ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಬೆಂಗಳೂರಿನಲ್ಲಿ 67 ವರ್ಷದ ವೃದ್ಧೆಗೆ ಕೊರೊನಾ ಸೋಂಕು ದೃಢ

|
Google Oneindia Kannada News

ಬೆಂಗಳೂರು, ಮಾರ್ಚ್.17: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲೂ ದಿನೇ ದಿನೆ ಏರಿಕೆಯಾಗುತ್ತಲೇ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಬ್ಬ ವೃದ್ಧೆಗೆ ಮಾರಕ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

Recommended Video

Italy reports 3,590 more coronavirus cases, its biggest one-day increase

67 ವರ್ಷದ ವೃದ್ಧೆಗೆ ಕೊರೊನಾ ವೈರಸ್ ಸೋಂತು ತಗಲಿರುವುದು ಸ್ಪಷ್ಟವಾಗಿದ್ದು, ರಾಜ್ಯದಲ್ಲಿ ಇದುವರೆಗೂ 11 ಮಂದಿಗೆ ಡೆಡ್ಲಿ ವೈರಸ್ ತಗಲಿರುವುದು ಸ್ಪಷ್ಟವಾಗಿದೆ. ಸೋಂಕಿತ ವೃದ್ಧೆಯು ಕಿಡ್ನಿ ವೈಫಲ್ಯದಿಂದಲೂ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!

ಕಳೆದ ಮಾರ್ಚ್.09ರ ಸೋಮವಾರವು ಕೊರೊನಾ ವೈರಸ್ ಸೋಂಕಿತ ವೃದ್ಧೆಯು ದುಬೈನಿಂದ ಗೋವಾ ಮೂಲಕ ಬೆಂಗಳೂರಿಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಸದ್ಯ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕಿತರ ಬಗ್ಗೆ ಶ್ರೀರಾಮುಲು ಟ್ವೀಟ್

ಕೊರೊನಾ ಸೋಂಕಿತರ ಬಗ್ಗೆ ಶ್ರೀರಾಮುಲು ಟ್ವೀಟ್

ಬೆಂಗಳೂರಿನಲ್ಲಿ ಮತ್ತೊಂದು ವ್ಯಕ್ತಿಗೆ ಮಾರಕ ಕೊರೊನಾ ವೈರಸ್ ತಗುಲಿದ್ದು ಖಚಿತವಾಗಿದ್ದು, ಒಟ್ಟಾರೆ ಸಂಖ್ಯೆ 11ಕ್ಕೆ ಏರಿದೆ. ಸೋಂಕಿತ ವ್ಯಕ್ತಿ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು, ಈಗಾಗಲೇ ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಗೆ ವರ್ಗಾಯಿಸಿ ನಿಗಾವಹಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣ?

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣ?

ಕರ್ನಾಟಕದಲ್ಲಿ ಒಟ್ಟಾರೆಯಾಗಿ 11 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಇದುವರೆಗೂ ದೃಢಪಟ್ಟಿದೆ. ಇನ್ನು, ಯಾವ ಯಾವ ಜಿಲ್ಲೆಗಳಲ್ಲಿ ಅದೆಷ್ಟು ಹೊಸ ಶಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂಬುದನ್ನು ನೋಡುವುದಾದರೆ, ಬೆಂಗಳೂರು ಒಂದರಲ್ಲೇ 4 ಹೊಸ ಶಂಕಿತ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10, ದಕ್ಷಿಣ ಕನ್ನಡ 7, ಬಳ್ಳಾರಿ 1, ಚಿಕ್ಕಮಗಳೂರು 1, ಕೊಡಗು 2, ಉಡುಪಿ 1, ಬೀದರ್ 1, ಗದಗ 1, ಉತ್ತರ ಕನ್ನಡದಲ್ಲಿ 4 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು 32 ಜನರಿಗೆ ಸೋಂಕು ತಗಲಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ.

ಕೊರೊನಾ ಈ ದಿನದ ವಿವರ: ಕರ್ನಾಟಕದಲ್ಲಿ 1 ಪಾಸಿಟಿವ್, 71 ನೆಗಿಟಿವ್ಕೊರೊನಾ ಈ ದಿನದ ವಿವರ: ಕರ್ನಾಟಕದಲ್ಲಿ 1 ಪಾಸಿಟಿವ್, 71 ನೆಗಿಟಿವ್

ಐಸೋಲೇಟೆಡ್, ಗೃಹ ದಿಗ್ಬಂಧನದಲ್ಲಿ ಇರುವವರ ಮಾಹಿತಿ

ಐಸೋಲೇಟೆಡ್, ಗೃಹ ದಿಗ್ಬಂಧನದಲ್ಲಿ ಇರುವವರ ಮಾಹಿತಿ

ಇನ್ನು, ಕರ್ನಾಟಕದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 351 ಜನರನ್ನು ಅಬ್ಸರ್ ವೇಷನ್ ನಲ್ಲಿ ಇರಿಸಲಾಗಿದೆ. 113 ಜನರು 28 ದಿನಗಳ ಕಾಲ ಅಬ್ಸರ್ ವೇಷನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 319 ಜನರನ್ನು ಮನೆಗಳಲ್ಲಿಯೇ ಪ್ರತ್ಯೇಕವಾಗಿ ದಿಗ್ಬಂಧನದಲ್ಲಿ ಇರಿಸಲಾಗಿದ್ದು, 32 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಮಂಗಳವಾರ 48 ಜನರ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿಯನ್ನು ಸಂಗ್ರಹಿಸಲಾಗಿದೆ. 71 ಜನರಿಗೆ ಕೊರೊನಾ ವೈರಸ್ ತಗಲಿಲ್ಲ ಎಂದು ವರದಿ ಬಂದಿದೆ.

Tuesday Special: ಚೀನಾ To ಕರ್ನಾಟಕ; ಕೊರೊನಾ ಕಂಟಕದ ಸುತ್ತ ವಿಸ್ತೃತ ವರದಿTuesday Special: ಚೀನಾ To ಕರ್ನಾಟಕ; ಕೊರೊನಾ ಕಂಟಕದ ಸುತ್ತ ವಿಸ್ತೃತ ವರದಿ

ಬುಧವಾರದಿಂದಲೇ ಕಲಬುರಗಿಯಲ್ಲಿ ಹೊಸ ಲ್ಯಾಬ್

ಬುಧವಾರದಿಂದಲೇ ಕಲಬುರಗಿಯಲ್ಲಿ ಹೊಸ ಲ್ಯಾಬ್

ಕಲಬುರಗಿಯಲ್ಲಿ ಡೆಡ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಇದರ ನಡುವೆ ಇನ್ನೆರೆಡು ದಿನಗಳಲ್ಲೇ ಜಿಲ್ಲಾಕೇಂದ್ರದಲ್ಲಿ ಸ್ಪೆಷಲ್ ಲ್ಯಾಬ್ ಒಂದು ಕಾರ್ಯಾರಂಭ ಮಾಡಲಿದೆ. ಕಳೆದ ಮಾರ್ಚ್.18ರಿಂದ ವೈರಸ್ ರಿಸರ್ಚ್ ಆಂಡ್ ಡೈಯಾಗ್ನಾಸ್ಟಿಕ್ ಲ್ಯಾಬೋರೇಟರಿ (VRDL) ಕಾರ್ಯಾರಂಭ ಮಾಡಲಿದೆ.

English summary
67-Years Old Women Also Infected From Deadly Coronavirus In Bangalore. Karnataka Total Cases Rise To 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X