• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ 64% ಶಾಲೆಗಳಲ್ಲಿ ಆಟದ ಮೈದಾನ, ದೇಶದಲ್ಲೇ ಅಧಿಕ!

|

ಬೆಂಗಳೂರು, ಜುಲೈ 23: ಶಿಕ್ಷಣಕ್ಕಾಗಿ ಇರುವ ಜಿಲ್ಲಾ ಮಾಹಿತಿ ವ್ಯವಸ್ಥೆ (ಡಿಐಎಸ್‍ಇ) ವರದಿಯ ಪ್ರಕಾರ, ರಾಜ್ಯದ 64% ಶಾಲೆಗಳು ಆಟದ ಮೈದಾನವನ್ನು ಹೊಂದಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕ. ಈ ಶೇಕಡಾವಾರು ಪ್ರಮಾಣವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕ್ರಮಿಸಬೇಕಾದ ದಾರಿ ಸುಧೀರ್ಘ.

ಈ ವರದಿಯಿಂದ ತಿಳಿದುಬರುವಂತೆ ಉತ್ತರ ಬೆಂಗಳೂರಿನ ಶೇಕಡ 60ರಷ್ಟು ಮತ್ತು ದಕ್ಷಿಣ ಬೆಂಗಳೂರಿನ ಶೇಕಡ 69ರಷ್ಟು ಶಾಲೆಗಳು ಆಟದ ಮೈದಾನ ಹೊಂದಿವೆ. 2009-10ರಲ್ಲಿ ಶಿಕ್ಷಣದ ಹಕ್ಕು (ಆರ್‍ಟಿಇ) ಕಾಯ್ದೆ ಜಾರಿಗೆ ಬಂದಾಗ, ದೇಶದಲ್ಲಿ 54% ಪ್ರಾಥಮಿಕ ಶಾಲೆಗಳ ಮಕ್ಕಳಿಗಷ್ಟೇ ಆಟದ ಮೈದಾನದ ಸೌಲಭ್ಯವಿತ್ತು. ಇದು ನಿಧಾನವಾಗಿ ಏರಿಕೆಯಾಗುತ್ತಿದ್ದು, ಪ್ರಸ್ತುತ ಇದು 64% ಆಗಿದೆ. ರಾಷ್ಟ್ರಮಟ್ಟದಲ್ಲಿ ಶೇಕಡ 60ರಷ್ಟು ಶಾಲೆಗಳು ಆಟದ ಮೈದಾನ ಸೌಲಭ್ಯ ಹೊಂದಿದ್ದಾರೆ (ಡಿಐಎಸ್‍ಇ 2015-16).

ಮಕ್ಕಳಿಗೆ ತಪ್ಪಿಲ್ಲ ಶಾಲಾ ಬ್ಯಾಗ್ ಹೊರೆ: ಪತ್ರಕ್ಕಷ್ಟೇ ಸೀಮಿತವಾದ ಆದೇಶ

ಚೈಲ್ಡ್ ರೈಟ್ಸ್ ಅಂಡ್ ಯೂ (CRY), ಮಕ್ಕಳಿಗಾಗಿ ಕೆಲಸ ಮಾಡುವ ಮುಂಚೂಣಿ ಸರ್ಕಾರೇತರ ಸಂಸ್ಥೆಯಾಗಿದ್ದು, ಆತ್ಮವಿಶ್ವಾಸ ವೃದ್ಧಿಸುವ, ಸಮಸ್ಯೆ ಪರಿಹಾರ ಕೌಶಲ ಹೆಚ್ಚಿಸುವ ಹಾಗೂ ಒಟ್ಟಾರೆ ಜೀವನಕ್ಕೆ ಮಾರ್ಗದರ್ಶನವಾಗುವ ಕ್ರೀಡೆ ಮಕ್ಕಳ ದೈನಂದಿನ ಚಟುವಟಿಕೆಯ ಭಾಗವಾಗಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟಿದೆ. ಇದು ದೈನಂದಿನ ವಾಸ್ತವ ಮತ್ತಷ್ಟು ಕಠಿಣ ಎನಿಸಿರುವ ತುಳಿತಕ್ಕೊಳಗಾದ ಮಕ್ಕಳ ಪಾಲಿಗಂತೂ ಮತ್ತಷ್ಟು ಸತ್ಯ.

ಆಟದ ಮೈದಾನ ಹೊಂದಿರುವ % ಶಾಲೆಗಳು (ಪ್ರಾಥಮಿಕ ಶಿಕ್ಷಣ)

ಆಟದ ಮೈದಾನ ಹೊಂದಿರುವ % ಶಾಲೆಗಳು (ಪ್ರಾಥಮಿಕ ಶಿಕ್ಷಣ)

ಕರ್ನಾಟಕ

2011-12: 66

2012-13: 63

2013-14: 63

2014-15: 64

2015-16: 64

ಭಾರತ

2011-12: 56

2012-13: 57

2013-14: 58

2014-15: 59

2015-16: 60

ಕ್ರೀಡೆಯ ಮೂಲಕ ಶಿಕ್ಷಣ ಎಂಬ ಧ್ಯೇಯಕ್ಕೆ ಪೂರಕ

ಕ್ರೀಡೆಯ ಮೂಲಕ ಶಿಕ್ಷಣ ಎಂಬ ಧ್ಯೇಯಕ್ಕೆ ಪೂರಕ

ಕ್ರೀಡೆಯ ಮೂಲಕ ಶಿಕ್ಷಣ ಎಂಬ ಧ್ಯೇಯಕ್ಕೆ ಪೂರಕವಾಗಿ ಕ್ರೈ, "ಶಂಕರ ಬಿಲ್ಡ್‍ಪ್ರೋ ಸಾಕರ್ ಫಾರ್ ಚೈಲ್ಡ್ ರೈಟ್ಸ್" ಚಾಂಪಿಯನ್‍ಶಿಪ್ ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಆ ಯೋಜನಾ ಪ್ರದೇಶದ ಕಾರ್ಪೊರೇಟ್ ತಂಡಗಳು ಆಗಮಿಸಿ ಮೈದಾನವನ್ನು ಯುವಕರ ಜತೆ ಹಂಚಿಕೊಳ್ಳುತ್ತವೆ. ಹೀಗೆ ಮಾಡುವ ಮೂಲಕ ಮಕ್ಕಳ ಹಕ್ಕುಗಳ ಧ್ಯೇಯವನ್ನು ಎತ್ತಿಹಿಡಿಯುತ್ತಾರೆ. ಆ ದಿನದಂದು ಕ್ರೀಡಾಮೈದಾನ ಬದಲಾವಣೆಯ ಕೇಂದ್ರ ಬಿಂದುವಾಗಲಿದೆ.

ಕ್ರೈ ಪ್ರಾದೇಶಿಕ ನಿರ್ದೇಶಕಿ ಸುಮಾ ರವಿ

ಕ್ರೈ ಪ್ರಾದೇಶಿಕ ನಿರ್ದೇಶಕಿ ಸುಮಾ ರವಿ

"ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ನಮ್ಮ ಅನುಭವದ ಪ್ರಕಾರ, ಶಾಲೆ ಬಿಟ್ಟ ಹಲವಾರು ಮಕ್ಕಳು ಶಾಲೆಗೆ ಮರಳಿ, ಕ್ರೀಡೆಯಲ್ಲಿ ಪಾಲ್ಗೊಂಡು ಕ್ರಮೇಣ ಎರಡೂ ಕ್ಷೇತ್ರಗಳಲ್ಲಿ ಯಶಸ್ಸು ಸಾಧೀಸಿದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಆಟದ ಮೈದಾನ ಮಕ್ಕಳನ್ನು ಶಾಲೆಗೆ ಬರುವಂತೆ ಉತ್ತೇಜಿಸುವ ಪ್ರೋತ್ಸಾಹಕವಾಗುತ್ತದೆ ಎನ್ನುವುದನ್ನು ಕಡೆಗಣಿಸುವಂತಿಲ್ಲ. ಈ ಕೂಟದ ಮೂಲಕ, ಮಕ್ಕಳ ಬದುಕಿನಲ್ಲಿ ಕ್ರೀಡೆ ನಿಜವಾಗಿಯೂ ಅರ್ಥಪೂರ್ಣ ಪರಿಣಾಮಕ್ಕೆ ಮಾರ್ಗವಾಗಲಿದೆ ಮತ್ತು ಆಟ ಮಕ್ಕಳ ಬದುಕಿನ ಅವಿಭಾಜ್ಯ ಅಂಗ ಎನ್ನುವ ಬಗ್ಗೆ ಜನತೆಯನ್ನು ಸಂವೇದನಾಶೀಲರಾಗಿಸುವುದು ನಮ್ಮ ಉದ್ದೇಶ" ಎಂದು ಕ್ರೈ ಪ್ರಾದೇಶಿಕ ನಿರ್ದೇಶಕರಾದ (ದಕ್ಷಿಣ) ಸುಮಾ ರವಿ ಅಭಿಪ್ರಾಯಪಟ್ಟಿದ್ದಾರೆ.

ಕ್ರೈ: ಚೈಲ್ಡ್ ರೈಟ್ಸ್ ಅಂಡ್ ಯೂ

ಕ್ರೈ: ಚೈಲ್ಡ್ ರೈಟ್ಸ್ ಅಂಡ್ ಯೂ

ಕ್ರೈ: ಚೈಲ್ಡ್ ರೈಟ್ಸ್ ಅಂಡ್ ಯೂ ಎನ್ನುವುದು ಭಾರತೀಯ ಸರ್ಕಾರೇತರ ಸಂಸ್ಥೆಯಾಗಿದ್ದು, ಮಕ್ಕಳ ಬದುಕುವ, ಕಲಿಯುವ, ಬೆಳೆಯುವ ಹಾಗೂ ಆಡುವ ಹೀಗೆ ಮಕ್ಕಳ ಪ್ರತಿಯೊಂದು ಹಕ್ಕುಗಳಲ್ಲಿ ನಂಬಿಕೆ ಇರಿಸಿದೆ. ನಾಲ್ಕು ದಶಕಗಳಿಂದ, ಕ್ರೈ ಮತ್ತು ಅದರ 850 ಉಪಕ್ರಮಗಳು ಮಕ್ಕಳ ಪೋಷಕರು ಹಾಗೂ ಸಮುದಾಯದ ಜತೆ ಕಾರ್ಯ ನಿರ್ವಹಿಸಿ, ಭಾರತದ 23 ರಾಜ್ಯಗಳ 2 ಲಕ್ಷಕ್ಕೂ ಅಧಿಕ ಸೌಲಭ್ಯವಂಚಿತ ಮಕ್ಕಳ ಬದುಕಿನಲ್ಲಿ ಧೀರ್ಘಾವಧಿ ಬದಲಾವಣೆಯನ್ನು ಖಾತರಿಪಡಿಸಿದೆ.

English summary
The grass is greener for them. They are the children of Karnataka and according to the latest District Information System for Education (DISE) report, 64% schools in the state have a playground which scores better than the national average, however there is a long way to go to better the percentage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X