ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಚಿಕಿತ್ಸೆಗೆ ಖಾಸಗಿ ಮೆಡಿಕಲ್ ಕಾಲೇಜುಗಳ ಬಳಕೆ

|
Google Oneindia Kannada News

ಬೆಂಗಳೂರು, ಮೇ 6: ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 6,034 ಹಾಸಿಗೆಗಳನ್ನು ಕೋವಿಡ್‌ಗೆ ಮೀಸಲಿಡಲಾಗಿದೆ. ಇನ್ನೂ 1,135 ಹಾಸಿಗೆಗಳು ಶೀಘ್ರದಲ್ಲೇ ದೊರೆಯಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೊರೊನಾ ನಿಯಂತ್ರಣ ಸಂಬಂಧ ಬೆಂಗಳೂರು ನಗರದ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಗೃಹಸಚಿವ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

ಕೊವಿಡ್ 19: ಮೇ 06ರಂದು ವಿಶ್ವದಲ್ಲಿ ಎಷ್ಟು ಮಂದಿಗೆ ಸೋಂಕು? ಕೊವಿಡ್ 19: ಮೇ 06ರಂದು ವಿಶ್ವದಲ್ಲಿ ಎಷ್ಟು ಮಂದಿಗೆ ಸೋಂಕು?

ನಂತರ ಮಾತನಾಡಿದ ಸಚಿವರು, ತಾಯಿ ಮತ್ತು ಮಗುವಿನ ಆಸ್ಪತ್ರೆ, ನಾನ್ ಕೋವಿಡ್ ತುರ್ತು ಆಸ್ಪತ್ರೆ ಹೊರತುಪಡಿಸಿ ಉಳಿದೆಡೆ ಶೇ.75 ರಷ್ಟು ಹಾಸಿಗೆಗಳನ್ನು ಕೋವಿಡ್ ಗೆ ಪಡೆಯಲಾಗಿದೆ. ಶೇ.50 ರಷ್ಟು ಹಾಸಿಗೆಗಳನ್ನು ಹಿಂದೆಯೇ ಪಡೆಯಲಾಗಿದೆ. ಎಲ್ಲ ಸೇರಿ ಒಟ್ಟು 6,034 ಹಾಸಿಗೆಗಳು ಸರ್ಕಾರಕ್ಕೆ ಸಿಕ್ಕಿದೆ. ಇನ್ನು 1,135 ಹಾಸಿಗೆಗಳು ದೊರೆಯಲಿವೆ ಎಂದರು.

6,034 beds reserved in private medical colleges for Covid-19 treatment: Sudhakar

ರಾಜ್ಯ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ಲಸಿಕೆ ಪಡೆಯುತ್ತಿದೆ. ಈಗ ಸುಮಾರು 5 ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. 1 ಕೋಟಿ ಡೋಸ್ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ. 18-44 ವರ್ಷದವರಿಗೆ ನೀಡಲು ಎರಡು ಕೋಟಿಯಷ್ಟು ಲಸಿಕೆ ಆರ್ಡರ್ ಮಾಡಲಾಗಿದೆ. ಮೇ 15 ರ ವೇಳೆಗೆ ಕಂಪನಿಗಳಿಂದ ನೇರವಾಗಿ ಲಸಿಕೆ ರವಾನೆಯಾಗಲಿದೆ. ಲಸಿಕೆ ನೀಡಲು ಸರ್ಕಾರ ಬದ್ಧ ಎಂದರು.

ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ಸಿಸಬಿ ಪೊಲೀಸರಿಂದ ಎಂಟು ವಾರ್ ರೂಮ್ ಡೇಟಾ ಅನ್ವೇಷಣೆ ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ಸಿಸಬಿ ಪೊಲೀಸರಿಂದ ಎಂಟು ವಾರ್ ರೂಮ್ ಡೇಟಾ ಅನ್ವೇಷಣೆ

ಅಂತಿಮ ವರ್ಷದ ಎಂಬಿಬಿಎಸ್, ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿಶೇಷ ಭತ್ಯೆ ನೀಡುವುದು, ಇಂಟರ್ನಲ್ ನಲ್ಲಿ ಅಂಕ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳನ್ನು ಕೊರೊನಾ ಸೇನಾನಿಗಳೆಂದು ಪರಿಗಣಿಸಿ ಆದ್ಯತೆ ಮೇಲೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಇಡೀ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ರಿಸ್ಕ್ ಭತ್ಯೆ ನೀಡಲು ನಿರ್ಧರಿಸಲಾಗಿದೆ. ಆಸ್ಪತ್ರೆಗಳಲ್ಲಿ ಮರಣ ಪ್ರಮಾಣ ಕಡಿಮೆ ಮಾಡಲು ಉತ್ತಮ ಚಿಕಿತ್ಸೆ ನೀಡಬೇಕು, ಡೆತ್ ಆಡಿಟ್ ಮಾಡಬೇಕು, ಟೆಲಿ ಐಸಿಯು ಸೇವೆಯೂ ನೀಡಬೇಕು ಎಂದು ಸೂಚಿಸಲಾಗಿದೆ.

Recommended Video

Tejasvi Surya ಯಾರ ಬಳಿಯೂ ಕ್ಷಮೆಯಾಚಿಸಿಲ್ಲ | Oneindia Kannada

English summary
6,034 beds reserved in private medical colleges for Covid-19 treatment; 1,135 more beds to be available soon:Health and Medical Education Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X