ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ ವರದಿ; ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದ 60 ಸಾವಿರ ಮಕ್ಕಳು

|
Google Oneindia Kannada News

ಬೆಂಗಳೂರು, ಜುಲೈ 20; ಕೋವಿಡ್ ಪರಿಸ್ಥಿತಿಯ ಕಾರಣಕ್ಕೆ ಶಾಲೆಗಳ ಬಾಗಿಲು ತೆರೆದಿಲ್ಲ. ಆನ್‌ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ಹಲವಾರು ಮಕ್ಕಳು ಇಂತಹ ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಂದ ದೂರವಾಗಿದ್ದಾರೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಲ್ಲಿ 60 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುತ್ತದೆ ವರದಿ.

ಸರ್ಕಾರಿ ಆಂಗ್ಲ ಶಾಲೆಗಳಿಗೆ ಭಾರೀ ಡಿಮ್ಯಾಂಡ್; ಸಾವಿರ ಹೊಸ ಶಾಲೆ ನಿರ್ಮಾಣ ಯೋಜನೆಸರ್ಕಾರಿ ಆಂಗ್ಲ ಶಾಲೆಗಳಿಗೆ ಭಾರೀ ಡಿಮ್ಯಾಂಡ್; ಸಾವಿರ ಹೊಸ ಶಾಲೆ ನಿರ್ಮಾಣ ಯೋಜನೆ

ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕೆಎಎಂಎಸ್) ಈ ಕುರಿತು ನಡೆಸಿದ ಸಮೀಕ್ಷೆಯ ವರದಿ ಪ್ರಕಟವಾಗಿದೆ. ಸುಮಾರು 250 ಅನುದಾನ ರಹಿತ ಖಾಸಗಿ ಶಾಲೆಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವು.

ಹರಿಯಾಣದಲ್ಲಿ ಶಾಲೆ ತೊರೆದ 12.5 ಲಕ್ಷ ಖಾಸಗಿ ಶಾಲಾ ವಿದ್ಯಾರ್ಥಿಗಳು!ಹರಿಯಾಣದಲ್ಲಿ ಶಾಲೆ ತೊರೆದ 12.5 ಲಕ್ಷ ಖಾಸಗಿ ಶಾಲಾ ವಿದ್ಯಾರ್ಥಿಗಳು!

ಕೋವಿಡ್ ಪರಿಸ್ಥಿತಿ ಬಳಿಕ ಈ ಮಕ್ಕಳು ಶೈಕ್ಷಣಿಕ ಚಟುವಟಿಕೆಯಿಂದ ದೂರವಾಗಿದ್ದಾರೆ. ಆದರೆ ಸರ್ಕಾರಿ ದಾಖಲೆಗಳಲ್ಲಿ ಮಕ್ಕಳ ಸಂಖ್ಯೆ ಇದೆ. ತರಗತಿ ಸೇರಿದಂತೆ ಯಾವುದೇ ಶೈಕ್ಷಣಿಕ ಚಟುವಟಿಕೆಯಲ್ಲಿ ಮಕ್ಕಳು ತೊಡಗಿರುವ ಕುರಿತು ಯಾವುದೇ ಸಾಕ್ಷ್ಯಗಳಿಲ್ಲ.

ಮಲೆನಾಡು ಭಾಗದಲ್ಲಿ ಆನ್‌ಲೈನ್ ಕ್ಲಾಸ್ ಬೇಡ, ಶಾಲೆ ತೆರೆಯುವಂತೆ ಒತ್ತಾಯಮಲೆನಾಡು ಭಾಗದಲ್ಲಿ ಆನ್‌ಲೈನ್ ಕ್ಲಾಸ್ ಬೇಡ, ಶಾಲೆ ತೆರೆಯುವಂತೆ ಒತ್ತಾಯ

ಶೈಕ್ಷಣಿಕ ಚಟುವಟಿಕೆಯಿಂದ ಮಕ್ಕಳು ದೂರ

ಶೈಕ್ಷಣಿಕ ಚಟುವಟಿಕೆಯಿಂದ ಮಕ್ಕಳು ದೂರ

ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕೆಎಎಂಎಸ್) ಕಾರ್ಯದರ್ಶಿ ಡಿ. ಶಶಿಕುಮಾರ್ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ್ದಾರೆ. "ಈ ಮಕ್ಕಳು ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಶಾಲೆಯಲ್ಲಿದ್ದಾರೆ. ಆದರೆ ಅವರು ಯಾವುದೇ ಚಟುವಟಿಕೆಯಲ್ಲಿ ತೊಡಗಿಲ್ಲ" ಎಂದು ಹೇಳಿದ್ದಾರೆ.

ಇನ್ನೂ ಹೆಚ್ಚಿನ ಮಕ್ಕಳು ಹೊರಗಿದ್ದಾರೆ

ಇನ್ನೂ ಹೆಚ್ಚಿನ ಮಕ್ಕಳು ಹೊರಗಿದ್ದಾರೆ

ಮಕ್ಕಳು ತಮ್ಮ ನೋಂದಣಿಯನ್ನು ನವೀಕರಣ ಮಾಡಿಲ್ಲ, ಶಾಲೆಗಳಿಂದ ಟಿಸಿಯನ್ನು ತೆಗೆದುಕೊಂಡು ಸಹ ಹೋಗಿಲ್ಲ. ಶಾಲೆ ನಡೆಸುವ ಯಾವುದೇ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಶುಲ್ಕ ಕಟ್ಟುವ ಹೊರೆಯೇ ಕಾರಣ

ಶುಲ್ಕ ಕಟ್ಟುವ ಹೊರೆಯೇ ಕಾರಣ

ಕೋವಿಡ್ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಶಾಲಾ ಶುಲ್ಕವನ್ನು ಕಟ್ಟಲು ಸಾಧ್ಯವಾಗದಿರುವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣ ಎಂದು ಅಂದಾಜಿಸಲಾಗಿದೆ. 2020-21ನೇ ಸಾಲಿನಲ್ಲಿ ಶೇ 45ರಷ್ಟು ಪೋಷಕರು ಮಾತ್ರ ಶೇ 100ರಷ್ಟು ಶುಲ್ಕವನ್ನು ಕಟ್ಟಿದ್ದಾರೆ. ಶೇ 17ರಷ್ಟು ಪೋಷಕರು ಶೇ 75ರಷ್ಟು ಶುಲ್ಕ ಪಾವತಿ ಮಾಡಿದ್ದಾರೆ.

ಮಕ್ಕಳ ನೋಂದಣಿಯನ್ನು ಕಡ್ಡಾಯಗೊಳಿಸಿ ಎಂದು ಕೆಎಎಂಎಸ್ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ. ಶಾಲೆಗೆ ದಾಖಲಾದರೆ ಆನ್‌ಲೈನ್/ ಆಫ್‌ಲೈನ್‌ನಲ್ಲಿ ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿರುವ ಮಾಹಿತಿ ಸಿಗುತ್ತದೆ. ಇದರಿಂದಾಗಿ ಮಕ್ಕಳು ಶಾಲೆಯಿಂದ ಹೊರಗುಳಿದರೆ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.

ಹೈಕೋರ್ಟ್‌ಗೆ ಸಹ ವರದಿ ಸಲ್ಲಿಕೆ

ಹೈಕೋರ್ಟ್‌ಗೆ ಸಹ ವರದಿ ಸಲ್ಲಿಕೆ

ಕೋವಿಡ್ ಪರಿಸ್ಥಿತಿಯಲ್ಲಿ ಶಾಲೆಯನ್ನು ಬಿಟ್ಟು ಮಕ್ಕಳು ಹೊಲಗಳಲ್ಲಿ ವಿವಿಧ ಉದ್ಯಮಗಳಲ್ಲಿ ಕೆಲಸ ಮಾಡುವ ವರದಿಗಳು ಆಗಾಗ ಮಾಧ್ಯಮಗಳಲ್ಲಿ ಬರುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ ಸಂಖ್ಯೆಯನ್ನು ಸರ್ಕಾರ ಸರಿಯಾಗಿ ಸಂಗ್ರಹ ಮಾಡಬೇಕು ಎಂದು ಕೆಎಎಂಎಸ್ ಆಗ್ರಹಿಸಿದೆ. ಸಮೀಕ್ಷೆ ನಡೆಸಿದ ವರದಿಯನ್ನು ಕರ್ನಾಟಕ ಹೈಕೋರ್ಟ್‌ಗೆ ಸಹ ಸಲ್ಲಿಕೆ ಮಾಡಲಾಗಿದೆ.

English summary
As many as 60 thousand students out of school in Karnataka said survey conducted by the Associated Management of Primary and Secondary Schools in Karnataka (KAMS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X