ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆ ಝಲ್ ಎನ್ನಿಸುತ್ತೆ ಕರ್ನಾಟಕದ ಕೊವಿಡ್-19 ಸೋಂಕಿತರ ಸಂಖ್ಯೆ!

|
Google Oneindia Kannada News

ಬೆಂಗಳೂರು, ಆಗಸ್ಟ್.07: ಕರ್ನಾಟಕದ ಪಾಲಿಗೆ ಕೊರೊನಾವೈರಸ್ ನಿರಂತರ ಎರಡನೇ ದಿನವೂ ಭಾರಿ ಹೊಡೆತ ಕೊಟ್ಟಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಸೋಂಕಿತರ ಸಂಖ್ಯೆಯು ಜನರ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ. ಎರಡನೇ ದಿನವೂ ಸೋಂಕಿತರ ಸಂಖ್ಯೆ 6600ರ ಗಡಿ ದಾಟಿದೆ.

Recommended Video

ಗಾಣಗಪುರದ ದತ್ತನ ದರ್ಶನವೇ ಡಿಕೆ ಶಿವಕುಮಾರ್ ಗೆ ಮುಳುವಾಯ್ತಾ? | Oneindia Kannada

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 6670 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 164924ಕ್ಕೆ ಏರಿಕೆಯಾಗಿದೆ.

ಕೊವಿಡ್-19 ತಪಾಸಣೆ: ಏಷ್ಯಾ ರಾಷ್ಟ್ರಗಳಲ್ಲಿ ಭಾರತಕ್ಕೆ ಇಂಥಾ ಸ್ಥಿತಿಯೇ?ಕೊವಿಡ್-19 ತಪಾಸಣೆ: ಏಷ್ಯಾ ರಾಷ್ಟ್ರಗಳಲ್ಲಿ ಭಾರತಕ್ಕೆ ಇಂಥಾ ಸ್ಥಿತಿಯೇ?

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ. ರಾಜ್ಯದಲ್ಲಿ ಒಂದೇ ದಿನ ಮಹಾಮಾರಿಗೆ 101 ಮಂದಿ ಪ್ರಾಣ ಬಿಟ್ಟಿದ್ದು, ಕೊವಿಡ್-19ಗೆ ಬಲಿಯಾದವರ ಸಂಖ್ಯೆಯು 2998ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3951 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 84232 ಮಂದಿ ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ 77686 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ 40 ಸಾವಿರ ದಾಟಿದ ಕೊವಿಡ್-19 ತಪಾಸಣೆ

ರಾಜ್ಯದಲ್ಲಿ 40 ಸಾವಿರ ದಾಟಿದ ಕೊವಿಡ್-19 ತಪಾಸಣೆ

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 23664 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 19889 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 43553 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 1624628 ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ 2147 ಮಂದಿಗೆ ಕೊರೊನಾವೈರಸ್

ಸಿಲಿಕಾನ್ ಸಿಟಿಯಲ್ಲಿ 2147 ಮಂದಿಗೆ ಕೊರೊನಾವೈರಸ್

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲೇ ಸಿಲಿಕಾನ್ ಸಿಟಿಯಲ್ಲಿ 2147 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 69572 ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ 22 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1200ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?

ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?

ರಾಜ್ಯದಲ್ಲಿ ಒಟ್ಟು 6670 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 19 ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 2147, ಬಳ್ಳಾರಿ 684, ಬೆಳಗಾವಿ 390, ಕಲಬುರಗಿ 271, ಧಾರವಾಡ 266, ಉಡುಪಿ 246, ಮೈಸೂರು 242, ಕೊಪ್ಪಳ 173, ರಾಯಚೂರು 171, ದಕ್ಷಿಣ ಕನ್ನಡ 166, ಶಿವಮೊಗ್ಗ 151, ಬಾಗಲಕೋಟೆ 148, ವಿಜಯಪುರ 143, ಹಾಸನ 138, ಉತ್ತರ ಕನ್ನಡ 120, ಬೆಂಗಳೂರು ಗ್ರಾಮಾಂತರ 119, ದಾವಣಗೆರೆ 111, ಗದಗ 105, ಮಂಡ್ಯ 102, ರಾಮನಗರ 93, ಹಾವೇರಿ 90, ಕೋಲಾರ 88, ಬೀದರ್ 84, ತುಮಕೂರು 76, ಯಾದಗಿರಿ 70, ಚಕ್ಕಮಗಳೂರು 65, ಚಿಕ್ಕಬಳ್ಳಾಪುರ 64, ಚಾಮರಾಜನಗರ 63, ಚಿತ್ರದುರ್ಗ 57, ಕೊಡಗು 27, ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ 24 ಗಂಟೆಗಳಲ್ಲಿ 3951 ಸೋಂಕಿತರು ಗುಣಮುಖ

ರಾಜ್ಯದಲ್ಲಿ 24 ಗಂಟೆಗಳಲ್ಲಿ 3951 ಸೋಂಕಿತರು ಗುಣಮುಖ

ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 3951 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರ 1131, ಬಳ್ಳಾರಿ 627, ದಾವಣಗೆರೆ 206, ಕಲಬುರಗಿ 203, ದಕ್ಷಿಣ ಕನ್ನಡ 188, ಮೈಸೂರು 168, ಶಿವಮೊಗ್ಗ 135, ವಿಜಯಪುರ 128, ಧಾರವಾಡ 121, ಉಡುಪಿ 103, ಹಾವೇರಿ 92, ಬಾಗಲಕೋಟೆ 84, ಕೊಪ್ಪಳ 79, ಉತ್ತರ ಕನ್ನಡ 78, ಗದಗ 75, ರಾಯಚೂರು 73, ಯಾದಗಿರಿ 71, ರಾಮನಗರ 66, ಬೆಳಗಾವಿ 52, ಚಿಕ್ಕಬಳ್ಳಾಪುರ 49, ಕೋಲಾರ 43, ತುಮಕೂರು 31, ಬೀದರ್ 29, ಚಾಮರಾಜನಗರ 27, ಚಿಕ್ಕಮಗಳೂರು 21, ಬೆಂಗಳೂರು ಗ್ರಾಮಾಂತರ 20, ಮಂಡ್ಯ 19, ಕೊಡಗು 13, ಹಾಸನ 11, ಚಿತ್ರದುರ್ಗ 8 ಮಂದಿ ಗುಣಮುಖರಾಗಿದ್ದಾರೆ.

English summary
6670 New Coronavirus Cases Reported in Karnataka Today, State Tally Rise to 164924.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X