ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಶಾ ಕಾರ್ಯಕರ್ತೆಯರಿಗೆ ದಸರಾ ಉಡುಗೊರೆ ನೀಡಿದ ಯಡಿಯೂರಪ್ಪ ಸರ್ಕಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಯಡಿಯೂರಪ್ಪ ಸರ್ಕಾರವು ದಸರಾ ಉಡುಗೊರೆ ನೀಡಿದೆ.

ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದ್ದ ಗೌರವ ಧನ ಹೆಚ್ಚಳ ಮಾಡುವ ನಿರ್ಣಯವನ್ನು ಸರ್ಕಾರವು ಇಂದು ಸಂಪುಟ ಸಭೆಯಲ್ಲಿ ತೆಗೆದುಕೊಂಡಿದೆ.

ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಾವಿರ ಕೋಟಿ ಬಿಡುಗಡೆಪ್ರವಾಹ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಾವಿರ ಕೋಟಿ ಬಿಡುಗಡೆ

ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಈ ವರೆಗೆ 6000 ಗೌರವ ಧನ ಪ್ರತಿ ತಿಂಗಳು ಸಿಗುತ್ತಿದ್ದು, ಇದು ಇನ್ನು ಮುಂದೆ 6500 ಆಗಲಿದೆ. ರಾಜ್ಯ ಸರ್ಕಾರವು 500 ರೂಪಾಯಿ ಹೆಚ್ಚಿನ ಮೊತ್ತವನ್ನು ನೀಡುವ ನಿರ್ಣಯ ಕೈಗೊಂಡಿದೆ.

500 rs Hike In Honor Money For Asha Workers

ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರ ಗೌರವ ಧನವನ್ನು 500 ರೂಪಾಯಿ ಹೆಚ್ಚಳ ಮಾಡುವ ನಿರ್ಣಯ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ನೆರೆ ಪರಿಹಾರಕ್ಕೆ ಪೂರಕ ಬಜೆಟ್: ಸಂಪುಟ ನಿರ್ಧಾರನೆರೆ ಪರಿಹಾರಕ್ಕೆ ಪೂರಕ ಬಜೆಟ್: ಸಂಪುಟ ನಿರ್ಧಾರ

ಾಜ್ಯ ಸರ್ಕಾರ ಇದುವರೆಗೆ ಆಶಾ ಕಾರ್ಯಕರ್ತೆಯರಿಗೆ ಮೂರೂವರೆ ಸಾವಿರ ರೂ ನೀಡುತ್ತಿತ್ತು.ಕೇಂದ್ರ ಸರ್ಕಾರ ಎರಡೂವರೆ ಸಾವಿರ ರೂ ನೀಡುತ್ತಿತ್ತು.ಆದರೆ ಇನ್ನು ಮುಂದೆ ರಾಜ್ಯ ಸರ್ಕಾರ ನಾಲ್ಕು ಸಾವಿರ ನೀಡಲಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಇಪ್ಪತ್ತೈದು ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಮಾಹಿತಿ ನೀಡಿದರು.

ಇದರ ಜೊತೆಗೆ ನವಜಾತ ಶಿಶುಗಳ ಆರೈಕೆ ಘಟಕಗಳಿಗೆ ರಕ್ತಹೀನತೆಯನ್ನು ನಿವಾರಿಸುವ ಮಾತ್ರೆ, ಔಷಧಿಗಳು ಸೇರಿದಂತೆ ಹಲ ಆರೋಗ್ಯ ಉಪಕರಣಗಳನ್ನು ಖರೀದಿಸಲು 16 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ನೀಡಲಾಗಿದೆ ಎಂದು ಹೇಳಿದರು.

English summary
State Government hike 500 rs honor money for Asha workers. Asha workers will get 6500 rs per month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X