ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಇಂದು ಕೋವಿಡ್ ಸೋಂಕಿತರಿಗಿಂತ ಬಿಡುಗಡೆಯಾದವರ ಸಂಖ್ಯೆ ಹೆಚ್ಚು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯದಲ್ಲಿ ಸೋಮವಾರ 6892 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳ ಸಂಖ್ಯೆ 5,82,458ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 1,04,048 ಸಕ್ರಿಯ ಪ್ರಕರಣಗಳಿವೆ.

ಇಂದು 59 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 8,641. ಸೋಮವಾರ ಒಟ್ಟು 7509 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 4,69,750ಕ್ಕೆ ಏರಿದೆ. 822 ಮಂದಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 58,862 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನ ಜನರಿಗೆ ಖಡಕ್ ಎಚ್ಚರಿಕೆ ನೀಡಿದ ಬಿಬಿಎಂಪಿಬೆಂಗಳೂರಿನ ಜನರಿಗೆ ಖಡಕ್ ಎಚ್ಚರಿಕೆ ನೀಡಿದ ಬಿಬಿಎಂಪಿ

ರಾಜಧಾನಿ ಬೆಂಗಳೂರಿನಲ್ಲಿ ಇಂದು 2,722 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 2,23,569ಕ್ಕೆ ಏರಿದೆ. ಒಂಬತ್ತು ಮಂದಿಯ ಸಾವಿನೊಂದಿಗೆ ಮರಣ ಪ್ರಮಾಣ 2,845ಕ್ಕೆ ತಲುಪಿದೆ.

 7509 Covid-19 Patients Discharged From Hospital In Karnataka On Monday

ಇಂದು ಉಡುಪಿಯಲ್ಲಿ 332, ಹಾಸನದಲ್ಲಿ 320, ಕಲಬುರಗಿ 273, ಮೈಸೂರು 240, ಚಿಕ್ಕಮಗಳೂರು 219, ದಕ್ಷಿಣ ಕನ್ನಡ 217, ಮಂಡ್ಯ 209, ಬಾಗಲಕೋಟೆ 191, ತುಮಕೂರು 187, ಶಿವಮೊಗ್ಗ 181, ಚಿತ್ರದುರ್ಗ ಮತ್ತು ಉತ್ತರ ಕನ್ನಡ ತಲಾ 176, ಬಳ್ಳಾರಿ 164 ಪ್ರಕರಣಗಳು ವರದಿಯಾಗಿವೆ.

ಕೊವಿಡ್ 19 ಅಂಕಿ ಅಂಶ: ಜಾಗತಿಕವಾಗಿ 10 ಲಕ್ಷಕ್ಕೇರಿದ ಸಾವಿನ ಸಂಖ್ಯೆಕೊವಿಡ್ 19 ಅಂಕಿ ಅಂಶ: ಜಾಗತಿಕವಾಗಿ 10 ಲಕ್ಷಕ್ಕೇರಿದ ಸಾವಿನ ಸಂಖ್ಯೆ

ಕೊಡಗಿನಲ್ಲಿ ಅತಿ ಕಡಿಮೆ ಎಂದರೆ 25 ಪ್ರಕರಣಗಳು ವರದಿಯಾಗಿವೆ. ಕೊಪ್ಪಳ ಮತ್ತು ಬೀದರ್ ತಲಾ 45, ರಾಯಚೂರು 52, ಗದಗ 61, ಚಾಮರಾಜನಗರ 64, ರಾಮನಗರ 75 ಪ್ರಕರಣಗಳು ದಾಖಲಾಗಿವೆ. ವಿಜಯಪುರ 117, ಯಾದಗಿರಿ 82, ಹಾವೇರಿ 83, ಧಾರವಾಡ 145, ದಾವಣಗೆರೆ 107, ಚಿಕ್ಕಬಳ್ಳಾಪುರ 106, ಬೆಂಗಳೂರು ಗ್ರಾಮಾಂತರ 110 ಪ್ರಕರಣಗಳು ದಾಖಲಾಗಿವೆ.

Recommended Video

IPL 2020 RCB vs MI | Devadutt Padikkal ಬ್ಯಾಟ್‌ನಿಂದ ಮತ್ತೊಂದು ಅರ್ಧಶತಕ | Oneindia Kannada

English summary
Karnataka has registered 6,892 new coronavirus cases on Monday, is less than the number of discharged 7,509.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X