಾಗಿ ನಿರ್ಮಾಣವಾಯಿತು' ಎಂದು ದಿನೇಶ್ ಗುಂಡೂರಾವ್ ಹೇಳಿಕೆಯನ್ನು ಕೆಪಿಸಿಸಿ ಟ್ವೀಟ್ ಮಾಡಿದೆ.

7th Quit India Movement Memory Programme At KPCC. congress Fighted Against Britishers, While Sangh Parivar Favored Them.

' ಕ್ವಿಟ್ ಇಂಡಿಯಾ ಚಳವಳಿ' ಸ್ವಾತಂತ್ರ್ಯದ ಹೋರಾಟವಾಗಬೇಕೆಂದು, ಮಾಡು ಇಲ್ಲವೆ ಮಡಿ ಎಂಬ ಘೋಷಣೆಯನ್ನು ಮಹಾತ್ಮ ಗಾಂಧಿ ಕೊಟ್ಟರು. ಅಂತೆಯೇ ಕಾಂಗ್ರೆಸ್ ನ ನಾಯಕರು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು'.

'ಈ ಹೋರಾಟಕ್ಕೆ ಮುಸ್ಲಿಂಲೀಗ್, ಸಂಘ ಪರಿವಾರ ಹಾಗೂ ಹಿಂದು ಮಹಾಸಭಾ ಬೆಂಬಲ ನೀಡಲಿಲ್ಲ, ಇವರು ಬ್ರಿಟಿಷರ ಜೊತೆ ನಿಂತುಕೊಂಡರು' ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪ್ರವಾಹ ಸಂತ್ರಸ್ತರಿಗೆ ಮಾನವೀಯತೆ ತೋರಿದ ಕುಮಾರಸ್ವಾಮಿಪ್ರವಾಹ ಸಂತ್ರಸ್ತರಿಗೆ ಮಾನವೀಯತೆ ತೋರಿದ ಕುಮಾರಸ್ವಾಮಿ

'ಭಾವನಾತ್ಮಕ ವಿಚಾರಗಳ ಮೂಲಕ, @narendramodi ಅವರು ಬಂದ ಮೇಲೆಯೆ ಎಲ್ಲಾ ಸರಿ ಹೋಗುತ್ತಿದೆ" ಎನ್ನುವಂತೆ @BJP4India ದೇಶದಲ್ಲಿ ತಪ್ಪಾಗಿ ಬಿಂಬಿಸುತ್ತಿದೆ. ಸಂವಿಧಾನದ ಅಧ್ಯಯನ ಮೂಲಕ ಮಾತ್ರವೇ ಇದನ್ನು ಬಹಿರಂಗಪಡಿಸಲು ಸಾಧ್ಯ. ಹಾಗಾಗಿ ಕಾಂಗ್ರೆಸ್ ನಾಯಕರೂ ಸೇರಿದಂತೆ, ಕಾರ್ಯಕರ್ತರು ಸಂವಿಧಾನವನ್ನು ಅಧ್ಯಯನ ಮಾಡಬೇಕು' - ವೀರಪ್ಪ ಮೊಯ್ಲಿ.

'ಸ್ವಾತಂತ್ರ್ಯ ಚಳುವಳಿ, ತ್ಯಾಗ, ಬಲಿದಾನದಂತಹ ಇತಿಹಾಸದ ಅಧ್ಯಯನ ಕಡಿಮೆ ಆಗುತ್ತಿದೆ. ಚುನಾವಣೆಗೆ ಪೂರಕವಾದ ಅಧ್ಯಯನ ಮಾಡುವಂತ ಪದ್ಧತಿ ಹೆಚ್ಚಾಗುತ್ತಿದೆ. ಬಿಜೆಪಿಯರಿಗಂತು ಇತಿಹಾಸ ಬೇಡವಾಗಿದೆ. ಇತಿಹಾಸದ ಅಧ್ಯಯನ ಇಲ್ಲದೇ ಸಮಾಜದಲ್ಲಿ ದೊಡ್ಡಮಟ್ಟದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ' - ವೀರಪ್ಪ ಮೊಯ್ಲಿ.

English summary
7th Quit India Movement Memory Programme At KPCC. congress Fighted Against Britishers, While Sangh Parivar Favored Them, KPCC President Dinesh Gundu Rao statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X