ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

47 ಐಎಎಸ್, 7 ಐಪಿಎಸ್ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದಿಂದ ಬಡ್ತಿ

|
Google Oneindia Kannada News

ಬೆಂಗಳೂರು, ಜನವರಿ 01 : ಕರ್ನಾಟಕ ಸರ್ಕಾರ 47 ಐಎಎಸ್, 7 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದೆ. ಬಡ್ತಿ ಪಡೆದ ಎಲ್ಲಾ ಅಧಿಕಾರಿಗಳ ವೇತನ ಶ್ರೇಣಿ ಬದಲಾಗಿದ್ದು, ಆಯಾ ಇಲಾಖೆಗಳಲ್ಲಿಯೇ ಮುಂದುವರೆಯಲಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿ ಹಲವು ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಲಕ್ಷ್ಮೀ ಪ್ರಸಾದ್ ನೇಮಕದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಲಕ್ಷ್ಮೀ ಪ್ರಸಾದ್ ನೇಮಕ

47 IAS, 7 IPS officers promoted

ಹಿರಿಯ ಐಎಎಸ್ ಅಧಿಕಾರಿ ಡಿ.ವಿ.ಪ್ರಸಾದ್ ಕೇಂದ್ರ ಸೇವೆಗೆ ತೆರಳಿದ್ದಾರೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕ್ಯಾಬಿನೆಟ್ ಕಮಿಟಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಯುಪಿಎಸ್ಸಿ ವಯೋಮಿತಿ ಬದಲಾವಣೆ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆಯುಪಿಎಸ್ಸಿ ವಯೋಮಿತಿ ಬದಲಾವಣೆ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು

* ಎಸ್ಪಿ ದರ್ಜೆಯಲ್ಲಿದ್ದ ಜಾರಿ ನಿರ್ದೇಶನಾಯಲದ ಜಂಟಿ ನಿರ್ದೇಶಕ ಅಭಿಷೇಕ್ ಗೋಯಲ್, ಕರ್ನಾಟಕ ವಲಯದ ರಮಣ ಗುಪ್ತ, ಕೇಂದ್ರ ಗುಪ್ತಚರದಳದ ಜಂಟಿ ನಿರ್ದೇಶಕ ಕೌಶಲೇಂದ್ರ ಕುಮಾರ್ ಡಿಐಜಿಗಳಾಗಿ ಬಡ್ತಿ ಪಡೆದು ಕೇಂದ್ರ ಸೇವೆಯಲ್ಲಿ ಮುಂದುವರೆಯಲಿದ್ದಾರೆ.

ಬಿಜೆಪಿ ಸೇರ್ಪಡೆಯಾದ ಒಡಿಶಾ ಮಾಜಿ ಐಎಎಸ್ ಅಧಿಕಾರಿಣಿಬಿಜೆಪಿ ಸೇರ್ಪಡೆಯಾದ ಒಡಿಶಾ ಮಾಜಿ ಐಎಎಸ್ ಅಧಿಕಾರಿಣಿ

* ದಕ್ಷಿಣ ಕನ್ನಡ ಎಸ್ಪಿ ಡಾ.ಬಿ.ಆರ್.ರವಿಕಾಂತೇಗೌಡ ಅವರು ಡಿಐಜಿಯಾಗಿ ಬಡ್ತಿ ಪಡೆದಿದ್ದು, ಅಗ್ನಿ ಶಾಮಕ ದಳಕ್ಕೆ ವರ್ಗವಾಗಿದ್ದಾರೆ. ದಕ್ಷಿಣ ಕನ್ನಡ ಎಸ್ಪಿಯಾಗಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಅವರನ್ನು ನೇಮಿಸಲಾಗಿದೆ.

* ಡಿಐಜಿ ಹುದ್ದೆಯಲ್ಲಿದ್ದ ಎಚ್.ಎಸ್.ರೇವಣ್ಣ ಅವರನ್ನು ಐಜಿಪಿ ಸ್ಥಾನಕ್ಕೆ ಬಡ್ತಿ ನೀಡಿ, ಉತ್ತರ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ಐಎಎಸ್ ಅಧಿಕಾರಿಗಳು

* ಅಂಜುಂ ಪರ್ವೇಜ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದಾರೆ.

* ಇತರ ಅಧಿಕಾರಿಗಳು : ಮನೋಜ್ ಕುಮಾರ್ ಮೀನಾ, ಎ.ಬಿ.ಇಬ್ರಾಹಿಂ, ಶಿವಯೋಗಿ ಸಿ. ಕಳಸದ್, ಕೆ.ಹೇಮಜಿ ನಾಯ್ಕ್, ಮನೋನ್ ಜೈನ್, ಗುರ್ನೀತ್ ತೇಜ್, ಡಿ.ರಂದೀಪ್, ಸಲ್ಮಾ ಕೆ. ಫಾಹಿಮ್, ಬಿ.ಎಂ.ವಿಜಯ ಶಂಕರ್, ಡಾ.ಜಿ.ಸಿ.ಪ್ರಕಾಶ್, ಎನ್.ಪ್ರಸನ್ನ ಕುಮಾರ್, ಬಿ.ಪಿ.ಇಕ್ಕೇರಿ, ಎಸ್‌.ಎಸ್.ನಕುಲ್, ಪಿ.ಐ.ಶ್ರೀವಿದ್ಯಾ.

* ಎಂ.ಕನಗವಲ್ಲಿ, ಕೆ.ಬಿ.ಶಿವಕುಮಾರ್, ಡಾ.ವಿ.ರಾಮ ಪ್ರಶಾಂತ್ ಮನೋಹರ್, ವಸಿ ರೆಡ್ಡಿ, ವಿಜಯ ಜ್ಯೋತ್ನ್ಸಾ, ಎನ್.ಮಂಜುಶ್ರೀ, ಆರ್.ವಿನೋತ್ ಪ್ರಿಯಾ, .ಆರ್.ವೆಂಕಟೇಶ್ ಕುಮಾರ್, ಕೃಷ್ಣ ಬಾಜಪೈ, ಕೆ.ಎಸ್.ಮಂಜುನಾಥ್, ಎಸ್.ಬಿ.ಬೊಮ್ಮನಹಳ್ಳಿ, ಜೆ.ಎನ್. ಶಿವಮೂರ್ತಿ, ಟಿ.ವೆಂಕಟೇಶ್, ಬಿ.ರಾಮು, ಎಸ್.ಪಾಲಯ್ಯ, ಸಿ.ಪಿ.ಶೈಲಜಾ, ಎಂ,ಕೆ.ರಂಗಯ್ಯ, ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಡಿ.ಎಸ್.ರಮೇಶ್, ಜೆ.ಮಂಜುನಾಥ್, ಆರ್.ಗಿರೀಶ್, ಡಾ.ಬಿ.ಆರ್. ಮಮತಾ.

English summary
In a major reshuffle the Karnataka government has changed responsibilities of some officers of Indian Administrative Service ( IAS) and the Indian Police Service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X