• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ 7 ಕಡೆ ಹಾದಿ ತಪ್ಪಿದ ಪೊಲೀಸರು

By ವಿಕಾಸ್ ನಂಜಪ್ಪ
|

ಬೆಂಗಳೂರು, ಸೆಪ್ಟೆಂಬರ್ 7: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಕೈಗೆತ್ತಿಕೊಳ್ಳುವ ವೇಳೆ ಪೊಲೀಸರು 7 ಸ್ವಯಂಕೃತ ತಪ್ಪುಗಳನ್ನು ಎಸಗಿದ್ದಾರೆ. ಈ ತಪ್ಪುಗಳು ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ.

ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?

ಮೊದಲಿಗೆ ಈ ಪ್ರಕರಣ ಎಂಎಂ ಕಲಬುರ್ಗಿ ಪ್ರಕರಣದಂತೆಯೇ ಸೂಕ್ಷ್ಮ ಪ್ರಕರಣ ಎಂದು ಹೇಳಲಾಗಿದ್ದು, ಪೊಲೀಸರ ಅಸೂಕ್ಷ್ಮತೆಯಿಂದ ಕೆಲವು ಪ್ರಮುಖ ಸಾಕ್ಷಿಗಳೇ ಕೈತಪ್ಪಿರುವ ಸಾಧ್ಯತೆಯೂ ಇದೆ.

ಪೊಲೀಸರು ಎಸಗಿದ ತಪ್ಪುಗಳೇನು?

1. ಕೃತ್ಯ ನಡೆದ ತಕ್ಷಣ ಪೊಲೀಸರು ಸ್ಥಳ ತಲುಪಲು 25 ನಿಮಿಷಗಳನ್ನು ತೆಗೆದುಕೊಂಡಿದ್ದರು. ಪೊಲೀಸ್ ತನಿಖೆಯಲ್ಲಿ ಕರೆಯುವ 'ಕ್ರೈಂ ಸೀನ್' ಅಂದರೆ ಘಟನೆ ನಡೆದ ಸ್ಥಳದಲ್ಲಿ ಅದಾಗಲೇ ಹಲವರು ನಡೆದಾಡಿದ್ದರು. ಇದರಿಂದ ಹಲವು ಮಹತ್ವದ ಸಾಕ್ಷ್ಯಗಳು ಸಿಕ್ಕದೇ ಹೋಗಿರಬಹುದು.

2. ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಎನ್ನಲಾದ ನೆರೆ ಮನೆಯವರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ವಿಚಾರಣೆ ಭಯದಿಂದ ಻ಅವರು ಆ ರೀತಿ ಮಾಡಿರಬಹುದು. ಇದು ಪ್ರಕರಣದ ತನಿಖೆಯ ನಿಧಾನಗತಿಗೆ ಕೊಡುಗೆ ನೀಡಲಿದೆ.

ಗೌರಿ ಹತ್ಯೆಯ ಮಾಹಿತಿಗಳಿದ್ದರೆ ಹಂಚಿಕೊಳ್ಳಿ, ಎಸ್ಐಟಿಯಿಂದ ಆಹ್ವಾನ

3. ವಿಶೇಷವೆಂದರೆ ಘಟನೆ ನಡೆದ ಸ್ಥಳದಲ್ಲಿ ಶ್ವಾನ ದಳ ಇರಲಿಲ್ಲ.

4. ಘಟನೆ ನಡೆದ ಸ್ಥಳ ಸರಗಳತನಕ್ಕೆ ಹೆಸರುವಾಸಿಯಾದ ಜಾಗವಾಗಿದೆ. ಸಾಮಾನ್ಯವಾಗಿ ಈ ಸ್ಥಳದ ಸುತ್ತ ಮುತ್ತ ಪೊಲೀಸರು ಸುತ್ತಾಡುತ್ತಾ ಇರುತ್ತಾರೆ. ಆದರೆ ಘಟನೆ ನಡೆದ ದಿನ ಹೆಚ್ಚಿನ ಪೊಲೀಸರು ಬಿಜೆಪಿ ಜಾಥಾ ತಡೆಯಲು ಹೋಗಿದ್ದರು. ಸ್ಥಳದ ಸುತ್ತ ಮುತ್ತ ಪೊಲೀಸರು ಇರಲಿಲ್ಲ.

5. ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲು ನಾಲ್ಕು ಗಂಟೆಗಳೇ ಹಿಡಿಯಿತು. ಈ ಸಿಸಿಟಿವಿ ದೃಶ್ಯಾವಳಿಗಳಿಂದ ಅವರಿಗೆ ಏನು ಸುಳಿವು ಸಿಕ್ಕಿದೆಯೋ ಗೊತ್ತಿಲ್ಲ.

6. ಸಾಮಾನ್ಯವಾಗಿ ಘಟನೆ ನಡೆದ ತಕ್ಷಣ ಪ್ರವೇಶ ಮತ್ತು ನಿರ್ಗಮನದ ದಾರಿಗಳನ್ನು ಪೊಲೀಸರು ಮುಚ್ಚುತ್ತಾರೆ. ಆದರೆ ಈ ರೀತಿ ಮಾಡಿಯೂ ಯಾರೂ ಒಳಗೆ ಬರದಂತೆ ಯಾವ ಅ಻ಧಿಕಾರಿ ತಡೆಯಬೇಕು ಎಂದು ಸರಿಯಾಗಿ ನಿರ್ದೇಶನ ನೀಡಿರಲಿಲ್ಲ. ಹೀಗಾಗಿ ಯಾರನ್ನು ಒಳಗೆ ಬಿಡಬೇಕು, ಯಾರನ್ನು ತಡೆಯಬೇಕು ಎಂಬುದು ಪೊಲೀಸರಿಗೇ ತಿಳಿದಿರಲಿಲ್ಲ.

7. ಬಹಳ ಮುಖ್ಯವಾಗಿ ಪೊಲೀಸರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
There are 7 reasons that we lay down here to state why the probe into the murder of journalist, Gauri Lankesh remains a non-starter. While at first it was stated that the murder appeared similar to that of M M Kalburgi, the problem was that the police had nothing to back that statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X