ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಕ್ಷಗಾನ ಪ್ರಿಯರೆ, ವೆಬ್‌ಸೈಟ್‌ಲ್ಲಿ ಸಿಗಲಿವೆ 5 ಸಾವಿರ ಯಕ್ಷಗಾನ ಪ್ರಸಂಗ

By Nayana
|
Google Oneindia Kannada News

ಬೆಂಗಳೂರು, ಜು.23: ಯಕ್ಷಗಾನವೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಅಭಿವ್ಯಕ್ತಪಡಿಸುವ ಸಾಮುದಾಯಿಕ ಕಲೆ ಎನಿಸಿಕೊಂಡಿದೆ.

ಇದರಲ್ಲಿ ಹಾಸ್ಯ, ಅಳು, ರೌದ್ರ ಹೀಗೆ ಎಲ್ಲಾ ಬಗೆಯ ಮನುಷ್ಯನ ಮಾನಸಿಕ ಸ್ಥಿತಿಯನ್ನು ಅಭಿವ್ಯಕ್ತಪಡಿಸಬಹುದು. ಯಕ್ಷಗಾನ ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಹೆಚ್ಚು ಪ್ರಸಿದ್ಧಿ, ಕೆಲವು ವರ್ಷಗಳಿಂದೀಚೆಗೆ ನಗರ ಪ್ರದೇಶಗಳಲ್ಲೂ ಸಾಕಷ್ಟು ಯಕ್ಷಗಾನಗಳು ನಡೆಯುತ್ತಿದ್ದು ಎಲ್ಲರಿಗೂ ಚಿರಪರಿಚಿತವಾಗಿದೆ.

'ಯಕ್ಷಗಾನ ಬೆಳವಣಿಗೆಗೆ ಕಲಾಭಿಮಾನಿಗಳ ಸಹಕಾರ ಅಗತ್ಯ''ಯಕ್ಷಗಾನ ಬೆಳವಣಿಗೆಗೆ ಕಲಾಭಿಮಾನಿಗಳ ಸಹಕಾರ ಅಗತ್ಯ'

ಯಕ್ಷಗಾನ ಇನ್ನಷ್ಟು ಜನರನ್ನು ತಲುಪುವಂತೆ ಮಾಡಲು ಯಕ್ಷಗಾನ ಅಕಾಡೆಮಿಯು ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದೆ.ಯಕ್ಷವಾಹಿನಿ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಳ್ಳಲು ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದೆ. ಇದರಿಂದ ಅಕಾಡೆಮಿ ವೆಬ್‌ಸೈಟ್‌ನಲ್ಲಿ ಯಕ್ಷಗಾನ ಪ್ರಸಂಗಗಳು ಸುಲಭವಾಗಿ ಎಲ್ಲರನ್ನೂ ತಲುಪಲಿದೆ.

5000 yakshagana shows on website Soon

ಯಕ್ಷಗಾನ ಅಕಾಡೆಮಿಯು ಪ್ರಸಂಗಗಳ ಅಂತರ್ಜಾಲ ಪ್ರಕಾಶನದ ಕುರಿತಾದ ಅನುದಾನವನ್ನು ಗುತ್ತಿಗೆ ಕೆಲಸದ ಒಡಂಬಡಿಕೆ ಆಧಾರದಲ್ಲಿ ಯಕ್ಷವಾಹಿನಿಗೆ ನೀಡುತ್ತದೆ. ಬಹುಮಟ್ಟಿಗೆ ಪ್ರಸಂಗಗಳು 400-600 ಪದ್ಯಗಳಿಗೆ ವಿಸ್ತೃತವಾಗಿರುವುದರಿಂದ ಒಂದು ಪ್ರಸಂಗಕ್ಕೆ ನಿಗದಿತವಾಗಿ ಇಂತಿಷ್ಟು ಹಣವೆಂದು ನೀಡಲಾಗುತ್ತದೆ.

ಒಂದು ಪ್ರಸಂಗಕ್ಕೆ ಸರಾಸರಿ 15 ಸಾವಿರ ರೂ.ಗಿಂತ ಹೆಚ್ಚು ಹಣ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಒಪ್ಪಂದ ಮುಂದಿನ ದಿನಗಳಲ್ಲಿ ಯಕ್ಷಗಾನ ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ಸಂಶೋಧನೆ, ಪ್ರಕಾಶನ, ಕಮ್ಮಟ ಕೈಗೊಳ್ಳಲು ಒಂದು ಹೆಜ್ಜೆಯಾಗಿದೆ. ಯಕ್ಷಗಾನದ ಬಹುತೇಕ ಪ್ರಸಂಗಗಳು ಮಹಾಕಾವ್ಯ ಮತ್ತು ಪುರಾಣಗಳನ್ನು ಆಧರಿಸಿದೆ.

English summary
Karnataka yakshagana academy is planning to start new website to upload more than 5000 yakshagana shows. It will have all types of yakshagana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X