ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ

|
Google Oneindia Kannada News

ಬೆಂಗಳೂರು, ಜೂ.16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳಲ್ಲಿ ಆರು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದ ಶಿಫಾರಸ್ಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.

ಸೋಮವಾರ ಸಂಜೆ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ವಜುಭಾಯಿ ವಾಲಾ ಅವರೊಂದಿಗೆ ಸುಮಾರು 2 ತಾಸು ಮಾತುಕತೆ ನಡೆಸಿದರು. ಆರು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಆಗಿರುವ ವಿಳಂಬದ ಬಗ್ಗೆ ಚರ್ಚೆ ನಡೆಸಿದರು. [ಕೆಪಿಎಸ್ ಸಿ ಅಧ್ಯಕ್ಷರ ನೇಮಕ, ಸರ್ಕಾರಕ್ಕೆ ಮುಖಭಂಗ]

vajubhai vala

ರಾಜಭವನದ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ವಿವರಣೆಗಳನ್ನು ರಾಜ್ಯಪಾಲರು ಕೇಳಿದ್ದರು. ಅದನ್ನು ನೀಡಿದ್ದೇವೆ ಎಂದು ಹೇಳಿದರು.

ರಾಜ್ಯಪಾಲರ ಅಂಕಿತ : ಸಿದ್ದರಾಮಯ್ಯ ಅವರು ರಾಜಭವನದಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಆರು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ನೇಮಕವಾದ ಕುಲಪತಿಗಳು
* ಕರ್ನಾಟಕ ವಿವಿ, ಧಾರವಾಡ - ಪ್ರೊ. ಪ್ರಮೋದ್‌ ಬಿ. ಗಾಯಿ
* ರಾಣಿ ಚನ್ನಮ್ಮ ವಿವಿ, ಬೆಳಗಾವಿ - ಡಾ. ಎಸ್‌.ಬಿ. ಹೊಸಮನಿ
* ಗುಲ್ಬರ್ಗ ವಿವಿ, ಕಲಬುರಗಿ - ಡಾ. ಎಸ್‌.ಆರ್‌. ನಿರಂಜನ್
* ಕುವೆಂಪು ವಿವಿ, ಶಿವಮೊಗ್ಗ - ಪ್ರೊ. ಜೋಗನ್‌ ಶಂಕರ್‌
* ವಿಜಯನಗರ ಶ್ರೀಕೃಷ್ಣದೇವರಾಯ ವಿವಿ, ಬಳ್ಳಾರಿ - ಡಾ. ಎಂ.ಎಸ್‌. ಸುಭಾಸ್‌
* ಕರ್ನಾಟಕ ಸಂಸ್ಕೃತ ವಿವಿ, ಬೆಂಗಳೂರು - ಪ್ರೊ. ಪದ್ಮಾ ಶೇಖರ್‌

English summary
Karnataka : After meeting with Chief Minister Siddaramaiah vice-chancellors were appointed to 6 state universities on Monday by governor Vajubhai Vala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X