ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಈ ಬಾರಿ 450 ಪಿಂಕ್ ಮತದಾನ ಕೇಂದ್ರ

By Sachhidananda Acharya
|
Google Oneindia Kannada News

ಮೈಸೂರು, ಏಪ್ರಿಲ್ 18: ಕರ್ನಾಟಕದಲ್ಲಿ ಈ ಬಾರಿ ಎಲ್ಲಾ 224 ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ಮತದಾನ ಕೇಂದ್ರಗಳನ್ನು ಚುನಾವಣಾ ಆಯೋಗ ಸ್ಥಾಪಿಸಲಿದೆ. ಈ ಹಿಂದೆ ಪಂಜಾಬ್, ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗಳಲ್ಲಿ ಇಂಥಹದ್ದೊಂದು ಕೇಂದ್ರಗಳನ್ನು ಚುನಾವಣಾ ಆಯೋಗ ಪ್ರಯೋಗಾತ್ಮಕವಾಗಿ ಜಾರಿಗೆ ತಂದಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಈ ಆಲೋಚನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತಿದೆ.

ಗ್ರಾಮೀಣ ಭಾಗದಲ್ಲಿ ಒಂದು ಕ್ಷೇತ್ರದಲ್ಲಿ ಒಂದು ಮತದಾನ ಕೇಂದ್ರ ಮತ್ತು ನಗರ ಪ್ರದೇಶದಲ್ಲಿ ಪ್ರತೀ ಕ್ಷೇತ್ರದಲ್ಲಿ ಐದು ಮತದಾನ ಕೇಂದ್ರಗಳನ್ನು ಪಿಂಕ್ ಬೂತ್ ಗಳನ್ನಾಗಿಸಲು ಆಯೋಗ ಮುಂದಾಗಿದೆ. ಒಟ್ಟು ಕರ್ನಾಟಕದಲ್ಲಿ 450 ಮತದಾನ ಕೇಂದ್ರಗಳನ್ನು ಪಿಂಕ್ ಬೂತ್ ಗಳನ್ನಾಗಿ ಪರಿವರ್ತಿಸಲು ಆಯೋಗ ಸಜ್ಜಾಗಿದೆ. ಈ ಬೂತ್ ಗಳಿಗೆ 'ಸಖಿ ಪಿಂಕ್ ಬೂತ್' ಎಂದು ಆಯೋಗ ಹೆಸರಿಟ್ಟಿದೆ.

450 polling booths to turn pink in Karnataka

ಚುನಾವಣಾ ಆಯೋಗ ಈಗಾಗಲೇ ಪಿಂಕ್ ಬೂತ್ ಗಳ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನೂ ಪ್ರಸಾರ ಮಾಡುತ್ತಿದೆ. ಈ ಜಾಹೀರಾತಿನಲ್ಲಿ ಬೂತ್ ನ ಒಳಭಾಗದಲ್ಲಿ ಪಿಂಕ್ ಬಣ್ಣವನ್ನು ಬಳಸಲಾಗಿದೆ ಮತ್ತು ಸಿಬ್ಬಂದಿಗಳೂ ಪಿಂಕ್ ಬಟ್ಟೆ ಧರಿಸಿದ್ದಾರೆ.

ಪಿಂಕ್ ಬೂತ್ ಗಳಲ್ಲಿ ಭದ್ರತಾ ಸಿಬ್ಬಂದಿಗಳೂ ಮಹಿಳೆಯರೇ ಆಗಿರುತ್ತಾರೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಹೆಚ್ಚೆಚ್ಚು ಮಹಿಳೆಯರನ್ನು ಮತದಾನದತ್ತ ಆಕರ್ಷಿಸುವುದು ಪಿಂಕ್ ಬೂತ್ ನ ಉದ್ದೇಶ ಎಂದು ಚುನಾವಣಾ ಆಯೋಗ ಹೇಳಿದೆ.

English summary
There will be about 450 Sakhi Pink Booths – all women polling stations in the upcoming assembly elections. In these booths, supervisory officers, police officers and security personnel will be women. Bringing women to the centre stage to make democracy win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X