ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿಯರಿಗೆ ಸಂಕಷ್ಟ; ರಾಗಿಣಿ, ಸಂಜನಾ 5 ದಿನ ಇಡಿ ಕಸ್ಟಡಿಗೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಡ್ರಗ್ಸ್ ಜಾಲದ ಕುರಿತ ಪ್ರಕರಣದಲ್ಲಿ ಬಂಧಿತಾಗಿದ್ದ ನಟಿಯರದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಗೆ ಹೊಸ ಸಂಕಷ್ಟ ಎದುರಾಗಿದೆ. ಇಬ್ಬರು ನಟಿಯರು ಸೇರಿದಂತೆ ಐವರು ಆರೋಪಿಗಳನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿದೆ.

ಬುಧವಾರ ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ವಿಶೇಷ ನ್ಯಾಯಾಲಯ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ರಾಹುಲ್, ವಿರೇನ್ ಖನ್ನಾ, ಬಿ. ಕೆ. ರವಿಶಂಕರ್‌ರನ್ನು 5 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಡ್ರಗ್ಸ್ ಕೇಸ್ ತನಿಖೆ; ಸಿಸಿಬಿ ಸಿಬ್ಬಂದಿಯಿಂದ ಆರೋಪಿಗೆ ಮಾಹಿತಿ ಲೀಕ್! ಡ್ರಗ್ಸ್ ಕೇಸ್ ತನಿಖೆ; ಸಿಸಿಬಿ ಸಿಬ್ಬಂದಿಯಿಂದ ಆರೋಪಿಗೆ ಮಾಹಿತಿ ಲೀಕ್!

ಡ್ರಗ್ಸ್ ಜಾಲದ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಲ್ಲರ ಜಾಮೀನು ಅರ್ಜಿಯ ವಿಚಾರಣೆ ವಿಶೇಷ ಎನ್‌ಡಿಪಿಎಸ್ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಡ್ರಗ್ಸ್ ಪ್ರಕರಣ; ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ನೋಟಿಸ್ ಡ್ರಗ್ಸ್ ಪ್ರಕರಣ; ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ನೋಟಿಸ್

ನಟಿ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿ ಇದ್ದಾಗಲೇ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸಿಸಿಬಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದರು. ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ವಿರೇನ್ ಖನ್ನಾ ವಹಿವಾಟಿನ ಬಗ್ಗೆಯೂ ಮಾಹಿತಿ ಪಡೆದಿದ್ದರು.

ಡ್ರಗ್ಸ್ ಮಾರಾಟ: ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನಡ್ರಗ್ಸ್ ಮಾರಾಟ: ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ

ಅಕ್ರಮ ಹಣ ವರ್ಗಾವಣೆ

ಅಕ್ರಮ ಹಣ ವರ್ಗಾವಣೆ

ಜಾರಿ ನಿರ್ದೇಶನಾಲಯ ಎನ್‌ಡಿಪಿಎಸ್‌ ಕೋರ್ಟ್‌ಗೆ ಆರೋಪಿಗಳು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ವಶಕ್ಕೆ ಪಡೆಯಬೇಕು ಎಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ಒಪ್ಪಿಗೆ ನೀಡಿತ್ತು. ಇಡಿ ಕೋರ್ಟ್ 5 ದಿನಗಳ ಕಾಲ ಆರೋಪಿಗಳನ್ನು ವಶಕ್ಕೆ ನೀಡಿತು.

ಆಸ್ತಿ ಖರೀದಿ, ಹೂಡಿಕೆ

ಆಸ್ತಿ ಖರೀದಿ, ಹೂಡಿಕೆ

ಇಡಿ ಅಧಿಕಾರಿಗಳು ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ರಾಹುಲ್, ವಿರೇನ್ ಖನ್ನಾ, ಬಿ. ಕೆ. ರವಿಶಂಕರ್‌ ಅವರ ಆಸ್ತಿ ಖರೀದಿ, ಹೂಡಿಕೆಗಳ ಬಗ್ಗೆ ತನಿಖೆಯನ್ನು ನಡೆಸಲಿದ್ದಾರೆ. ಜೈಲಿನಲ್ಲಿಯೇ ವಿಚಾರಣೆ ಮಾಡಲಿದ್ದಾರೆಯೇ? ಕಾದು ನೋಡಬೇಕಿದೆ.

15 ಜನರ ಬಂಧನ

15 ಜನರ ಬಂಧನ

ಡ್ರಗ್ಸ್ ಜಾಲದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಓಸ್ಸಿ ಎಂಬ ನೈಜೀರಿಯಾ ಮೂದಲ ಡ್ರಗ್ ಪೆಡ್ಲರ್ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದ್ದು, ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Recommended Video

Whatsapp ಹಳೆಯ ಸಂದೇಶಗಳು ಅಷ್ಟು ಸುಲಭವಾಗಿ ಸಿಗುತ್ತಾ ? | Oneindia Kannada
ಆರೋಪಿಗಳಿಗೆ ನ್ಯಾಯಾಂಗ ಬಂಧನ

ಆರೋಪಿಗಳಿಗೆ ನ್ಯಾಯಾಂಗ ಬಂಧನ

ಡ್ರಗ್ಸ್ ಜಾಲದ ಪ್ರಕರಣದಲ್ಲಿ ಬಂಧಿತರಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅಕೀಲ್ ನೌಶೀನ್‌ರನ್ನು ಅಕ್ಟೋಬರ್ 9ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮಂಗಳೂರಿನ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಆರು ದಿನಗಳಿಂದ ಆರೋಪಿಗಳು ಸಿಸಿಬಿ ಪೊಲೀಸರ ವಶದಲ್ಲಿದ್ದರು.

English summary
Bengaluru Enforcement Directorate special court granted the five days custody of Kannada film actresses Ragini Dwivedi and Sanjjanaa Galrani and three others. All arrested in the drugs case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X