ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕವು 65ನೇ ರಾಜ್ಯೋತ್ಸವ ಆಚರಿಸುತ್ತಿದ್ದು, ಈ ಮಹತ್ವದ ಸಂದರ್ಭದ ಸಲುವಾಗಿ 65 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಾಡಿಕೆಯಂತೆ ಈ ಬಾರಿ ರಾಜ್ಯೋತ್ಸವ ದಿನವಾದ ನ.1ರಂದು ಪ್ರಶಸ್ತಿ ಪ್ರದಾನ ಮಾಡುತ್ತಿಲ್ಲ. ನವೆಂಬರ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಸಿ.ಟಿ ರವಿ ಪುರಸ್ಕೃತರ ಪಟ್ಟಿ ಬಿಡುಗಡೆ ವೇಳೆ ತಿಳಿಸಿದರು.

ಕ್ರೀಡಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕಡೆ 60 ವರ್ಷ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ನ್ಯಾಯ ಒದಗಿಸಲಾಗಿದೆ. 26 ವಿವಿಧ ಕ್ಷೇತ್ರಗಳನ್ನ ಗುರುತಿಸಿಲಾಗಿದ್ದು, ಅನೇಕ ಶಿಫಾರಸ್ಸು ಬಂದಿದ್ದರೂ ಅರ್ಹತೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಪ್ರತಿ ಜಿಲ್ಲೆಗೂ ಒಂದಾದರೂ ರಾಜ್ಯೋತ್ಸವ ಪ್ರಶಸ್ತಿ ಇರಬೇಕು ಎಂಬುದನ್ನು ಪರಿಗಣಿಸಲಾಗಿದೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ಪೋಷಿತವಾದ ಯುವ ಬ್ರಿಗೇಡ್‌ ಕೂಡ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸಂಘ ಸಂಸ್ಥೆ ಕ್ಷೇತ್ರದಲ್ಲಿ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಿಯಮ ಮೀರಿ ಪ್ರಶಸ್ತಿ ಕೊಟ್ಟಿಲ್ಲ. ಆರ್ ಎಸ್ ಎಸ್ ಪೋಷಿತ ಆಗಿರುವುದಕ್ಕೆ ಪ್ರಶಸ್ತಿ ಕೊಡಬಾರದು ಎಂದೇನೂ ಇಲ್ಲ. ಸಂಘದ ಸೇವೆಯನ್ನು ಪರಿಗಣಿಸಿ ಕೊಟ್ಟಿದ್ದೇವೆ. ಈ ವಿಚಾರವಾಗಿ ಯಾರಿಂದಲೂ ಒತ್ತಡ ಬಂದಿಲ್ಲ ಎಂದು ತಿಳಿಸಿದ್ದಾರೆ. ಪುರಸ್ಕೃತರ ಪಟ್ಟಿ ಇಲ್ಲಿದೆ.

ಸಾಹಿತ್ಯ ಕ್ಷೇತ್ರ

ಸಾಹಿತ್ಯ ಕ್ಷೇತ್ರ

* ಪ್ರೋ ಸಿಪಿ ಸಿದ್ಧಾಶ್ರಮ, ಧಾರವಾಡ

* ವಿ. ಮುನಿ ವೆಂಕಟಪ್ಪ, ಕೋಲಾರ

* ರಾಮಣ್ಣ ಬ್ಯಾಟಿ ( ವಿಶೇಷ ಚೇತನ), ಗದಗ

* ವಲೇರಿಯನ್ ಡಿಸೋಜ (ವಲ್ಲಿವಗ್ಗ), ದಕ್ಷಿಣ ಕನ್ನಡ

* ಡಿ ಎನ್ ಅಕ್ಕಿ, ಯಾದಗಿರಿ.

ಸಂಗೀತ ಕ್ಷೇತ್ರದ ಸಾಧಕರು

ಸಂಗೀತ ಕ್ಷೇತ್ರ

* ಹಂಬಯ್ಯ ನೂಲಿ, ರಾಯಚೂರು

* ಅನಂತ ತೇರದಾಳ, ಬೆಳಗಾವಿ

* ಬಿ.ವಿ ಶ್ರೀನಿವಾಸ್ , ಬೆಂಗಳೂರು ನಗರ

* ಗಿರಿಜಾ ನಾರಾಯಣ , ಬೆಂಗಳೂರು ನಗರ

* ಕೆ ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ

ನ್ಯಾಯಾಂಗ, ಮಾಧ್ಯಮ, ಯೋಗ

ನ್ಯಾಯಾಂಗ, ಮಾಧ್ಯಮ, ಯೋಗ

ನ್ಯಾಯಾಂಗ

* ಕೆ.ಎನ್. ಭಟ್, ಬೆಂಗಳೂರು

* ಎಂಕೆ ವಿಜಯಕುಮಾರ್, ಉಡುಪಿ


ಮಾಧ್ಯಮ

* ಸಿ. ಮಹೇಶ್ವರನ್, ಮೈಸೂರು

* ಟಿ. ವೆಂಕಟೇಶ್ (ಈ ಸಂಜೆ), ಬೆಂಗಳೂರು


ಯೋಗ

* ಡಾ. ಎ.ಎಸ್. ಚಂದ್ರಶೇಖರ್, ಮೈಸೂರು

ಶಿಕ್ಷಣ

ಶಿಕ್ಷಣ

* ಎಂ.ಎನ್. ಷಡಕ್ಷರಿ, ಚಿಕ್ಕಮಗಳೂರು

* ಡಾ. ಆರ್ ರಾಮಕೃಷ್ಣ, ಚಾಮರಾಜನಗರ

* ಡಾ. ಎಂಜಿ ಈಶ್ವರಪ್ಪ, ದಾವಣಗೆರೆ

* ಡಾ. ಪುಟ್ಟಸಿದ್ದಯ್ಯ, ಮೈಸೂರು

* ಅಶೋಕ್ ಶೆಟ್ಟರ್, ಬೆಳಗಾವಿ

* ಡಿಎಸ್ ದಂಡಿನ್, ಗದಗ

ಹೊರನಾಡು ಕನ್ನಡಿಗರು, ಕ್ರೀಡೆ, ಸಂಕೀರ್ಣ

ಹೊರನಾಡು ಕನ್ನಡಿಗರು, ಕ್ರೀಡೆ, ಸಂಕೀರ್ಣ

ಹೊರನಾಡು ಕನ್ನಡಿಗರು

* ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ದಕ್ಷಿಣ ಕನ್ನಡ

* ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮಾಲುಂಡ, ಮುಂಬೈ.

ಕ್ರೀಡೆ

* ಎಚ್‌ಬಿ ನಂಜೇಗೌಡ, ತುಮಕೂರು

* ಉಷಾರಾಣಿ, ಬೆಂಗಳೂರು


ಸಂಕೀರ್ಣ

* ಡಾ.ಕೆವಿ ರಾಜು, ಕೋಲಾರ

* ನಂ. ವೆಂಕೋಬರಾವ್, ಹಾಸನ

* ಡಾ. ಕೆಎಸ್ ರಾಜಣ್ಣ (ವಿಕಲಚೇತನ), ಮಂಡ್ಯ

* ವಿ. ಲಕ್ಷ್ಮೀನಾರಾಯಣ (ನಿರ್ಮಾಣ್) ಮಂಡ್ಯ

ಸಂಘ ಸಂಸ್ಥೆ, ಸಮಾಜಸೇವೆ

ಸಂಘ ಸಂಸ್ಥೆ, ಸಮಾಜಸೇವೆ

ಸಂಘ ಸಂಸ್ಥೆ

* ಯೂಥ್ ಫಾರ್ ಸೇವಾ, ಬೆಂಗಳೂರು

* ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ

* ಬೆಟರ್ ಇಂಡಿಯಾ, ಬೆಂಗಳೂರು

* ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ

* ಧರ್ಮೋತ್ಥಾನ ಟ್ರಸ್ಟ್‌, ಧರ್ಮಸ್ಥಳ, ದಕ್ಷಿಣ ಕನ್ನಡ

ಸಮಾಜಸೇವೆ

* ಎನ್ ಎಸ್ (ಕುಂದರಗಿ) ಹೆಗಡೆ, ಉತ್ತರ ಕನ್ನಡ

* ಪ್ರೇಮಾ ಕೋಮಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು

* ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ

* ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು

ವೈದ್ಯಕೀಯ, ಕೃಷಿ, ಸಹಕಾರ, ವಿಜ್ಞಾನ

ವೈದ್ಯಕೀಯ, ಕೃಷಿ, ಸಹಕಾರ, ವಿಜ್ಞಾನ

ವೈದ್ಯಕೀಯ

* ಡಾ. ಅಶೋಕ್ ಸೊನ್ನದ್, ಬಾಗಲಕೋಟೆ

* ಡಾ. ಬಿಎಸ್ ಶ್ರೀನಾಥ್, ಶಿವಮೊಗ್ಗ

* ಡಾ. ಎ. ನಾಗರತ್ನ, ಬಳ್ಳಾರಿ

* ಡಾ. ವೆಂಕಟಪ್ಪ ರಾಮನಗರ


ಕೃಷಿ

* ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಬೀದರ್

* ಎಸ್‌ವಿ ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ

* ಡಾ. ಸಿದ್ರಾಮಪ್ಪ ಬಸವಂತರಾವ್ ಪಾಟೀಲ್, ಕಲಬುರಗಿ


ಪರಿಸರ

* ಅಮರ ನಾರಾಯಣ, ಚಿಕ್ಕಬಳ್ಳಾಪುರ

* ಎನ್‌ಡಿ ಪಾಟೀಲ್, ವಿಜಯಪುರ


ವಿಜ್ಞಾನ/ತಂತ್ರಜ್ಞಾನ

* ಪ್ರೊ. ಉಡುಪಿ ಶ್ರೀನಿವಾಸ, ಉಡುಪಿ

* ಡಾ. ಚಿಂದಿ ವಾಸುದೇವಪ್ಪ, ಶಿವಮೊಗ್ಗ


ಸಹಕಾರ

* ಡಾ. ಸಿಎನ್ ಮಂಜೇಗೌಡ, ಬೆಂಗಳೂರು

ಬಯಲಾಟ, ಯಕ್ಷಗಾನ, ರಂಗಭೂಮಿ, ಸಿನಿಮಾ

ಬಯಲಾಟ, ಯಕ್ಷಗಾನ, ರಂಗಭೂಮಿ, ಸಿನಿಮಾ

ಬಯಲಾಟ

* ಕೆಂಪವ್ವ ಹರಿಜನ, ಬೆಳಗಾವಿ

* ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ


ಯಕ್ಷಗಾನ

* ಬಂಗಾರ್ ಆಚಾರಿ, ಚಾಮರಾಜನಗರ

* ಎಂಕೆ ರಮೇಶ್ ಆಚಾರ್ಯ, ಶಿವಮೊಗ್ಗ


ರಂಗಭೂಮಿ

* ಅನಸೂಯಮ್ಮ, ಹಾಸನ

* ಎಚ್. ಷಡಾಕ್ಷರಪ್ಪ, ದಾವಣಗೆರೆ

* ತಿಪ್ಪೇಸ್ವಾಮಿ, ಚಿತ್ರದುರ್ಗ


ಚಲನಚಿತ್ರ

* ಬಿಎಸ್ ಬಸವರಾಜ್, ತುಮಕೂರು

* ಎ.ಟಿ. ರಘು, ಕೊಡಗು

Recommended Video

Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada
ಕಲಾ ಕ್ಷೇತ್ರಗಳಲ್ಲಿ ಪ್ರಶಸ್ತಿ

ಕಲಾ ಕ್ಷೇತ್ರಗಳಲ್ಲಿ ಪ್ರಶಸ್ತಿ

ಚಿತ್ರಕಲೆ

* ಎಂಜೆ ವಾಚೇದ್ ಮಠ, ಧಾರವಾಡ


ಜಾನಪದ

* ಗುರುರಾಜ ಹೊಸಕೋಟೆ, ಬಾಗಲಕೋಟೆ

* ಡಾ. ಹಂಪನಹಳ್ಳಿ ತಿಮ್ಮೇಗೌಡ, ಹಾಸನ


ಶಿಲ್ಪಕಲೆ

* ಎನ್ಎಸ್ ಜನಾರ್ದನ ಮೂರ್ತಿ, ಮೈಸೂರು


ನೃತ್ಯ

* ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್


ಜಾನಪದ/ತೊಗಲು ಗೊಂಬೆಯಾಟ

* ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ

English summary
The Karnataka state government announced the names of the 65 eminent personalities who will be awarded the Rajyotsava award. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X