ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವೀಯತೆ ನೆಲೆಯಲ್ಲಿ ತೆಲಂಗಾಣಕ್ಕೆ 5 ಟಿಎಂಸಿ ನೀರು: ಸಿದ್ದರಾಮಯ್ಯ

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ‌ಕುಮಾರ್ ರೆಡ್ಡಿ ನೇತೃತ್ವದ ನಿಯೋಗ ಭೇಟಿ ಮಾಡಿ ನೀರಾವರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿತು.

ನಿಯೋಗ ಆಲಮಟ್ಟಿಯ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಡುಗಡೆಗೆ ಮನವಿ ಮಾಡಿತು.

 5 TMC of water to Telangana on the grounds of humanity: Siddaramaiah

ಈ ಸಂದರ್ಭ ಹಾಜರಿದ್ದ ಸಚಿವ ಎಂ ಬಿ ಪಾಟೀಲ್, "ಕುಡಿಯುವ ಉದ್ದೇಶಕ್ಕೆ ನಿನ್ನೆಯಿಂದ ನೀರು ಬಿಡುಗಡೆ ಮಾಡಲಾಗಿದೆ," ಎಂದು ತಿಳಿಸಿದರು.

ನಿಯೋಗದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ನಮ್ಮಲ್ಲಿಯೂ 7ವರ್ಷಗಳಿಂದ ಬರಗಾಲವಿದೆ. 1.8ಟಿಎಂಸಿ ನೀರು ತೆಲಂಗಾಣಕ್ಕೆ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿಗಾಗಿ ಮಾನವೀಯ ದೃಷ್ಠಿಯಿಂದ ನಿಮ್ಮ‌ ಮನವಿಗೆ ಒಗೊಟ್ಟಿದ್ದೇವೆ. 15ಟಿಎಂಸಿ ಬೇಕು ಎನ್ನುತ್ತೀರಿ, ಇನ್ನೂ 5ಟಿಎಂಸಿ ಬಿಡುಗಡೆ ಮಾಡಬಹುದು. ಮುಂದೆ ಮಳೆಯಾದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವ ಬಗ್ಗೆ ಆಲೋಚಿಸೋಣ," ಎಂದು ಹೇಳಿದರು.

 5 TMC of water to Telangana on the grounds of humanity: Siddaramaiah

ಈ‌ ಸಂದರ್ಭದಲ್ಲಿ ರಾಜೋಳಿ ಬಂಡಾ ತಿರುವು ಯೋಜನೆ ಕಾಮಗಾರಿ ಕುರಿತೂ ನಿಯೋಗ ಚರ್ಚೆ ನಡೆಸಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ರಾಜೋಳಿ ಬಂಡಾ ಕಾಮಗಾರಿ ಕುರಿತು ಉಭಯ ರಾಜ್ಯಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು," ಎಂದು ನಿಯೋಗಕ್ಕೆ ಭರವಸೆ ನೀಡಿದರು.

 5 TMC of water to Telangana on the grounds of humanity: Siddaramaiah

ಸಭೆಯಲ್ಲಿ ಸತೀಶ್ ಜಾರಕಿಹೊಳಿ, ರಮಾನಾಥ ರೈ ಸೇರಿದಂತೆ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.

English summary
Chief Minister Siddaramaiah today met the delegation headed by Uttamakumar Reddy, chairman of Telangana Pradesh Congress Committee and discussed irrigation issues. The delegation appealed to release the water for Telangana from the Alamatti Narayanpur reservoir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X