• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರಿಗಿಂತ ಗುಣಮುಖರು ಡಬಲ್!

|
Google Oneindia Kannada News

ಬೆಂಗಳೂರು, ಮೇ 17: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ 5,000 ಆಸುಪಾಸಿಗೆ ಬಂದು ನಿಂತಿದೆ. ಕಳೆದ 24 ಗಂಟೆಗಳಲ್ಲಿ 5983 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಹೊಸ ಪ್ರಕರಣಕ್ಕಿಂತ ಎರಡರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ದಿನದಲ್ಲಿ 10685 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 138 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಕುತೂಹಲಕಾರಿ ಕಥೆ: ಕರ್ನಾಟಕದಲ್ಲಿ ಕೊರೊನಾ ಕಡಿಮೆ, ಸಾವು ಜಾಸ್ತಿ! ಕುತೂಹಲಕಾರಿ ಕಥೆ: ಕರ್ನಾಟಕದಲ್ಲಿ ಕೊರೊನಾ ಕಡಿಮೆ, ಸಾವು ಜಾಸ್ತಿ!

ಗುರುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2790338ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ 33434 ಜನರು ಪ್ರಾಣ ಬಿಟ್ಟಿದ್ದು, ಈವರೆಗೂ 2610157 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 146726 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.


ಬೆಂಗಳೂರಿನಲ್ಲಿ 1,600ರ ಗಡಿ ದಾಟಿದ ಕೊರೊನಾ ಸಂಖ್ಯೆ

ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ 1200ರ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1209 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1201963ಕ್ಕೆ ಏರಿಕೆಯಾಗಿದೆ. 17 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15371ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಒಟ್ಟು 5983 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ - 22, ಬಳ್ಳಾರಿ 128, ಬೆಳಗಾವಿ 172, ಬೆಂಗಳೂರು ಗ್ರಾಮಾಂತರ 226, ಬೆಂಗಳೂರು 1209, ಬೀದರ್ 8, ಚಾಮರಾಜನಗರ 98, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು 198, ಚಿತ್ರದುರ್ಗ 110, ದಕ್ಷಿಣ ಕನ್ನಡ 679, ದಾವಣಗೆರೆ 153, ಧಾರವಾಡ 86, ಗದಗ 34, ಹಾಸನ 424, ಹಾವೇರಿ 42, ಕಲಬುರಗಿ 25, ಕೊಡಗು 152, ಕೋಲಾರ 145, ಕೊಪ್ಪಳ 48, ಮಂಡ್ಯ 309, ಮೈಸೂರು 596, ರಾಯಚೂರು 16, ರಾಮನಗರ 37, ಶಿವಮೊಗ್ಗ 299, ತುಮಕೂರು 289, ಉಡುಪಿ 166, ಉತ್ತರ ಕನ್ನಡ 169, ವಿಜಯಪುರ 83, ಯಾದಗಿರಿ 11 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

   ವಾಸ್ತವವಾಗಿ ಯಾವ್ದು ಸರಿ? ಯಾವ್ದು ತಪ್ಪು? ವಿವೇಚನೆಯಿಂದ ಯೋಚಿಸಿ | Oneindia Kannada
   English summary
   5983 New Coronavirus Cases Reported in Karnataka Today, State Tally Rise to 2790338.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X