ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ನಭಾಗ್ಯಕ್ಕೆ ಅನುದಾನ ಕಡಿತ; ಏಪ್ರಿಲ್‌ನಿಂದ 5 ಕೆ.ಜಿ. ಅಕ್ಕಿ ಮಾತ್ರ

|
Google Oneindia Kannada News

ಬೆಂಗಳೂರು, ಮಾರ್ಚ್ 06 : ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಲಾಗಿದೆ. ಏಪ್ರಿಲ್ ತಿಂಗಳಿನಿಂದ ಪ್ರತಿ ಸದಸ್ಯನಿಗೆ 7 ಕೆ. ಜಿ. ಬದಲು 5 ಕೆ. ಜಿ. ಅಕ್ಕಿಯನ್ನು ಮಾತ್ರ ನೀಡಲಾಗುತ್ತದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುರುವಾರ 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಆಹಾರ ಇಲಾಖೆಗೆ ಮೀಸಲಾಗಿಟ್ಟಿದ್ದ ಅನುದಾನದಲ್ಲಿ 1234 ಕೋಟಿ ಕಡಿತ ಮಾಡಲಾಗಿದೆ. ಇದರಿಂದಾಗಿ ಅನ್ನಭಾಗ್ಯ ಅಡಿ ನೀಡುವ ಅಕ್ಕಿಯೂ ಕಡಿತಗೊಳ್ಳಲಿದೆ.

ಮೊಟ್ಟ ಮೊದಲ ಬಾರಿಗೆ 'ಮಕ್ಕಳ' ಬಜೆಟ್: ಇತಿಹಾಸ ಸೃಷ್ಟಿಸಿದ ಬಿ.ಎಸ್.ವೈ!ಮೊಟ್ಟ ಮೊದಲ ಬಾರಿಗೆ 'ಮಕ್ಕಳ' ಬಜೆಟ್: ಇತಿಹಾಸ ಸೃಷ್ಟಿಸಿದ ಬಿ.ಎಸ್.ವೈ!

ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯನಿಗೆ ಹಂಚಿಕೆ ಮಾಡುತ್ತಿದ್ದ ಅಕ್ಕಿಯ ಪ್ರಮಾಣ 7 ರಿಂದ 5 ಕೆ. ಜಿ.ಗೆ ಇಳಿಕೆಯಾಗಿದೆ. ಆದರೆ, ಪ್ರತಿ ಕಾರ್ಡ್‌ಗೆ ತಲಾ 2 ಕೆ. ಜಿ. ಗೋಧಿ ಉಚಿತವಾಗಿ ಸಿಗಲಿದೆ.

ಅನ್ನಭಾಗ್ಯ ರದ್ದುಪಡಿಸುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆಅನ್ನಭಾಗ್ಯ ರದ್ದುಪಡಿಸುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

5 Kg Rice Under Anna Bhagya Scheme From April 1

2019-20ನೇ ಬಜೆಟ್‌ನಲ್ಲಿ ಆಹಾರ ಇಲಾಖೆಗೆ 3900 ಕೋಟಿ ಅನುದಾನ ನೀಡಲಾಗಿತ್ತು. ಆದರೆ, 2020-21ರಲ್ಲಿ 2666 ಕೋಟಿ ರೂ. ಅನುದಾನವನ್ನು ಮಾತ್ರ ಮೀಸಲಾಗಿಡಲಾಗಿದೆ.

ಮಂಗಳೂರಿನಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ: ಅಕ್ರಮ ಸಾಗಾಟ ಬಯಲು ಮಂಗಳೂರಿನಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ: ಅಕ್ರಮ ಸಾಗಾಟ ಬಯಲು

ಅನ್ನಭಾಗ್ಯ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಮಹತ್ವದ ಯೋಜನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅಕ್ಕಿ ಕಡಿತಗೊಳಿಸುವ ಪ್ರಸ್ತಾವನೆ ಮುಂದಿಟ್ಟಾಗ ವಿರೋಧ ವ್ಯಕ್ತವಾಗಿತ್ತು.

ಕಾಂಗ್ರೆಸ್ ಸದಸ್ಯರ ತೀವ್ರ ಆಕ್ಷೇಪದ ಹಿನ್ನಲೆಯಲ್ಲಿ ಅಕ್ಕಿ ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಈ ಬಿಜೆಪಿ ಸರ್ಕಾರ ಅಕ್ಕಿಯನ್ನು ಕಡಿತಗೊಳಿಸಿದ್ದು, ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗುವ ನಿರೀಕ್ಷೆ ಇದೆ.

English summary
BPL card holders will get 5 kg of rice under Anna Bhagya scheme from April 1, 2020. Now rice distributed under Anna Bhagya scheme 7 kg per family member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X