ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಇಂದು 6,257 ಹೊಸ ಕೋವಿಡ್ ಪ್ರಕರಣ

|
Google Oneindia Kannada News

ಬೆಂಗಳೂರು, ಆಗಸ್ಟ್ 11 : ಕರ್ನಾಟಕದಲ್ಲಿ 6257 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,88,611ಕ್ಕೆ ಏರಿಕೆಯಾಗಿದೆ.

Recommended Video

Manmohan Singh : ದೇಶದ ಆರ್ಥಿಕ ಆರೋಗ್ಯಕ್ಕೆ ನೀಡಿದ ಮೂರು ಸೂತ್ರ | Oneindia Kannada

ರಾಜ್ಯದ ಕೋವಿಡ್ ಪ್ರಕರಣಗಳ ಕುರಿತು ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆ ಮಾಡಿದೆ. ಮಂಗಳವಾರ ರಾಜ್ಯದಲ್ಲಿ 6,257 ಹೊಸ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 1610 ಹೊಸ ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರದ 5 ಕೋವಿಡ್ ಆರೈಕೆ ಕೇಂದ್ರಗಳಿಗೆ ಬೀಗ ಬೆಂಗಳೂರು ನಗರದ 5 ಕೋವಿಡ್ ಆರೈಕೆ ಕೇಂದ್ರಗಳಿಗೆ ಬೀಗ

ಮಂಗಳವಾರ ಕರ್ನಾಟಕದಲ್ಲಿ 86 ಜನರು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 3,398ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 79,606.

ಕೋವಿಡ್ ಪರೀಕ್ಷೆ ಮಾಡಿಸುವ ಮೊದಲು ಇದನ್ನು ಓದಿ!ಕೋವಿಡ್ ಪರೀಕ್ಷೆ ಮಾಡಿಸುವ ಮೊದಲು ಇದನ್ನು ಓದಿ!

ಆರೋಗ್ಯ ಇಲಾಖೆ ಮಾಹಿತಿಯಂತೆ ಕರ್ನಾಟಕದಲ್ಲಿ ಇಂದು 6473 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 699 ಜನರು ರಾಜ್ಯದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಕೋವಿಡ್ ಸೋಂಕಿತರ ಮನೆ ಸೀಲ್ ಡೌನ್ ಇಲ್ಲ? ಇನ್ನು ಕೋವಿಡ್ ಸೋಂಕಿತರ ಮನೆ ಸೀಲ್ ಡೌನ್ ಇಲ್ಲ?

ಹರತಾಳು ಹಾಲಪ್ಪ ಗುಣಮುಖ

ಹರತಾಳು ಹಾಲಪ್ಪ ಗುಣಮುಖ

ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಮಂಗಳವಾರ ಅವರು ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರು ನಗರ

ಬೆಂಗಳೂರು ನಗರ

ಇಂದು ಬೆಂಗಳೂರು ನಗರದಲ್ಲಿ 1610 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 77,038ಕ್ಕೆ ಏರಿಕೆಯಾಗಿದೆ. 1293 ಜನರು ಇದುವರೆಗೂ ನಗರದಲ್ಲಿ ಮೃತಪಟ್ಟಿದ್ದಾರೆ.

11 ಸಾವಿರಕ್ಕೆ ಏರಿದ ಸಂಖ್ಯೆ

11 ಸಾವಿರಕ್ಕೆ ಏರಿದ ಸಂಖ್ಯೆ

ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಬಳ್ಳಾರಿ. ಮಂಗಳವಾರ ಜಿಲ್ಲೆಯಲ್ಲಿ 736 ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 11,360ಕ್ಕೆ ಏರಿಕೆಯಾಗಿದೆ.

7 ಸಾವಿರ ಪ್ರಕರಣಗಳು

7 ಸಾವಿರ ಪ್ರಕರಣಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 243 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,591ಕ್ಕೆ ಏರಿಕೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 238 ಹೊಸ ಪ್ರಕರಣ ದಾಖಲಾಗಿದೆ, ಒಟ್ಟು ಸೋಂಕಿತರ ಸಂಖ್ಯೆ 7923.

6 ಸಾವಿರ ಪ್ರಕರಣಗಳು

6 ಸಾವಿರ ಪ್ರಕರಣಗಳು

ಬೆಳಗಾವಿಯಲ್ಲಿ ಮಂಗಳವಾರ 575 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6022. ಉಡುಪಿ ಜಿಲ್ಲೆಯಲ್ಲಿ ಇಂದು 2019 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6509ಕ್ಕೆ ಏರಿಕೆಯಾಗಿದೆ.

English summary
Karnataka reported 6257 new coronavirus cases on August 11, 2020. Total number of cases in state 1,88,611.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X