ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದಲ್ಲಿ 5% ಮೀಸಲಾತಿ

By Sachhidananda Acharya
|
Google Oneindia Kannada News

ಬೆಂಗಳೂರು, ಜುಲೈ 7: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದವರಿಗೆ ಕರ್ನಾಟಕ ಆಡಳಿತ ಸೇವೆಯಲ್ಲಿ ಶೇಕಡಾ 5 ಮೀಸಲಾತಿ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ.

ದೇಶದಾದ್ಯಂತ ಯಾರೇ ಆಗಲಿ ಪೂರ್ತಿಯಾಗಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪೂರೈಸಿದ್ದರೆ ಅವರಿಗೆ ಈ ಮೀಸಲಾತಿ ಸೌಲಭ್ಯ ಸಿಗಲಿದೆ. ಇದಕ್ಕಾಗಿ ಕರ್ನಾಟಕ ನಾಗರೀಕ ಸೇವೆಗಳ (ಸಾಮಾನ್ಯ ನೇಮಕಾತಿ) ಅಧಿನಿಯಮ - 1977ಕ್ಕೆ ತಿದ್ದುಪಡಿಯನ್ನು 2002ರಲ್ಲಿ ತರಲಾಗಿತ್ತು.

ಇನ್ಮುಂದೆ SC/ST ಗುತ್ತಿಗೆದಾರರಿಗೆ ಟೆಂಡರ್ ನಲ್ಲೂ ಮೀಸಲಾತಿಇನ್ಮುಂದೆ SC/ST ಗುತ್ತಿಗೆದಾರರಿಗೆ ಟೆಂಡರ್ ನಲ್ಲೂ ಮೀಸಲಾತಿ

5% reservation in government jobs for Kannada medium students

1-10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದವರಿಗೆ ಈ ಸೌಲಭ್ಯಗಳು ಸಿಗಲಿದ್ದು ಎಸ್ಎಸ್ಎಲ್ಸಿ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಒಂದೊಮ್ಮೆ ಹುದ್ದೆಗೆ 7ನೇ ತರಗತಿವರೆಗೆ ವಿದ್ಯಾರ್ಹತೆ ಬೇಕಾಗಿದ್ದರೆ ಅಲ್ಲಿವರೆಗಿನ ಪ್ರಮಾಣಪತ್ರವನ್ನೂ ನೀಡಿದರೂ ಸಾಕಾಗುತ್ತದೆ.

"ಕನ್ನಡ ಮಾಧ್ಯಮದಲ್ಲಿ 1-10ನೇ ತರಗತಿವರೆಗೆ ಕಲಿತ ಯಾವುದೇ ಅಭ್ಯರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ," ಎಂದು ಕರ್ನಾಟಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಇದರೊಂದಿಗೆ ಗಡಿ ಭಾಗದಲ್ಲಿ ಬೇರೆ ರಾಜ್ಯಗಳಲ್ಲಿ ಕನ್ನಡ ಕಲಿತವರಿಗೂ ಕರ್ನಾಟಕದಲ್ಲಿ ಉದ್ಯೋಗ ಸಿಗಲಿದೆ.

English summary
The state government of Karnataka extended the 5% reservation recruitment to candidates from all over India who have finished schooling entirely in the Kannada medium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X