ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚೆತ್ತುಕೊಳ್ಳದಿದ್ದರೆ ಅಪಾಯ: ಕರ್ನಾಟಕದಲ್ಲೇ 26 ಮಂದಿಗೆ ಕೊರೊನಾ!

|
Google Oneindia Kannada News

ಬೆಂಗಳೂರು, ಮಾರ್ಚ್.22: ಕೊರೊನಾ ವೈರಸ್ ಕಾಟ ಕರ್ನಾಟಕಕ್ಕೂ ಅಂಟಿಕೊಂಡಿದೆ. ಮಾರಕ ಸೋಂಕಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಮತ್ತಷ್ಟು ಆತಂಕಕ್ಕೆ ಒಳಗಾಗುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತದಲ್ಲಿ ಭಾನುವಾರ ಒಂದೇ ದಿನ 28 ಮಂದಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 360ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ದೇಶದಲ್ಲಿ 7ಕ್ಕೆ ಏರಿಕೆಯಾಗಿದೆ.

ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?

ಕರ್ನಾಟಕದ ಮಟ್ಟಿಗೆ ದಿನದ ಬೆಳವಣಿಗೆಗಳನ್ನು ನೋಡುವುದಾದರೆ ಭಾನುವಾರ ಆರು ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ. ಜನತಾ ಕರ್ಫ್ಯೂ ಅಂತ್ಯವಾದ ಬೆನ್ನಲ್ಲೇ ರಾಜ್ಯದ 9 ಜಿಲ್ಲೆಗಳನ್ನು ಮಾರ್ಚ್.31ರವರೆಗೂ ಸ್ತಬ್ಧಗೊಳಿಸುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಕರ್ನಾಟಕದ 9 ಜಿಲ್ಲೆಗಳು ಮಾರ್ಚ್.31ರವರೆಗೂ ಸ್ತಬ್ಧ

ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ದಕ್ಷಿಣ ಕನ್ನಡ, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ತುರ್ತುಸಭೆ ಬಳಿಕ ಘೋಷಣೆ ಮಾಡಲಾಯಿತು.

ದುಬೈನಿಂದ ಧಾರಾವಾಡಕ್ಕೆ ಕೊರೊನಾ ಸೋಂಕಿತ

ದುಬೈನಿಂದ ಧಾರಾವಾಡಕ್ಕೆ ಕೊರೊನಾ ಸೋಂಕಿತ

ರಾಜ್ಯದಲ್ಲಿ ಶನಿವಾರದವರೆಗೂ 20 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಭಾನುವಾರ ದುಬೈನಿಂದ ಧಾರವಾಡಕ್ಕೆ ಆಗಮಿಸಿದ್ದ 35 ವರ್ಷದ ವ್ಯಕ್ತಿಗೆ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ. ಸೋಂಕಿತನು ಕಳೆದ ಮಾರ್ಚ್.11ರಂದೇ ದುಬೈನಿಂದ ಪಣಜಿ ಮಾರ್ಗವಾಗಿ ಧಾರವಾಡಕ್ಕೆ ಆಗಮಿಸಿದ್ದನು. ಈತನ ಜೊತೆಗೆ ನಾಲ್ವರು ವ್ಯಕ್ತಿಗಳು ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.

ಭಾರತದ ಯಾವ ರಾಜ್ಯದಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿತರು?ಭಾರತದ ಯಾವ ರಾಜ್ಯದಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿತರು?

ಮೆಕ್ಕಾದಿಂದ ಕರ್ನಾಟಕಕ್ಕೆ ಆಗಮಿಸಿದ ಮಹಿಳೆಗೆ ಸೋಂಕು

ಮೆಕ್ಕಾದಿಂದ ಕರ್ನಾಟಕಕ್ಕೆ ಆಗಮಿಸಿದ ಮಹಿಳೆಗೆ ಸೋಂಕು

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ 22 ವರ್ಷದ ಮಹಿಳೆಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. ಕಳೆದ ಮಾರ್ಚ್.14ರಂದು ಸೌದಿ ಅರೇಬಿಯಾದ ಮೆಕ್ಕಾದಿಂದ ಹೈದ್ರಾಬಾದ್ ಗೆ ಆಗಮಿಸಿದ ಮಹಿಳೆಯು ರೈಲಿನಲ್ಲಿ ಹಿಂದೂಪುರಕ್ಕೆ ಆಗಮಿಸಿರುತ್ತಾರೆ. ಅಲ್ಲಿಂದ ಗೌರಿಬಿದನೂರಿಗೆ ಮಹಿಳೆಯು ಬಸ್ ನಲ್ಲಿ ಆಗಮಿಸಿದ್ದಾರೆ. ಇವರು ಕೂಡಾ ನಾಲ್ವರ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಬೆಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಕೊರೊನಾ ವೈರಸ್

ಬೆಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಕೊರೊನಾ ವೈರಸ್

ಬೆಂಗಳೂರಿನಿಂದ ಸ್ವಿಡ್ಜರ್ ಲ್ಯಾಂಡ್ ಮತ್ತು ಫ್ರಾನ್ಸ್ ಗೆ ಪ್ರಯಾಣ ಮಾಡಿದ್ದ 36 ವರ್ಷದ ಮಹಿಳೆಯು ಕಳೆದ ಮಾರ್ಚ್.9ರಂದು ಬೆಂಗಳೂರಿಗೆ ಮತ್ತೆ ವಾಪಸ್ ಆಗಿದ್ದರು. ಈ ವೇಳೆ ಮಹಿಳೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ನಿಗದಿತ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲ

ಪೇಶೆಂಟ್ ನಂಬರ್.24: ಇನ್ನು, ಕಳೆದ ಮಾರ್ಚ್.08ರಂದು ಬೆಂಗಳೂರಿನ 27 ವರ್ಷದ ಪುರುಷರೊಬ್ಬರು ಜರ್ಮನಿಗೆ ಪ್ರಯಾಣ ಮಾಡಿದ್ದು, ಮಾರ್ಚ್.14ರಂದು ವಾಪಸ್ ಆಗಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿ 14 ಹಾಗೂ ದ್ವಿತೀಯ ಹಂತದ ಸಂಪರ್ಕರದಲ್ಲಿ 237 ಜನರು ಇರುವುದು ಪತ್ತೆಯಾಗಿದೆ.

22 ವರ್ಷದ ಯುವಕನನ್ನೂ ಬಿಡದ ಕೊರೊನಾ ವೈರಸ್

22 ವರ್ಷದ ಯುವಕನನ್ನೂ ಬಿಡದ ಕೊರೊನಾ ವೈರಸ್

ಬೆಂಗಳೂರಿನ 51 ವರ್ಷದ ಪುರುಷರೊಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇವರು ಕಳೆದ ಮಾರ್ಚ್.13ರಂದು ಲಂಡನ್ ನಿಂದ ಆಗಮಿಸಿದ್ದರು ಎನ್ನಲಾಗಿದೆ. ಈ ವ್ಯಕ್ತಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೇಶೆಂಟ್ ನಂಬರ್.26: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ 22 ವರ್ಷದ ಯುವಕನಿಗೂ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಈತನು ಕಳೆದ ಮಾರ್ಚ್.19ರಂದು ದುಬೈನಿಂದ ಸ್ಪೈಸ್ ಜೆಟ್ ಎಸ್.ಜಿ.60 ವಿಮಾನದಲ್ಲಿ ಸೀಟ್ ನಂಬರ್.21ಸಿ ನಲ್ಲಿ ಕುಳಿತು ಸಂಜೆ 5.30ರ ಸಂದರ್ಭದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?

ಜಿಲ್ಲೆ ಮತ್ತು ಕೊರೊನಾ ಸೋಂಕಿತರ ಸಂಖ್ಯೆ:

ಬೆಂಗಳೂರು - 17

ಕಲಬುರಗಿ - 3

ಕೊಡಗು - 1

ಚಿಕ್ಕಬಳ್ಳಾಪುರ - 1

ಮೈಸೂರು - 1

ಧಾರವಾಡ - 1

ಉತ್ತರ ಕನ್ನಡ - 1

English summary
6 Coronavirus Infected Cases Register In Karnataka. Total Infected Cases Rised To 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X