ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಬ್ಬಾ.. ಕರ್ನಾಟಕಕ್ಕೆ ಬರಲು 'ಇಷ್ಟೊಂದು' ಜನ ನೋಂದಣಿ ಮಾಡಿಸಿದ್ದಾರಾ?

|
Google Oneindia Kannada News

ಕರ್ನಾಟಕ, ಮೇ 9: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಏಕಾಏಕಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ ಪರಿಣಾಮ ಸಾವಿರಾರು ಕನ್ನಡಿಗರು ಹೊರ ರಾಜ್ಯಗಳಲ್ಲಿ ಸಿಲುಕುವಂತಾಯಿತು.

ಕೆಲಸವೂ ಸೇರಿದಂತೆ ಇನ್ನಿತರ ಕಾರಣಗಳಿಗೆ ಹೊರ ರಾಜ್ಯಗಳಿಗೆ ತೆರಳಿದ್ದ ಕನ್ನಡಿಗರು ಲಾಕ್ ಡೌನ್ ನಿಂದಾಗಿ ಸಂಕಷ್ಟದಿಂದ ಒದ್ದಾಡುತ್ತಿದ್ದಾರೆ. ಇದೀಗ ಲಾಕ್ ಡೌನ್ ನಿಯಮಗಳು ಕೊಂಚ ಸಡಿಲಗೊಂಡಿದ್ದು, ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಪ್ರಕ್ರಿಯೆ ಆರಂಭಗೊಂಡಿದೆ.

ಕರ್ನಾಟಕದಿಂದ ತವರಿಗೆ ಮರಳಲು 2.04 ಲಕ್ಷ ಜನರ ನೋಂದಣಿ! ಕರ್ನಾಟಕದಿಂದ ತವರಿಗೆ ಮರಳಲು 2.04 ಲಕ್ಷ ಜನರ ನೋಂದಣಿ!

ಹೀಗಾಗಿ, ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರು ಕೂಡ ಕರ್ನಾಟಕಕ್ಕೆ ಬರಲು ಆಯಾ ಜಿಲ್ಲೆಗಳ ಡಿ.ಸಿ ಮತ್ತು ರಾಜ್ಯದ ನೊಡಲ್ ಅಧಿಕಾರಿಗಳ ಬಳಿ ನೋಂದಾಯಿಸಿಕೊಂಡಿದ್ದಾರೆ. ಹಾಗೆ, ನೋಂದಣಿ ಮಾಡಿಸಿರುವವರು ಎಷ್ಟು ಮಂದಿ ಗೊತ್ತೇ.?

ಕರ್ನಾಟಕಕ್ಕೆ ಬರಲು ಎಷ್ಟು ಮಂದಿ ನೋಂದಾಯಿಸಿಕೊಂಡಿದ್ದಾರೆ ಗೊತ್ತೇ?

ಕರ್ನಾಟಕಕ್ಕೆ ಬರಲು ಎಷ್ಟು ಮಂದಿ ನೋಂದಾಯಿಸಿಕೊಂಡಿದ್ದಾರೆ ಗೊತ್ತೇ?

ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳಿದವರು, ಪ್ರವಾಸಿಗರು ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ವಿವಿಧ ರಾಜ್ಯಗಳಿಗೆ ತೆರಳಿದ್ದ ಕನ್ನಡಿಗರು ಇದೀಗ ಕರ್ನಾಟಕಕ್ಕೆ ವಾಪಸ್ ಆಗಲು ನೋಂದಣಿ ಮಾಡಿಸಿದ್ದಾರೆ. ಅಂದ್ಹಾಗೆ, ರಾಜ್ಯಕ್ಕೆ ಬರಲು ಎಷ್ಟು ಜನ ನೋಂದಾಯಿಸಿದ್ದಾರೆ ಗೊತ್ತಾ.? ಬರೋಬ್ಬರಿ 56,622 ಜನ!

ಎಷ್ಟು ಜನರಿಗೆ ಅನುಮತಿ ಸಿಕ್ಕಿದೆ ಗೊತ್ತೇ.?

ಎಷ್ಟು ಜನರಿಗೆ ಅನುಮತಿ ಸಿಕ್ಕಿದೆ ಗೊತ್ತೇ.?

ನೋಂದಣಿ ಮಾಡಿಸಿಕೊಂಡ 56,622 ಜನರ ಪೈಕಿ 4,068 ಜನರಿಗೆ ಮಾತ್ರ ರಾಜ್ಯಕ್ಕೆ ಬರಲು ಅನುಮತಿ ನೀಡಲಾಗಿದೆ. ಡಿ.ಸಿ/ನೊಡಲ್ ಅಧಿಕಾರಿಗಳ ಅನುಮತಿಗಾಗಿ ಇನ್ನೂ 52,075 ಅರ್ಜಿಗಳು ಕಾಯುತ್ತಿವೆ.

ಕನ್ನಡಿಗರಿಗಾಗಿ ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲುಕನ್ನಡಿಗರಿಗಾಗಿ ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು

ಅನುಮತಿಗಾಗಿ ಜನ ಕಾಯುತ್ತಿದ್ದಾರೆ

ಅನುಮತಿಗಾಗಿ ಜನ ಕಾಯುತ್ತಿದ್ದಾರೆ

ಡಿ.ಸಿಗಳ ಬಳಿ 45,326 ಅರ್ಜಿಗಳು ಅನುಮತಿಗಾಗಿ ಬಾಕಿ ಇವೆ. ನೊಡಲ್ ಅಧಿಕಾರಿಗಳ ಬಳಿ 6,749 ಅರ್ಜಿಗಳು ಪರ್ಮಿಷನ್ ಗೆ ಕಾಯುತ್ತಿವೆ. ಇವುಗಳ ಪೈಕಿ ಅದೆಷ್ಟು ಅರ್ಜಿಗಳು ಸ್ವೀಕೃತವಾಗುತ್ತವೋ.? ಎಂಬುದೇ ಸದ್ಯದ ಪ್ರಶ್ನೆ.

ಬೆಂಗಳೂರಿಗೆ ಬರುವವರ ಸಂಖ್ಯೆಯೇ ಅಧಿಕ

ಬೆಂಗಳೂರಿಗೆ ಬರುವವರ ಸಂಖ್ಯೆಯೇ ಅಧಿಕ

ನೋಂದಣಿ ಮಾಡಿಸಿಕೊಂಡಿರುವ ಒಟ್ಟು 56,622 ಜನರಲ್ಲಿ ಬೆಂಗಳೂರಿಗೆ ಬರುವವರ ಸಂಖ್ಯೆಯೇ ಅಧಿಕವಾಗಿದೆ ಎಂಬುದು ಗಮನಿಸಬೇಕಾದ ವಿಚಾರ. ಅಂದ್ಹಾಗೆ, ಬೆಂಗಳೂರಿಗೆ ಬರಲು ಅರ್ಜಿ ಹಾಕಿರುವವರ ಸಂಖ್ಯೆ ಎಷ್ಟು ಗೊತ್ತೇ.? ಬರೋಬ್ಬರಿ 25,737 ಜನ.!

English summary
Coronavirus Lockdown: 56,622 People have registered to return to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X