ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

61 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 2: ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 61ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಸಾಧಕರಿಗೂ ಪ್ರತ್ಯೇಕವಾಗಿ ಪ್ರಶಸ್ತಿ ಪ್ರದಾನ ಮಾಡಿ ಶಾಲು ಹೊದಿಸಿ ಸನ್ಮಾನ ಮಾಡಿದರು.[2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ]

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪೈಕಿ 106 ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಹಾದೇವ ಶಿವಬಸಪ್ಪ ಪಟ್ಣಣ ಅವರು ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು. ['ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' ರಥ ನಿಮ್ಮ ಜಿಲ್ಲೆಗೆ]

ಇನ್ನು ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ನಮ್ಮ ಜಾತಿ, ಮತ, ಧರ್ಮ, ಯಾವುಧೇ ಇದ್ದರೂ ರಾಜ್ಯದಲ್ಲಿರುವ ಆರೂವರೆ ಕೋಟಿಜ ಜನ ಮೊದಲು ನಾನು ಕನ್ನಡಿಗನಾಗಿರಬೇಕು ಎಂಬ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಪ್ರಶಸ್ತಿಯಲ್ಲಿ ಯಾವ ಲಾಬಿಯೂ ಇಲ್ಲ

ಪ್ರಶಸ್ತಿಯಲ್ಲಿ ಯಾವ ಲಾಬಿಯೂ ಇಲ್ಲ

ರಾಜ್ಯೋತ್ಸವ ಪ್ರಶಸ್ತಿ ಮೌಲ್ಯ ಹೆಚ್ಚಿಸುವ ಸಲುವಾಗಿ ನಾನೂ ಸೇರಿ ಯಾರೂ ಸಹ ಶಿಫಾರಸು ಮಾಡಿಲ್ಲ. ಯಾವ ಲಾಬಿಯೂ ನಡೆದಿಲ್ಲ ಎಕೀಕರಣವಾದ ವರ್ಷದಷ್ಟೇ ಪ್ರಶಸ್ತಿ ನೀಡಲು ಮಾನದಂಡ ಅಳವಡಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಆನ್ ಲೈನ್ ಲೈಬ್ರರಿಗೆ ಚಾಲನೆ

ಆನ್ ಲೈನ್ ಲೈಬ್ರರಿಗೆ ಚಾಲನೆ

ಕಾರ್ಯಕ್ರಮದಲ್ಲಿ ಕರ್ನಟಕದ ಪ್ರಥಮಗಳ ಪ್ರದರ್ಶನ, ಟೆಕ್ಟ್ಸ್ ಟು ಸ್ಪೀಚ್ ತಂತ್ರಾಂಶ ಹಾಗೂ ಕನ್ನಡ ಕೃತಿಗಳ ಡಿಜಿಟಲ್ ಲೈಬ್ರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಆನ್ ಲೈನ್ ವರ್ಚುವಲ್ ತರಗತಿಗಳ ಆರಂಭ

ಆನ್ ಲೈನ್ ವರ್ಚುವಲ್ ತರಗತಿಗಳ ಆರಂಭ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶ್ರೀಮತಿ ಉಮಾಶ್ರೀ ಮಾತನಾಡಿ "ಇಲಾಖೆಯಿಂದ ಆನ್ ಲೈನ್ ವರ್ಚುವಲ್ ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ರಾಜ್ಯದಿಂದ ಹೊರಗಿರುವವರೂ ಕನ್ನಡವನ್ನು ಕಲಿಯುವ ಅವಕಾಶ ಲಭಿಸಲಿದೆ" ಎಂದು ಹೇಳಿದರು.

ಮುಖ್ಯಮಂತ್ರಿ ಮತ್ತು ಸಚಿವರಿಗೆ ಧನ್ಯವಾದ

ಮುಖ್ಯಮಂತ್ರಿ ಮತ್ತು ಸಚಿವರಿಗೆ ಧನ್ಯವಾದ

"ಪ್ರಶಸ್ತಿ ನೀಡುವಲ್ಲಿ ಹಸ್ತಕ್ಷೇಪ ಮಾಡದೇ ಪೂರ್ಣ ಸ್ವಾತಂತ್ರ್ಯ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲ ಸಚಿವರಿಗೂ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ತಿಳಿಸಿದರು.

ಪ್ರಮುಖರ ಗೈರು

ಪ್ರಮುಖರ ಗೈರು

ಪ್ರಶಸ್ತಿಗೆ ಆಯ್ಕೆಯಾದರವ ಪೈಕಿ ಬೆಜವಾಡ ವಿಲ್ಸನ್, ರಂ.ಶಾ ಲೋಕಾಪುರ, ಕೆ.ಟಿ.ಗಟ್ಟಿ, ಕೆ.ಮುರಳೀಧರ ರಾವ್ ಮತ್ತು ಜೆ.ಆರ್.ಲಕ್ಷ್ಮಣರಾವ್ ಗೈರು ಹಾಜರಾಗಿದ್ದರು. ಗೈರುಹಾಜರಾದವರಿಗೆ ಮನೆಗೆ ಪ್ರಶಸ್ತಿ ತಲುಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು.

ಪ್ರಮುಖರ ಉಪಸ್ಥಿತಿ

ಪ್ರಮುಖರ ಉಪಸ್ಥಿತಿ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಜಿ.ಪದ್ಮಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಶಸ್ತಿಯು ಒಟ್ಟು 20 ಗ್ರಾಂ ಚಿನ್ನದ ಪದಕ ಹಾಗೂ ರೂ.1ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

English summary
Sixty-one achievers from various fields received the Karnataka Rajyotsava Award at the 61st Karnataka Rajyotsava programme held at Ravindra Kalakshetra here on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X